Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾಮಿತ್ವ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ; ಕೊರೊನಾ ಸೋಂಕು ಹಳ್ಳಿಗಳಿಗೆ ಕಾಲಿಡದಂತೆ ತಡೆಯೋಣವೆಂದು ಮನವಿ

ಸದ್ಯ ಹಳ್ಳಿಗಳಲ್ಲಿ ಔಷಧ ಮತ್ತು ಎಚ್ಚರಿಕೆ ಎಂಬುದೇ ಮಂತ್ರವಾಗಿರಬೇಕು. ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಯನ್ನು ಹಳ್ಳಿಗಲ್ಲೂ ಸರಿಯಾಗಿ ಪಾಲನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಸ್ವಾಮಿತ್ವ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ; ಕೊರೊನಾ ಸೋಂಕು ಹಳ್ಳಿಗಳಿಗೆ ಕಾಲಿಡದಂತೆ ತಡೆಯೋಣವೆಂದು ಮನವಿ
ಪ್ರಧಾನಿ ನರೇಂದ್ರ ಮೋದಿ
Follow us
Lakshmi Hegde
|

Updated on:Apr 24, 2021 | 4:48 PM

ದೆಹಲಿ: ಕಳೆದ ವರ್ಷಕ್ಕಿಂತಲೂ ಈ ವರ್ಷ ಕೊರೊನಾ ಸೋಂಕಿನ ಸವಾಲು ತುಂಬ ಹೆಚ್ಚಾಗಿದೆ. ನಾವು ಹೇಗಾದರೂ ಸರಿ ಹಳ್ಳಿಗಳಿಗೆ ಕೊರೊನಾ ವೈರಸ್ ಕಾಲಿಡುವುದನ್ನು ತಡೆಯಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಸ್ವಾಮಿತ್ವ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಇ-ಪ್ರಾಪರ್ಟಿ ಕಾರ್ಡ್ ವಿತರಿಸುವ ಯೋಜನೆ ಇದಾಗಿದ್ದು, ಇದರಿಂದಾಗಿ ಹಳ್ಳಿಗಳಲ್ಲಿ ಭ್ರಷ್ಟಾಚಾರ ಪ್ರಮಾಣ ಕಡಿಮೆಯಾಗಲಿದೆ ಎಂದು ನರೇಂದ್ರ ಮೋದಿ ತಿಳಿಸಿದರು.

ಕಳೆದ ವರ್ಷ ಕೊರೊನಾ ಹಳ್ಳಿಗಳಿಗೆ ಪಸರಿಸುವುದನ್ನು ಯಶಸ್ವಿಯಾಗಿ ತಡೆಗಟ್ಟಲಾಗಿತ್ತು. ಈ ಬಾರಿಯೂ ಅದನ್ನು ಮಾಡಬೇಕು. ಸ್ಥಳೀಯ ಆಡಳಿತಗಳಿಗೆ ಕೊರೊನಾ ಸೋಂಕಿನ ವಿರುದ್ಧ ಹೋರಾಡಿದ ಅನುಭವ, ರೂಪಿಸಬೇಕಾದ ಯೋಜನೆಗಳ ಬಗ್ಗೆ ಗೊತ್ತಿರುವುದರಿಂದ ಈ ಬಾರಿಯೂ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಮೊದಲು ಗೆಲ್ಲುವುದು ಭಾರತದ ಹಳ್ಳಿಗಳೇ ಆಗಲಿವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಸದ್ಯ ಹಳ್ಳಿಗಳಲ್ಲಿ ಔಷಧ ಮತ್ತು ಎಚ್ಚರಿಕೆ ಎಂಬುದೇ ಮಂತ್ರವಾಗಿರಬೇಕು. ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಯನ್ನು ಹಳ್ಳಿಗಲ್ಲೂ ಸರಿಯಾಗಿ ಪಾಲನೆ ಮಾಡಬೇಕು. ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದಾಗಿ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಪ್ರತಿವರ್ಷ ಏಪ್ರಿಲ್​ 24ರಂದು ರಾಷ್ಟ್ರೀಯ ಪಂಚಾತ್​ ರಾಜ್​ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಸಕ್ತ ವರ್ಷ ಕೂಡ ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಾಮಿತ್ವ ಇ ಪ್ರಾಪರ್ಟಿ ಕಾರ್ಡ್​ ವಿತರಣಾ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಈ ಯೋಜನೆಯಡಿಲ್ಲಿ 4.09 ಲಕ್ಷ ಮಂದಿ ಇ-ಪ್ರಾಪರ್ಟಿ ಕಾರ್ಡ್ ಪಡೆಯಲಿದ್ದಾರೆ. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆ ಉದ್ಘಾಟಿಸಿದ ಪ್ರಧಾನಿ, ಹಳ್ಳಿಗಳು ಮತ್ತು ಪಂಚಾಯಿತಿಗಳು ನಮ್ಮ ಪ್ರಬಲ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಘಟಕಗಳು. ಆತ್ಮ ನಿರ್ಭರ ಭಾರತ್​ ಸಾಧನೆಗೆ ಗ್ರಾಮಗಳು ಆಧಾರವಾಗಿವೆ ಎಂದು ಹೇಳಿದರು.

ಇದನ್ನೂ ಓದಿ: ಕ್ರಿಕೆಟ್ ಅವಘಡ: ಪಾಕ್ ವೇಗಿಯ ಘಾತಕ ಎಸೆತಕ್ಕೆ ಜಿಂಬಾಬ್ವೆ ಆಟಗಾರನ ಹೆಲ್ಮೆಟ್​ ಪುಡಿಪುಡಿ! ವಿಡಿಯೋ ನೋಡಿ

ಅಮೃತ್​ಸರ್​ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಆರು ರೋಗಿಗಳು ಸಾವು

Published On - 4:42 pm, Sat, 24 April 21