ಕೊವಿಡ್ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುವ ಪೋಸ್ಟ್​ಗಳನ್ನು ತೆಗೆದು ಹಾಕಲು ಸಾಮಾಜಿಕ ಮಾಧ್ಯಮಗಳಿಗೆ ಐಟಿ ಸಚಿವಾಲಯ ಸೂಚನೆ

Covid 19: ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ ಮತ್ತು ಫೆಬ್ರವರಿಯಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಕೆಲವು ಟ್ವೀಟ್​ಗಳನ್ನು ತೆಗೆದು ಹಾಕಲು ಐಟಿ ಸಚಿವಾಲಯ ಟ್ವಿಟರ್ ಸಂಸ್ಥೆಗೆಹೇಳಿದ್ದರೂ ,ಪ್ರಸ್ತುತ ಸಂಸ್ಥೆ ಅದನ್ನು ನಿರಾಕರಿಸಿತ್ತು.

ಕೊವಿಡ್ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುವ ಪೋಸ್ಟ್​ಗಳನ್ನು ತೆಗೆದು ಹಾಕಲು ಸಾಮಾಜಿಕ ಮಾಧ್ಯಮಗಳಿಗೆ ಐಟಿ ಸಚಿವಾಲಯ ಸೂಚನೆ
ಟ್ವಿಟ್ಟರ್
Follow us
ರಶ್ಮಿ ಕಲ್ಲಕಟ್ಟ
|

Updated on: Apr 25, 2021 | 4:12 PM

ದೆಹಲಿ: ಕೊವಿಡ್ 19 ನಿಯಮಾವಳಿ ಬಗ್ಗೆ ತಪ್ಪು ಮಾಹಿತಿ, ಕೋಮು ದ್ವೇಷ ಹಬ್ಬಿಸುವ ಪೋಸ್ಟ್ ಗಳು, ಅನಗತ್ಯ ಮತ್ತು ಹಳೆಯ ಪೋಸ್ಟ್, ವಿಷಯಕ್ಕೆ ಸಂಬಂಧವೇ ಇರದ ಪೋಸ್ಟ್- ಹೀಗೆ ಸುಮಾರು 100 ಪೋಸ್ಟ್​ಗಳು ಸಾಮಾಜಿಕ ಮಾಧ್ಯಮಗಳಿದ್ದು ಇವುಗಳನ್ನು ತೆಗೆದು ಹಾಕುವಂತೆ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ (MeitY) ಟ್ವಿಟರ್,ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂಗೆ ಸೂಚಿಸಿದೆ ಎಂದು ಐಟಿ ಸಚಿವಾಲಯದ ಮೂಲಗಳು ಹೇಳಿವೆ.

ಇಡೀ ದೇಶ ಕೊವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಧೈರ್ಯವಾಗಿ ಹೋರಾಟ ನಡೆಸುತ್ತಿರುವಾಗ, ಕೆಲವರು ಭೀತಿ ಉಂಟುಮಾಡಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಪೋಸ್ಟ್​ಗಳಿಂದಾಗಿ ಸಾಂಕ್ರಾಮಿಕ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ವಿರುದ್ಧವಾಗಿ ನಡೆಯುವ ಅಡೆತಡೆಗಳನ್ನು ತಡೆಗಟ್ಟಲು ಈ URL ಗಳನ್ನು (uniform resource locator) ತೆಗೆದುಹಾಕುವಂತೆ ಸಚಿವಾಲಯ ಕೇಳಿದೆ ಎಂದು ಐಟಿ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

ಕಳೆದ ಒಂದು ತಿಂಗಳಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಕ ಕೇಂದ್ರ ಸರ್ಕಾರವು ರದ್ದು ಮಾಡಿದ 50 ಕ್ಕೂ ಹೆಚ್ಚು ಟ್ವೀಟ್‌ಗಳನ್ನು ತೆಗೆದು ಹಾಕಿದೆ ಅಥವಾ ನಿರ್ಬಂಧಿಸಿದೆ ಎಂದು ಟ್ವಿಟರ್ ವರದಿ ಮಾಡಿದ ಒಂದು ದಿನದ ನಂತರ ಐಟಿ ಸಚಿವಾಲಯ ಈ ಕ್ರಮ ಕೈಗೊಂಡಿದೆ.

ಜಾಗತಿಕ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಈ ಮಾಹಿತಿಯನ್ನು ಲುಮೆನ್ ಡೇಟಾಬೇಸ್‌ಗೆ ಸಲ್ಲಿಸಿದೆ. ಇದು ಸ್ವತಂತ್ರ ಅಧ್ಯಯನ ಯೋಜನೆಯಾಗಿದ್ದು ಅದು ಆನ್‌ಲೈನ್ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ , ಅವುಗಳನ್ನು ನಿಯಂತ್ರಿಸುತ್ತದೆ.

ಲುಮೆನ್ ಡೇಟಾಬೇಸ್‌ನಲ್ಲಿ ಟ್ವಿಟರ್ ಸಲ್ಲಿಸಿದ ಮಾಹಿತಿಯ ಪ್ರಕಾರ, ಭಾರತದಲ್ಲಿ ಈಗ ನಿರ್ಬಂಧಿಸಲಾಗಿರುವ ಕೆಲವು ಯುಆರ್‌ಎಲ್‌ಗಳು, ಕೊವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಬಗ್ಗೆ ಮಾಹಿತಿಯನ್ನು ಒಳಗೊಂಡಿವೆ. ಇವುಗಳ ಕೊವಿಡ್ ಪ್ರಕರಣಗಳನ್ನು ಸರ್ಕಾರ ನಿರ್ವಹಿಸುತ್ತಿರುವ ಬಗ್ಗೆ ಟೀಕೆ ಮಾಡಿವೆ. ಮತ್ತೊಂದೆಡೆ, ಇತರ ಕೆಲವು ಪೋಸ್ಟ್‌ಗಳು ಮತ್ತು ಯುಆರ್‌ಎಲ್‌ಗಳು ಛತ್ತೀಸಗಡದಲ್ಲಿ ಇತ್ತೀಚೆಗೆ ನಡೆದ ಮಾವೋವಾದಿಗಳು ನಡೆಸಿದ ದಾಳಿ ಚಿತ್ರಗಳು ಮತ್ತು ವಿಡಿಯೊಗಳನ್ನು ತೋರಿಸುತ್ತಿರುವವಗಳಾಗಿವೆ.ಈ ದಾಳಿಯಲ್ಲಿ ದರಿಂದಾಗಿ 22 ಮಂದಿ ಪೊಲೀಸ್ ಸಿಬ್ಬಂದಿ ಸಾವಿಗೀಡಾಗಿದ್ದರು.

ಪ್ರಮುಖ ದಿನಪತ್ರಿಯೊಂದರ ಪತ್ರಕರ್ತ, ಚಲನಚಿತ್ರ ನಿರ್ಮಾಪಕ, ಸಂಸತ್ ಸದಸ್ಯ, ಶಾಸಕ ಮತ್ತು ನಟರು ಟ್ವೀಟ್ ಮಾಡಿದ್ದು, ಈ ಎಲ್ಲಾ ಟ್ವೀಟ್‌ಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ ಅಂದರೆ ದೇಶದ ಟ್ವಿಟರ್ ಬಳಕೆದಾರರು ಈ ಟ್ವೀಟ್​ಗಳನ್ನು ನೋಡಲು ಸಾಧ್ಯವಾಗುವುದಿಲ್ಲ.

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ ಮತ್ತು ಫೆಬ್ರವರಿಯಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಕೆಲವು ಟ್ವೀಟ್ ಗಳನ್ನು ತೆಗೆದು ಹಾಕಲು ಐಟಿ ಸಚಿವಾಲಯ ಟ್ವಿಟರ್ ಸಂಸ್ಥೆಗೆ ಹೇಳಿದ್ದರೂ ,ಪ್ರಸ್ತುತ ಸಂಸ್ಥೆ ಅದನ್ನು ನಿರಾಕರಿಸಿತ್ತು.

ಸಚಿವಾಲಯ ಹೇಳಿದರೂ ಟ್ವೀಟ್​ಗಳನ್ನು ಯಾಕೆ ತೆಗೆದು ಹಾಕಿಲ್ಲ ಎಂಬುದಕ್ಕೆ ಟ್ವಿಟರ್ ವಿವರಣೆ ನೀಡಿತ್ತು . ಆದಾಗ್ಯೂ, ಸರ್ಕಾರದ ಆದೇಶಗಳನ್ನು ಧಿಕ್ಕರಿಸಿದ್ದಕ್ಕೆ ಐಟಿ ಸಚಿವಾಲಯ ಕೋಪಗೊಂಡಿತ್ತು. ವೇದಿಕೆಯನ್ನು ಸರಿಯಾಗಿ ನಿರ್ವಹಿಸದೇ ಇದ್ದರೆ ಟ್ವಿಟರ್ ಇಂಡಿಯಾ ಉದ್ಯೋಗಿಗಳನ್ನು ಜೈಲಿಗೆ ಹಾಕುವುದಾಗಿ ಸಚಿವಾಲಯ ಬೆದರಿಕೆಯೊಡ್ಡಿತ್ತು. ಅಷ್ಟರಲ್ಲಿ ತಮ್ಮ ಬಿಗಿಪಟ್ಟನ್ನು ಸಡಿಲಗೊಳಿಸಿದ ಟ್ವಿಟರ್ ಇಂಡಿಯಾ,ಸರ್ಕಾರ ಹೇಳಿದ ಶೇ95 ರಷ್ಟು ಮನವಿಗಳನ್ನು ಪರಿಗಣಿಸಿದ್ದೇವೆ ಎಂದಿತ್ತು.

ಅಂತಹ 257 ಖಾತೆಗಳ ಮೊದಲ ಪಟ್ಟಿಯನ್ನು ಜನವರಿ 31 ರಂದು ಸಚಿವಾಲಯ ಕಳುಹಿಸಿತ್ತು. ಆಮೇಲೆ ಸುಮಾರು 1,200 ಖಾತೆಗಳ ಮತ್ತೊಂದು ಪಟ್ಟಿಯನ್ನು ಕಳುಹಿಸಲಾಗಿತ್ತು. ಐಟಿ ಸಚಿವಾಲಯ ಕಳುಹಿಸಿದ ಎರಡೂ ಪಟ್ಟಿಗಳು ಈ ಟ್ವಿಟ್ಟರ್ ಹ್ಯಾಂಡಲ್‌ಗಳು ರೈತರ ಪ್ರತಿಭಟನೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿವೆ ಎಂದು ಹೇಳಿಕೊಂಡಿದ್ದು, ಇದು ದೇಶದ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಿ ಸನ್ನಿಹಿತ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಹೇಳಿತ್ತು.

ಟ್ವಿಟರ್ ಕೆಲವು ಖಾತೆಗಳನ್ನು ಬ್ಲಾಕ್ ಮಾಡಿ ಅವುಗಳನ್ನು ಅನ್ ಬ್ಲಾಕ್ ಮಾಡಿದ್ದು ಐಟಿ ಸಚಿವಾಲಯವನ್ನು ಕೆರಳಿಸಿತ್ತು. ಸರ್ಕಾರ ತೆಗೆದುಹಾಕಲು ಹೇಳಿರುವ ಮಾಹಿತಿಗಳನ್ನು ತಮ್ಮ ವೇದಿಕೆ ಸಾಧ್ಯವಾದಷ್ಟು ತ್ವರಿತವಾಗಿ ಪರಿಶೀಲಿಸುತ್ತದೆ. ಕಂಪನಿಯ ಮೂಲಭೂತ ಮೌಲ್ಯಗಳು ಮತ್ತು ಸಾರ್ವಜನಿಕ ಸಂಭಾಷಣೆಯನ್ನು ರಕ್ಷಿಸುವ ಬದ್ಧತೆಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಟ್ವಿಟರ್ ಹೇಳಿತ್ತು .

ಇದನ್ನೂ  ಓದಿ: IPL 2021: ಟ್ವಿಟರ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಎಡವಟ್ಟು; Well Payed KKR ಎಂದ ಧೋನಿ ಟೀಂ!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್