AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namma Metro: ನಮ್ಮ ಮೆಟ್ರೋ ಪಿಂಕ್ ಲೈನ್ ಇಂಟೆನ್ಸಿವ್ ಟೆಸ್ಟಿಂಗ್: ಆಗಸ್ಟ್ 12 ರಿಂದ 14 ರವರೆಗೆ ರೈಲುಗಳ ಸುರಕ್ಷತಾ ತಪಾಸಣೆ

ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ ಕಾರಿಡಾರ್‌ನ ಹೊಸ ರೈಲುಗಳ ಸುರಕ್ಷತಾ ಮತ್ತು ತಾಂತ್ರಿಕ ತಪಾಸಣೆಯು ಆಗಸ್ಟ್ 12 ರಿಂದ 14 ರವರೆಗೆ ನಡೆಯಲಿದೆ. ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರ (CCRS) ನೇತೃತ್ವದಲ್ಲಿ ಕೊತ್ತನೂರು ಡಿಪೋದಲ್ಲಿ ಈ ತೀವ್ರ ಪರಿಶೀಲನೆ ನಡೆಯಲಿದ್ದು, ಬ್ರೇಕಿಂಗ್ ಮತ್ತು ಸಿಗ್ನಲಿಂಗ್ ವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತದೆ. ಈ ಪ್ರಕ್ರಿಯೆಯು ಪಿಂಕ್ ಲೈನ್ ವಾಣಿಜ್ಯ ಸಂಚಾರ ಮುಕ್ತಗೊಳ್ಳುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

Namma Metro: ನಮ್ಮ ಮೆಟ್ರೋ ಪಿಂಕ್ ಲೈನ್ ಇಂಟೆನ್ಸಿವ್ ಟೆಸ್ಟಿಂಗ್: ಆಗಸ್ಟ್ 12 ರಿಂದ 14 ರವರೆಗೆ ರೈಲುಗಳ ಸುರಕ್ಷತಾ ತಪಾಸಣೆ
ನಮ್ಮ ಮೆಟ್ರೋ ಪಿಂಕ್ ಲೈನ್ ಇಂಟೆನ್ಸಿವ್ ಟೆಸ್ಟಿಂಗ್
ಭಾವನಾ ಹೆಗಡೆ
|

Updated on: Aug 08, 2026 | 7:49 AM

Share

ಮುಖ್ಯಾಂಶಗಳು

  • ನಮ್ಮ ಮೆಟ್ರೋ ಪಿಂಕ್ ಲೈನ್ ರೈಲುಗಳ ಸುರಕ್ಷತಾ ತಪಾಸಣೆ ಆಗಸ್ಟ್ 12 ರಿಂದ.
  • ಕೊತ್ತನೂರು ಡಿಪೋದಲ್ಲಿ ಹೊಸ ರೈಲುಗಳ ತಾಂತ್ರಿಕ ಸಾಮರ್ಥ್ಯವನ್ನು ತಜ್ಞರು ಪರಿಶೀಲಿಸಲಿದ್ದಾರೆ.
  • ಸಿಎಂಆರ್‌ಎಸ್ ಅಂತಿಮ ಅನುಮೋದನೆ ನೀಡಿದ ಬಳಿಕ ವಾಣಿಜ್ಯ ಸಂಚಾರ ಅಧಿಕೃತವಾಗಿ ಆರಂಭ.

ಬೆಂಗಳೂರು, ಆಗಸ್ಟ್ 08: ನಮ್ಮ ಮೆಟ್ರೋ (Namma Metro) ಫೇಸ್-2 ಅಡಿಯಲ್ಲಿ ಬಹುನಿರೀಕ್ಷಿತ ಪಿಂಕ್ ಲೈನ್ (ಕಾಳೇನ ಅಗ್ರಹಾರದಿಂದ ನಾಗವಾರ) ಕಾರಿಡಾರ್‌ನ ವಾಣಿಜ್ಯ ಸಂಚಾರದ ಸಿದ್ಧತೆಗಳು ಕೊನೆಯ ಹಂತಕ್ಕೆ ತಲುಪಿವೆ. ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿರುವ ಹೊಸ ಮೆಟ್ರೋ ರೈಲುಗಳ ತಾಂತ್ರಿಕ ಹಾಗೂ ಸುರಕ್ಷತಾ ತಪಾಸಣೆಯನ್ನು ಆಗಸ್ಟ್ 12 ರಿಂದ 14 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಕೋರಿಕೆಯ ಮೇರೆಗೆ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು (CCRS) ಈ ರೋಲಿಂಗ್ ಸ್ಟಾಕ್ (ರೈಲು ಪೆಟ್ಟಿಗೆಗಳು) ತಪಾಸಣೆಯನ್ನು ಕೈಗೊಳ್ಳಲಿದ್ದಾರೆ.

ಕೊತ್ತನೂರು ಡಿಪೋದಲ್ಲಿ ತಪಾಸಣೆ

ಮೆಟ್ರೋ ಅಧಿಕಾರಿಗಳ ಮಾಹಿತಿಯ ಪ್ರಕಾರ, ಪಿಂಕ್ ಲೈನ್‌ಗಾಗಿ ಬಿಇಎಂಎಲ್ (BEML) ಪೂರೈಸಿರುವ ಹೊಸ ರೈಲು ಸೆಟ್‌ಗಳನ್ನು ಕೊತ್ತನೂರು ಡಿಪೋದಲ್ಲಿ ತೀವ್ರ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗುವುದು. ರೈಲುಗಳ ಬ್ರೇಕಿಂಗ್ ಸಿಸ್ಟಮ್, ಸಿಗ್ನಲಿಂಗ್ ತಂತ್ರಜ್ಞಾನದೊಂದಿಗಿನ ಸಮನ್ವಯತೆ ಮತ್ತು ಸ್ವಯಂಚಾಲಿತ ಚಾಲನಾ ಸಾಮರ್ಥ್ಯಗಳನ್ನು ತಜ್ಞರ ತಂಡವು ಪರಿಶೀಲಿಸಲಿದೆ.

ಸಿಎಂಆರ್‌ಎಸ್ (CMRS) ಅಂತಿಮ ಪರಿಶೀಲನೆ

ಈ ಪ್ರಾಥಮಿಕ ತಪಾಸಣೆ ಮುಗಿದ ಬಳಿಕ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಪಿಂಕ್ ಲೈನ್‌ನ ಸಂಪೂರ್ಣ ಮೂಲಸೌಕರ್ಯಗಳ ವಿಸ್ತೃತ ಪರಿಶೀಲನೆ ನಡೆಸಲಿದ್ದಾರೆ.

  • ಪ್ರಾಯೋಗಿಕ ಸಂಚಾರ (Trial Runs)
  • ಸಿಗ್ನಲಿಂಗ್ ಮತ್ತು ಟೆಲಿಕಾಂ ವ್ಯವಸ್ಥೆ
  • ಸುರಕ್ಷತಾ ಜಾಲಗಳ ಸಂಯೋಜನೆ
  • ನಿಲ್ದಾಣಗಳು, ಟ್ರ್ಯಾಕ್ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ
  • ಪ್ರಯಾಣಿಕರ ಸೌಲಭ್ಯಗಳು ಮತ್ತು ತುರ್ತು ನಿರ್ಗಮನ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತದೆ.

ಹಂತ-ಹಂತವಾಗಿ ಮುಕ್ತಾಯಗೊಳ್ಳಲಿರುವ ಮಾರ್ಗ

ಪಿಂಕ್ ಲೈನ್ ಒಟ್ಟು 21.3 ಕಿಲೋಮೀಟರ್ ಉದ್ದವಿದ್ದು, ಇದರಲ್ಲಿ 7.5 ಕಿ.ಮೀ ಎತ್ತರಿಸಿದ ಮಾರ್ಗ (Elevated Stretch) ಹಾಗೂ 13.8 ಕಿ.ಮೀ ಅಂಡರ್​ ಗ್ರೌಂಡ್ ಮಾರ್ಗ ಒಳಗೊಂಡಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 6 ನಿಲ್ದಾಣಗಳನ್ನು ಹೊಂದಿರುವ ಎತ್ತರಿಸಿದ ಮಾರ್ಗವು ಈಗಾಗಲೇ ಆರ್‌ಡಿಎಸ್‌ಒ (RDSO) ವೇಗ ತಪಾಸಣೆಯಲ್ಲಿ ಗಂಟೆಗೆ 90 ಕಿಮೀ ವೇಗದ ಸರ್ಟಿಫಿಕೇಟ್ ಪಡೆದುಕೊಂಡಿದೆ. ಸಿಎಂಆರ್‌ಎಸ್‌ನಿಂದ ಅಂತಿಮ ಕ್ಲಿಯರೆನ್ಸ್ ಸಿಕ್ಕ ತಕ್ಷಣವೇ ಈ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಅಧಿಕಾರಿಗಳ ಪ್ರಕಾರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಎಲ್ಲಾ ಅಗತ್ಯ ಅನುಮೋದನೆಗಳು ಸಿಗುವ ನಿರೀಕ್ಷೆಯಿದೆ. ಉಳಿದ ಭೂಗತ ಮಾರ್ಗದ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷದ ಆರಂಭದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು