April Fool’s Day: ಮೂರ್ಖರ ದಿನವಾದ ಇಂದು ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ ನ್ಯಾಷನಲ್ ಜುಮ್ಲಾ ಡೇ ಹ್ಯಾಷ್ಟ್ಯಾಗ್; ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವ್ಯಂಗ್ಯ
ಅಚ್ಛೆ ದಿನ್, ಜಿಡಿಪಿ ಬೆಳವಣಿಗೆ, ನೀರಾವರಿ, ರೈತರ ಆದಾಯ ದ್ವಿಗುಣ, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ಮುಕ್ತ ದೇಶ.. ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜುಮ್ಲಾಗಳು. ಬನ್ನಿ ನಾವಿವತ್ತು ಅಂದರೆ ಏಪ್ರಿಲ್ 1ನ್ನು ರಾಷ್ಟ್ರೀಯ ಜುಮ್ಲಾದಿನವನ್ನಾಗಿ ಆಚರಿಸೋಣ ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
ಏಪ್ರಿಲ್ 1ನೇ ತಾರೀಖೆಂದರೆ ಮೂರ್ಖರ ದಿನ. ಈ ದಿನ ಒಬ್ಬರು ಇನ್ನೊಬ್ಬರನ್ನು ಆರೋಗ್ಯಕರವಾಗಿ ಪ್ರ್ಯಾಂಕ್ ಮಾಡುತ್ತಾರೆ. ಕಾಲೆಳೆದು ಮಜಾ ತೆಗೆದುಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರನ್ನು, ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಲು ಈ ದಿನವನ್ನು ಬಳಸಿಕೊಳ್ಳುತ್ತಿದೆ. 2019ರ ಏಪ್ರಿಲ್ 1ರಂದು ಕಾಂಗ್ರೆಸ್, ಫೇಕು ದಿವಸ್, ಮೋದಿ ಮತ್ ಬನಾವೋ ಎಂಬ ಹ್ಯಾಷ್ಟ್ಯಾಗ್ನಡಿ ಮೋದಿಯವರನ್ನು ಟೀಕೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಬಿಜೆಪಿ, ಪಪ್ಪು ದಿವಸ್ ಎಂಬ ಹ್ಯಾಷ್ಟ್ಯಾಗ್ನಡಿ ರಾಹುಲ್ ಗಾಂಧಿಯವರನ್ನು ವ್ಯಂಗ್ಯ ಮಾಡಿತ್ತು. ಹಾಗೇ, ಈ ಬಾರಿ ಇಂದು ನ್ಯಾಷನಲ್ ಜುಮ್ಲಾ ಡೇ ಎಂಬ ಹ್ಯಾಷ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ. ಜುಮ್ಲಾ ಎಂದರೆ ಸುಳ್ಳು ಆಶ್ವಾಸನೆಗಳು ಎಂದರ್ಥ.
ಈ ಜುಮ್ಲಾ ಎಂಬ ಪದವನ್ನು ಫೇಮಸ್ ಮಾಡಿದ್ದೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ. 2018ರಲ್ಲಿ ಲೋಕಸಭೆಯಲ್ಲಿ ಮೋದಿ ವಿರುದ್ಧ ಮಾತನಾಡುತ್ತ ಜುಮ್ಲಾ ಶಬ್ದವನ್ನು ಬಳಸಿದ್ದರು. ಇಂದು ಏಪ್ರಿಲ್ 1ರ ಮೂರ್ಖರ ದಿನದಂದು ಮತ್ತೆ ನ್ಯಾಷನಲ್ ಜುಮ್ಲಾ ಡೇ ಎಂಬ ಹ್ಯಾಷ್ಟ್ಯಾಗ್ ಮೂಲಕ ಜನಸಾಮಾನ್ಯರೂ ಸಹ ಬಿಜೆಪಿ ಸರ್ಕಾರವನ್ನು ಹಾಸ್ಯ ಮಾಡುತ್ತಿದ್ದಾರೆ. ಬಿಜೆಪಿ, ಮೋದಿ, ಅಮಿತ್ ಶಾ ಸೇರಿ ಹಲವು ನಾಯಕರನ್ನು ವ್ಯಂಗ್ಯ ಮಾಡುವ ಸಾವಿರಾರು ಮೀಮ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ. ವಿದೇಶದಲ್ಲಿ ಭಾರತದ ಕೆಲವರು ಕೂಡಿಟ್ಟಿರುವ ಕಪ್ಪುಹಣವನ್ನು ವಾಪಸ್ ತಂದು, ಪ್ರತಿಯೊಬ್ಬರ ಖಾತೆಗೆ ಹಾಕುತ್ತೇವೆ ಎಂಬ ಮೋದಿಯವರ ಹೇಳಿಕೆಯಿಂದ ಹಿಡಿದು, ಮಹಿಳಾ ಸುರಕ್ಷತೆ, ಖಾಸಗೀಕರಣ..ದಂತಹ ಹತ್ತುಹಲವು ವಿಷಯಗಳನ್ನು ಇಂದು ನೆಟ್ಟಿಗರು ಟ್ವಿಟರ್ನಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಅಚ್ಛೆ ದಿನ್, ಜಿಡಿಪಿ ಬೆಳವಣಿಗೆ, ನೀರಾವರಿ, ರೈತರ ಆದಾಯ ದ್ವಿಗುಣ, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ಮುಕ್ತ ದೇಶ.. ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜುಮ್ಲಾಗಳು. ಬನ್ನಿ ನಾವಿವತ್ತು ಅಂದರೆ ಏಪ್ರಿಲ್ 1ನ್ನು ರಾಷ್ಟ್ರೀಯ ಜುಮ್ಲಾದಿನವನ್ನಾಗಿ ಆಚರಿಸೋಣ ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ. ಹಾಗೇ, ಕಾಂಗ್ರೆಸ್ನ ರಾಷ್ಟ್ರೀಯ ಸಮನ್ವಯಾಧಿಕಾರಿ ಗೌರವ್ ಪಾಂಡಿ, ರಾಷ್ಟ್ರೀಯ ಅಭಿಯಾನ ಉಸ್ತುವಾರಿ ಶ್ರೀವತ್ಸಾ ಕೂಡ ನ್ಯಾಷನಲ್ ಜುಮ್ಲಾ ಡೇ ಹ್ಯಾಷ್ಟ್ಯಾಗ್ನಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರನ್ನು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಸದಾ ಒಂದಿಲ್ಲೊಂದು ಕಾರಣಕ್ಕೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಂಗ್ಯ ಮಾಡುತ್ತಲೇ ಬಂದಿದೆ. ಈ ಹಿಂದೆ ಸೆಪ್ಟೆಂಬರ್ 17- ಪ್ರಧಾನಿ ಮೋದಿಯವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಹೇಳಿತ್ತು.
*Achhe Din *GDP growth *Irrigation to every farm *Double the incomes of farmers *Women’s Safety *Relief from Corruption
Above are Jumlas of Modi Govt.
Lets celebrate 1st April as #NationalJumlaDay
— Kisan Ekta Morcha (@Kisanektamorcha) April 1, 2021
Modi Govt should realise that just like their decision on ‘interest rates’, Farm Laws too were an oversight and must be rolled back with immediate effect. #NationalJumlaDay #GlobalFekuDay
— Gaurav Pandhi (@GauravPandhi) April 1, 2021
Modiji, can you please ask Nirmala to reverse Petrol & Diesel prices to ₹70 through Oversight? #NationalJumlaDay
— Srivatsa (@srivatsayb) April 1, 2021
Happy birthday to greatest scientists of all time. The person who invented Radar theory, extra 2ab formula, turbine theory, Gobar gas innovation and many more. pic.twitter.com/qQtT1Vj8JT
— Rhea Chakraborty (Parody) (@Tweet2_Rhea) April 1, 2021
#मोदी_दिवस April Fools Day Award goes to Modi who has been fooling 135 crore people for 8 years continuously. #NationalJumlaDay #मोदी_दिवस @HansrajMeena @yashmeghoffice pic.twitter.com/8dwBMUXkEm
— Rajesh Kumar #NoVoteToBJP (@RajeshBilung03) April 1, 2021
No matter how hard you try, you cannot defeat Modi in lies! #NationalJumlaDay #FarmersProtest pic.twitter.com/1Ebh5vQve4
— Jaspreet Dhaliwal (@jasdhaliwal349) April 1, 2021
Published On - 2:59 pm, Thu, 1 April 21