AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​-19 ಕಾರಣಕ್ಕೆ ಸಿಗದ ರಜಾ; ಠಾಣೆಯಲ್ಲೇ ನಡೆಯಿತು ಮಹಿಳಾ ಪೊಲೀಸ್ ಅರಿಶಿಣ ಶಾಸ್ತ್ರ

ಈ ಮಹಿಳಾ ಕಾನ್​ಸ್ಟೆಬಲ್ ಡುಂಗುರ್​ಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಇವರಿಗೆ ಅರಿಶಿಣ ಶಾಸ್ತ್ರ ಕಾರ್ಯಕ್ರಮಕ್ಕೆ ರಜಾ ಸಿಕ್ಕಿರಲಿಲ್ಲ.

ಕೊವಿಡ್​-19 ಕಾರಣಕ್ಕೆ ಸಿಗದ ರಜಾ; ಠಾಣೆಯಲ್ಲೇ ನಡೆಯಿತು ಮಹಿಳಾ ಪೊಲೀಸ್ ಅರಿಶಿಣ ಶಾಸ್ತ್ರ
ಮಹಿಳಾ ಪೊಲೀಸ್​ ಕಾನ್​ಸ್ಟೆಬಲ್​ ಅರಿಶಿಣ ಶಾಸ್ತ್ರ
Follow us
Lakshmi Hegde
|

Updated on:Apr 24, 2021 | 5:22 PM

ಕೊರೊನಾ ಸಾಂಕ್ರಾಮಿಕ ಭೂಮಿಗೆ ಕಾಲಿಟ್ಟಾಗಿನಿಂದ ಪೊಲೀಸ್, ಆರೋಗ್ಯ ಸಿಬ್ಬಂದಿ ಸೇರಿ ಹಲವು ಕ್ಷೇತ್ರದ ಸಿಬ್ಬಂದಿ ಮುಂಚೂಣಿಯಲ್ಲಿದ್ದುಕೊಂಡು, ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ನಾಗರಿಕರ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಅದರಲ್ಲೂ ಈಗ ಶುರುವಾಗಿರುವ ಕೊರೊನಾ ಎರಡನೇ ಅಲೆಯಲ್ಲಿ ಕೊವಿಡ್​ ವಾರಿಯರ್ಸ್​ ಮೇಲೆ ಇನ್ನೂ ಜಾಸ್ತಿ ಒತ್ತಡವೇ ಇದೆ. ರಜೆ, ವಿಶ್ರಾಂತಿ ಸಿಗುತ್ತಿಲ್ಲ. ಹೀಗಿರುವಾಗ ರಾಜಸ್ಥಾನದ ಮಹಿಳಾ ಕಾನ್​ಸ್ಟೆಬಲ್​ ಒಬ್ಬರು ಮದುವೆಯ ಅರಿಶಿಣ ಶಾಸ್ತ್ರಕ್ಕೆ ರಜೆ ಸಿಗದೆ, ಪೊಲೀಸ್​ ಠಾಣೆಯಲ್ಲೇ ಈ ಕಾರ್ಯಕ್ರಮ ಮಾಡಿಸಿಕೊಂಡಿದ್ದಾರೆ.

ಈ ಮಹಿಳಾ ಕಾನ್​ಸ್ಟೆಬಲ್ ಡುಂಗುರ್​ಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಇವರಿಗೆ ಅರಿಶಿಣ ಶಾಸ್ತ್ರ ಕಾರ್ಯಕ್ರಮಕ್ಕೆ ರಜಾ ಸಿಕ್ಕಿರಲಿಲ್ಲ. ಹಾಗಾಗಿ ತಾವು ಕೆಲಸ ಮಾಡುವ ಠಾಣೆಯಲ್ಲೇ ಈ ಶಾಸ್ತ್ರ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

ವಾಗಾದ್ ದರ್ಶನ್​ ಎಂಬ ಫೇಸ್​​ಬುಕ್​ ಪೇಜ್​ನಲ್ಲಿ ವಿಡಿಯೋ ಶೇರ್ ಆಗಿದ್ದು, ಅದರಲ್ಲಿ ಉಳಿದ ಮಹಿಳಾ ಕಾನ್​ಸ್ಟೆಬಲ್​​ಗಳೆಲ್ಲ ಸೇರಿ, ಇವರಿಗೆ ಅರಿಶಿಣ ಶಾಸ್ತ್ರ ನೆರವೇರಿಸುವುದನ್ನು ನೋಡಬಹುದು. ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ, ಕಾನ್​ಸ್ಟೆಬಲ್ ಮುಖ, ಕೈಕಾಲುಗಳಿಗೆ ಅರಿಶಿಣ ಹಚ್ಚಿದ್ದಾರೆ. ಹಾಗೇ ಮದುಮಗಳು ಹಳದಿ ಬಣ್ಣದ ಚೂಡಿದಾರ್ ಧರಿಸಿ, ಕೆಂಪು ದುಪ್ಪಟ್ಟಾ ಹೊದ್ದಿದ್ದಾರೆ.

ವಿಶೇಷವೆಂದರೆ ಈ ಆಚರಣೆಯಲ್ಲಿ ಪುರುಷ ಪೊಲೀಸರೂ ಕೂಡ ಖುಷಿಯಿಂದ ಭಾಗವಹಿಸಿದ್ದಾರೆ. ಮಧುಮಗಳು ಕುಳಿತ ಕುರ್ಚಿಯನ್ನು ಎತ್ತಿ, ಮೇಲೆ-ಕೆಳಗೆ ಮಾಡುತ್ತ ಸಾಂಪ್ರದಾಯಿಕ ಹಾಡನ್ನೂ ಹಾಡಿದ್ದಾರೆ. ಅದೇನೇ ಇರಲಿ ವಿಡಿಯೋ ನೋಡಿದ ನೆಟ್ಟಿಗರು ತುಂಬ ಖುಷಿ ವ್ಯಕ್ತಪಡಿಸಿದ್ದಾರೆ. ಸದ್ಯ ದೇಶದಲ್ಲಿ ಎಲ್ಲ ರಾಜ್ಯಗಳೂ ಕೊರೊನಾ ಎರಡನೇ ಅಲೆಗೆ ತತ್ತರಿಸಿವೆ. ಇಂದು ಒಂದೇ ದಿನ 3.46 ಲಕ್ಷಕ್ಕೂ ಅಧಿಕ ಕೇಸ್​ಗಳು ದಾಖಲಾಗಿವೆ. ಮೊದಲನೇ ಬಾರಿಗೆ ಕಾಲಿಟ್ಟ ವೈರಸ್​​ಗಿಂತಲೂ, ಈ ಬಾರಿ ಇನ್ನೂ ವೇಗವಾಗಿ, ಮಾರಣಾಂತಿಕವಾಗಿ ಕೊರೊನಾ ವೈರಸ್ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಇತರ ಲಸಿಕೆಗೆಳಿಗೆ ಹೋಲಿಸಿದರೆ ಕೊವಿಶೀಲ್ಡ್ ಲಸಿಕೆ ಬೆಲೆ ಕಡಿಮೆಯಿದೆ; ಅದಾರ್ ಪೂನಾವಲಾ

ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ; ಕೊವಿಡ್​ನಿಂದ ಆಪ್ತನನ್ನು ಕಳೆದುಕೊಂಡು ಕಣ್ಣೀರಿಟ್ಟ ನಟ ಅನಿರುದ್ಧ್​​

Published On - 5:20 pm, Sat, 24 April 21

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!