AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನು ಯಾವ ಕಾರಣಕ್ಕೂ ತಾಯಿ ಆಗಬಾರದು’: ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ ಯುವಕ

ಗುರುಗ್ರಾಮದಲ್ಲಿ ಲಿವ್-ಇನ್ ಸಂಬಂಧದ ಭೀಕರ ಘಟನೆ ನಡೆದಿದೆ. ಯುವತಿಯ ಮೇಲೆ ದೈಹಿಕ ದೌರ್ಜನ್ಯ ಎಸಗಿ, ಕೊಲೆ ಬೆದರಿಕೆ ಹಾಕಿದ ಸಂಗಾತಿ. ಮಹಾನಗರಗಳಲ್ಲಿ ಹೆಚ್ಚುತ್ತಿರುವ ಇಂತಹ ಸಂಬಂಧಗಳ ಅಪಾಯವನ್ನು ಈ ಲೇಖನ ಎತ್ತಿ ತೋರಿಸುತ್ತದೆ. ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ, ಪ್ರಕರಣ ದಾಖಲಾಗಿದೆ. ಕೇವಲ ದೈಹಿಕ ಸಂಬಂಧಕ್ಕೆ ಪ್ರಾಮುಖ್ಯತೆ ನೀಡುವ ಸಂಬಂಧಗಳ ದುರಂತ ಅಂತ್ಯಕ್ಕೆ ಇದು ಮತ್ತೊಂದು ಉದಾಹರಣೆ.

'ನೀನು ಯಾವ ಕಾರಣಕ್ಕೂ ತಾಯಿ ಆಗಬಾರದು': ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ ಯುವಕ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Feb 23, 2026 | 3:54 PM

Share

ಗುರುಗ್ರಾಮ, ಫೆ.23: ಹೆಣ್ಣು ಮತ್ತು ಗಂಡಿನ ಸಂಬಂಧ ದೈಹಿಕ ಸಂಬಂಧದಲ್ಲಿ ಮುಗಿಯುದಾದರೆ, ಆ ಸಂಬಂಧಗಳಿಗೆ ಬೆಲೆಯೇ ಇರುವುದಿಲ್ಲ. ದೆಹಲಿ, ಬೆಂಗಳೂರುನಂತಹ ಮಹಾನಗರಗಳಲ್ಲಿ ಯುವಕ-ಯುವತಿಯರು ಮನಸ್ಸಿನ ಸಂಬಂಧಕ್ಕಿಂತ ದೈಹಿಕ ಸಂಬಂಧಕ್ಕೆ ಬೆಲೆ ನೀಡುತ್ತಾರೆ ಎಂಬುದನ್ನು ಅನೇಕ ಘಟನೆಗಳು ವಿವರಿಸಿದೆ. ಅದಕ್ಕೆ ಸಾಕ್ಷಿ ಕೂಡ ಇದೆ. ಲಿವ್ ಇನ್ ರಿಲೇಶನ್​ಶಿಪ್​​​ ಮೂಲಕ ಗೆಳತನ ಬೆಳಸಿಕೊಂಡು ದೈಹಿಕ ಸಂಪರ್ಕದ ನಂತರ ಇಬ್ಬರ ನಡುವೆಯೂ ಹೊಂದಾಣಿಕೆಯೇ ಇರುವುದಿಲ್ಲ. ಕೊನೆಗೆ ಒಬ್ಬರ ಮೇಲೆ ಇನ್ನೊಬ್ಬ ದೂರಿಕೊಂಡ ಸಂದೇಹ ಪಡುತ್ತ, ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗುತ್ತದೆ. ಇದೀಗ ಇಂತಹದೇ ಘಟನೆಯೊಂದು ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಯುವತಿಯೊಬ್ಬಳ ಮೇಲೆ ನಡೆದ ಸರಣಿ ದೌರ್ಜನ್ಯದ ಅಘಾತಕಾರಿ ಕೃತ್ಯವೊಂದು ಬೆಳಕಿಗೆ ಬಂದಿದೆ. ತನ್ನ ಲಿವ್ ಇನ್ ರಿಲೇಶನ್​ಶಿಪ್​​ನಲ್ಲಿದ್ದ ಯುವತಿಯನ್ನು ಭೀಕರ ಹಲ್ಲೆ ಹಲ್ಲೆ ಮಾಡಿದ್ದಾನೆ.

ಇದೀಗ ತ್ರಿಪುರಾ ಮೂಲದ 19 ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ತ್ರಿಪುರಾ ಮೂಲದ ಸಂತ್ರಸ್ತೆ ಗುರುಗ್ರಾಮದ ಸೆಕ್ಟರ್ 69 ರ ಪಿಜಿಯೊಂದರಲ್ಲಿ ವಾಸವಿದ್ದು, ಬಯೋಟೆಕ್ನಾಲಜಿ ಅಭ್ಯಾಸ ಮಾಡುತ್ತಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಆ್ಯಪ್ ಒಂದರ ಮೂಲಕ ದೆಹಲಿಯ ನರೇಲಾ ಮೂಲದ ಶಿವಂ ಎಂಬಾತನ ಪರಿಚಯವಾಗಿತ್ತು. ಮದುವೆಯ ಆಮಿಷವೊಡ್ಡಿದ ಶಿವಂ, ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಲ್ಲದೆ, ಗುರುಗ್ರಾಮದ ಫ್ಲಾಟ್ ಒಂದರಲ್ಲಿ ಆಕೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದನು.

ಇಬ್ಬರ ನಡುವೆ ಕೆಲವೊಂದು ವಿಚಾರವಾಗಿ ಸಂದೇಹಗಳು ಮೂಡಿದೆ. ಶಿವಂ, ಯುವತಿಯ ಮೇಲೆ ಸತತವಾಗಿ ದೈಹಿಕ ದೌರ್ಜನ್ಯ ಎಸಗುತ್ತಿದ್ದನು. ಆದರೆ ಕಳೆದ ಸೋಮವಾರ (ಫೆಬ್ರವರಿ 16) ಈ ಕ್ರೌರ್ಯ ಮಿತಿಮೀರಿತು. ಯುವತಿಯ ತಲೆಯನ್ನು ಗೋಡೆಗೆ ಜಜ್ಜಿ, ಸ್ಟೀಲ್ ಬಾಟಲಿ ಮತ್ತು ಮಣ್ಣಿನ ಮಡಕೆಯಿಂದ ಹಲ್ಲೆ ನಡೆಸಿದ್ದಾನೆ. ಯುವತಿಯ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಈ ಭೀಕರ ಕೃತ್ಯದ ವಿಡಿಯೋವನ್ನೂ ಸಹ ಆರೋಪಿ ಚಿತ್ರೀಕರಿಸಿದ್ದಾನೆ. ಯುವತಿಯ ಕಾಲುಗಳಿಗೆ ಚಾಕುವಿನಿಂದ ಇರಿದು, “ಇನ್ನು ಮುಂದೆ ನೀನು ತಾಯಿಯಾಗಲು ಅಥವಾ ನಡೆಯಲು ಸಾಧ್ಯವಾಗದಂತೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಮದುವೆ ಹಾಲ್​​​ನ ಶೌಚಾಲಯದ ಬಾಗಿಲಿನಲ್ಲಿ ಶಿವಾಜಿ ಮಹಾರಾಜ್, ಮಹಾರಾಣಿ ಪದ್ಮಿನಿ ಫೋಟೋ

ಎರಡು ದಿನಗಳ ಕಾಲ ಚಿತ್ರಹಿಂಸೆ ಅನುಭವಿಸಿದ ಯುವತಿ, ಫೆಬ್ರವರಿ 18 ರಂದು ಆರೋಪಿಯ ಫೋನಿನಿಂದಲೇ ತನ್ನ ತಾಯಿಗೆ ಕರೆ ಮಾಡಿ ಸ್ಥಳೀಯ ಭಾಷೆಯಲ್ಲಿ ವಿಷಯ ತಿಳಿಸಿದ್ದಾಳೆ. ಇದರಿಂದ ಆರೋಪಿಗೆ ವಿಷಯ ಅರ್ಥವಾಗಲಿಲ್ಲ. ತಕ್ಷಣವೇ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

​​​​​​​

Follow Us
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಅವಕಾಶ ಕೊಟ್ಟ ವೇದಿಕೆಗೆ ಅಗೌರವ; ಕಿಚ್ಚನ ಕ್ಲಾಸ್ ಹೇಗಿದೆ ನೋಡಿ
ಅವಕಾಶ ಕೊಟ್ಟ ವೇದಿಕೆಗೆ ಅಗೌರವ; ಕಿಚ್ಚನ ಕ್ಲಾಸ್ ಹೇಗಿದೆ ನೋಡಿ
ಕೆಪಿಎಸ್​ಸಿ ಹಗರಣ: ಜ್ಞಾನೇಂದ್ರ ಕುಮಾರ್, ಕನ್ನಾಳೆ ಬಂಧಿಸಿದ ಇಡಿ
ಕೆಪಿಎಸ್​ಸಿ ಹಗರಣ: ಜ್ಞಾನೇಂದ್ರ ಕುಮಾರ್, ಕನ್ನಾಳೆ ಬಂಧಿಸಿದ ಇಡಿ
ನಾನು ಈಗ ವೆಜ್​ಟೇರಿಯನ್, ಅಶೋಕಣ್ಣಂಗೆ ಫ್ರೆಶ್ ಮೀನು ಕಳಿಸ್ತೀನಿ: ಡಿಕೆಶಿ
ನಾನು ಈಗ ವೆಜ್​ಟೇರಿಯನ್, ಅಶೋಕಣ್ಣಂಗೆ ಫ್ರೆಶ್ ಮೀನು ಕಳಿಸ್ತೀನಿ: ಡಿಕೆಶಿ
ಬಂದರು ಪ್ರದೇಶದಲ್ಲಿ ಬೋಟ್ ಹತ್ತಿ ಸಮುದ್ರಕ್ಕಿಳಿದೇ ಬಿಟ್ರು ಸಿಎಂ ಡಿಕೆಶಿ
ಬಂದರು ಪ್ರದೇಶದಲ್ಲಿ ಬೋಟ್ ಹತ್ತಿ ಸಮುದ್ರಕ್ಕಿಳಿದೇ ಬಿಟ್ರು ಸಿಎಂ ಡಿಕೆಶಿ
ಸಿಎಂ ಡಿಕೆ ಶಿವಕುಮಾರ್ ಮಂಗಳೂರು ಮೀನುಗಾರಿಕೆ ಬಂದರಿಗೆ ದಿಢೀರ್ ಭೇಟಿ
ಸಿಎಂ ಡಿಕೆ ಶಿವಕುಮಾರ್ ಮಂಗಳೂರು ಮೀನುಗಾರಿಕೆ ಬಂದರಿಗೆ ದಿಢೀರ್ ಭೇಟಿ
ಬೆಂಗಳೂರಿನ ಸುಧಾಮ ನಗರದಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ ಕಟ್ಟಡ!
ಬೆಂಗಳೂರಿನ ಸುಧಾಮ ನಗರದಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ ಕಟ್ಟಡ!
ಟಿ ನರಸೀಪುರದಲ್ಲಿ ಮಸೀದಿ ಮುಂದೆಯೇ ಗಣೇಶ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮ
ಟಿ ನರಸೀಪುರದಲ್ಲಿ ಮಸೀದಿ ಮುಂದೆಯೇ ಗಣೇಶ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮ