ಬೆಂದ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡಬಾರದು: ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ಮನವಿ

ಕೊರೊನಾ ವಿಚಾರದಲ್ಲಿ ಸಿಎಂ ಹುಡುಗಾಟ ಮಾಡಬಾರದು. ಪ್ರತಿನಿತ್ಯ ಸಭೆಗಳನ್ನು ಮಾಡಿ ಸಮಯ ವ್ಯರ್ಥ ಮಾಡಬೇಡಿ. ಆಕ್ಸಿಜನ್ ಕೊರತೆ ಬಗ್ಗೆ ಆರೋಗ್ಯ ಸಚಿವರೇ ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಬೆಡ್ ಬ್ಲಾಕ್ ದಂಧೆ ಎನ್ನುವುದೇ ಡ್ರಾಮಾ. ಚಾಮರಾಜಗರದ ಘಟನೆ ಮರೆಮಾಚಲು ಹೀಗೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಂದ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡಬಾರದು: ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ಮನವಿ
ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ
Follow us
sandhya thejappa
| Updated By: Digi Tech Desk

Updated on:May 11, 2021 | 10:08 PM

ಮಂಡ್ಯ: ಚಾಮರಾಜನಗರ ಆಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ವಿಚಾರದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿದೆ. ಆದರೆ ಬೆಂದ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ. ಜೊತೆಗೆ ಸತ್ತವರ ಸಂಖ್ಯೆ ಮುಖ್ಯವಲ್ಲ, ಎಲ್ಲರ ಪ್ರಾಣ ರಕ್ಷಣೆ ಮುಖ್ಯ ಈಗಲೂ ರಾಜ್ಯ ಸರ್ಕಾರದಲ್ಲಿ ಹೊಂದಾಣಿಕೆ ಕೊರತೆ ಇದೆ. ನಿನ್ನೆ ಐವರು ಮಂತ್ರಿಗಳಿಗೆ ಜವಾಬ್ದಾರಿ ನೀಡಿದ್ದಾರೆ. ಅವರು ಹೇಗೆ ಕೆಲಸ ಮಾಡುತ್ತಾರೆಂದು ನೋಡುತ್ತೇನೆ ಎಂದಿದ್ದಾರೆ.

ಕೊರೊನಾ ವಿಚಾರದಲ್ಲಿ ಸಿಎಂ ಹುಡುಗಾಟ ಮಾಡಬಾರದು. ಪ್ರತಿನಿತ್ಯ ಸಭೆಗಳನ್ನು ಮಾಡಿ ಸಮಯ ವ್ಯರ್ಥ ಮಾಡಬೇಡಿ. ಆಕ್ಸಿಜನ್ ಕೊರತೆ ಬಗ್ಗೆ ಆರೋಗ್ಯ ಸಚಿವರೇ ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಬೆಡ್ ಬ್ಲಾಕ್ ದಂಧೆ ಎನ್ನುವುದೇ ಡ್ರಾಮಾ. ಚಾಮರಾಜಗರದ ಘಟನೆ ಮರೆಮಾಚಲು ಹೀಗೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಡ್ ಬ್ಲಾಕ್ ದಂಧೆಯಲ್ಲಿ ಮಹಿಳೆ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆ ಮಹಿಳೆಯನ್ನು ನೇಮಿಸಿದವರು ಯಾರೆಂದು ಸ್ಪಷ್ಟಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ವಿಶ್ವಗುರು ಆಗಬೇಕೆಂದು ನಮ್ಮಲ್ಲಿ ಉತ್ಪಾದನೆಯಾಗಿದ್ದ ಲಸಿಕೆಗಳನ್ನು ಬೇರೆಯವರಿಗೆ ಕೊಟ್ಟಿದ್ದು ತಪ್ಪು. ನಾನು ಮಾರ್ಚ್​ನಲ್ಲೇ ಲಾಕ್​ಡೌನ್​ ಮಾಡಲು ಹೇಳಿದ್ದೆ. ಇಡೀ ದೇಶದಲ್ಲಿ ನಾನೊಬ್ಬನೇ ಲಾಕ್​ಡೌನ್​ ಮಾಡಲು ಹೇಳಿದ್ದೆ. ಆಗಲೇ ಲಾಕ್​ಡೌನ್​ ಮಾಡಿದ್ದರೆ ಇಷ್ಟು ಜನ ಸಾಯುತ್ತಿರಲಿಲ್ಲ ಎಂದಿದ್ದಾರೆ.

ಕೆಜಿಎಫ್​ನಲ್ಲಿ ನಿಂತು ಹೋಗಿರುವ ಆಕ್ಸಿಜನ್ ಘಟಕವನ್ನು ಮತ್ತೆ ದುರಸ್ಥಿ ಮಾಡಲು ಸಾಧ್ಯವಾ ನೋಡಿ ಎಂದು ಸಚಿವರಿಗೆ ಸೂಚಿಸಿದ್ದೇನೆ. ಕೆಜಿಎಫ್​ನಲ್ಲಿರೊ ಆಕ್ಸಿಜನ್ ಘಟಕ ಬ್ರಿಟಿಷರ ಕಾಲದ್ದಾಗಿದ್ದು, ಅದನ್ನು ದುರಸ್ಥಿ ಮಾಡಿದರೆ ನಾವು ಇಡೀ ರಾಷ್ಟ್ರಕ್ಕೆ ಆಕ್ಸಿಜನ್ ಪೂರೈಸಬಹುದು. ವಿರೋಧ ಪಕ್ಷದವರಾಗಿ ಇಷ್ಟು ಮಾಡಬಹುದು ಮತ್ತೇನು ಮಾಡಲು ಸಾಧ್ಯ. ಕಾಂಗ್ರೆಸ್ ನಾಯಕರು ನಿನ್ನೆ ಚಾಮರಾಜನಗರಕ್ಕೆ ಭೇಟಿ ನೀಡಿ ಸರ್ಕಾರ ನಡೆಸುವವರ ರಾಜೀನಾಮೆ ಕೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಅವರದ್ದೇ ಸರ್ಕಾರ ಇದೆ ಅಲ್ವಾ. ಅಲ್ಲಿ ಏನ್ ಮಾಡ್ತೀರಿ. ನಾನೇ ಮುಖ್ಯಂತ್ರಿ ಆಗಿದ್ದರೆ ರಾಜ್ಯಕ್ಕೆ ಈ ಪರಿಸ್ಥಿತಿ ಬರಲು ಬಿಡುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ

BBMP Bed Blocking Scam | ಮತ್ತೊಂದು ಮಂತ್ರ ದಂಡ ಪ್ರಯೋಗಿಸಿದ ಸಂಸದ ತೇಜಸ್ವಿ ಸೂರ್ಯ; ನಂದನ್ ನಿಲೇಕಣಿ ನೆರವಿಗೆ ಅಸ್ತು

West Bengal Violence: ಎರಡು ದಿನಗಳಲ್ಲಿ 14 ಮಂದಿ ಸಾವು, ಹಿಂಸಾಚಾರದಿಂದ ದೂರವಿರಿ ಎಂದು ರಾಜಕೀಯ ಪಕ್ಷಗಳಿಗೆ ಮಮತಾ ಬ್ಯಾನರ್ಜಿ ಮನವಿ

(HD Kumaraswamy says state government had made a mistake in death of 24 patients in chamarajanagar)

Published On - 12:59 pm, Wed, 5 May 21