ಬೆಂಗಳೂರಿನಲ್ಲಿ ಅಂತ್ಯಕ್ರಿಯೆಗೆ ಹಣ ನೀಡುವ ವಿಚಾರಕ್ಕೆ ಮಾರಣಾಂತಿಕ ಹಲ್ಲೆ
ಅಂತ್ಯಕ್ರಿಯೆಗೆ ಕಡಿಮೆ ಹಣ ಪಡೆಯಿರಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ವಿಲ್ಸನ್ ಗಾರ್ಡನ್ನಲ್ಲಿರುವ ಬಡಮಕಾನ್ ಮೈದಾನದ ಸ್ಮಶಾನದಲ್ಲಿ ನಡೆದಿದೆ.
ಬೆಂಗಳೂರು: ಅಂತ್ಯಕ್ರಿಯೆಗೆ ಕಡಿಮೆ ಹಣ ಪಡೆಯಿರಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ವಿಲ್ಸನ್ ಗಾರ್ಡನ್ನಲ್ಲಿರುವ ಬಡಮಕಾನ್ ಮೈದಾನದ ಸ್ಮಶಾನದಲ್ಲಿ ನಡೆದಿದೆ. ಕೊರೊನಾದಿಂದಾಗಿ ಜನರ ಬಳಿ ದುಡ್ಡಿಲ್ಲ ಎಂದು ಹೇಳಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸ್ಮಶಾನದಲ್ಲಿ ಗುಂಡಿ ತೆಗೆಯಲು 10 ರಿಂದ15 ಸಾವಿರಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು. ಕೊರೊನಾ ಹಿನ್ನೆಯಲ್ಲಿ ಜನರ ಬಳಿ ದುಡ್ಡಿಲ್ಲ. ಹೀಗಾಗಿ 1,500 ರೂಪಾಯಿ ಮಾತ್ರ ನಿಗದಿ ಪಡಿಸಿ ಎಂದು ಮೌಲಾ ಪಾಷಾ ಮನವಿ ಮಾಡಿದ್ದಾರೆ. ಇದರಿಂದ ಕೋಪಗೊಂಡ ಸಾದಿಕ್ ಪಾಷಾ ಮತ್ತು ಅವರ ಗುಂಪು ಮೌಲಾ ಪಾಷಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸುತ್ತಿಗೆ ಹಿಡಿದು ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾರೆ. ಈ ಕುರಿತಂತೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ಸಾಂಕ್ರಾಮಿಕದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಅಂತ್ಯಕ್ರಿಯೆಗೂ ಜಾಗವಿಲ್ಲದಂತಾಗಿದೆ. ಅದೆಷ್ಟೋ ಸಮಯದವರೆಗೆ ಮೃತದೇಹಗಳನ್ನು ಇರಿಸಿಕೊಂಡು ಮೃತರ ಸಂಬಂಧಿಕರು ಕಾಯುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಯಾದಗಿರಿಯ ವೈದ್ಯರಿಗೆ ಕೊರೊನಾ ಸೋಂಕು; ಕೊವಿಡ್ ಗೆದ್ದು ಇತರರಿಗೆ ಮಾದರಿಯಾದ ಕೊರೊನಾ ವಾರಿಯರ್ಸ್