AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಆಟಗಾರರಿಗೆ ಗೌತಮ್ ಗಂಭೀರ್ ಖಡಕ್ ವಾರ್ನಿಂಗ್!

India vs Sri Lanka Test: ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಗಾಲೆಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದರೆ, ದ್ವಿತೀಯ ಪಂದ್ಯವು ಆಗಸ್ಟ್ 23 ರಂದು ಕೊಲಂಬೋದ ಎಸ್‌ಎಸ್‌ಸಿ ಮೈದಾನದಲ್ಲಿ ಜರುಗಲಿದೆ.

ಟೀಮ್ ಇಂಡಿಯಾ ಆಟಗಾರರಿಗೆ ಗೌತಮ್ ಗಂಭೀರ್ ಖಡಕ್ ವಾರ್ನಿಂಗ್!
Gautam GambhirImage Credit source: GettyImages
ಝಾಹಿರ್ ಯೂಸುಫ್
|

Updated on: Aug 08, 2026 | 7:52 AM

Share

ಶ್ರೀಲಂಕಾ ವಿರುದ್ಧ ಆಗಸ್ಟ್ 15 ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ನಿರ್ಣಾಯಕ ಟೆಸ್ಟ್ ಸರಣಿಗೂ ಮುನ್ನ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಆಟಗಾರರಲ್ಲಿ ಹೊಸ ಜೋಶ್ ತುಂಬಿದ್ದಾರೆ. ತಂಡದ ಸಾಂಪ್ರದಾಯಿಕ ‘ಪೆಪ್ ಟಾಕ್’ ಸಭೆಯಲ್ಲಿ ಮಾತನಾಡಿದ ಗಂಭೀರ್, ತಂಡಕ್ಕೆ ಆಯ್ಕೆಯಾಗಿರುವ ಮೂವರು ಹೊಸ ಮುಖಗಳನ್ನು ಆತ್ಮೀಯವಾಗಿ ಸ್ವಾಗತಿಸುವುದರ ಜೊತೆಗೆ, ಅಷ್ಟೇ ಕಠಿಣವಾದ ಎಚ್ಚರಿಕೆಯನ್ನೂ ನೀಡಿದ್ದಾರೆ. “ನಿಜವಾದ ಸವಾಲು ಈಗಷ್ಟೇ ಶುರುವಾಗಿದೆ, ಶ್ರೀಲಂಕಾದ ಪ್ರತಿ ಪ್ರಶ್ನೆಗೂ ನಮ್ಮ ಬಳಿ ಉತ್ತರ ಇರಬೇಕು” ಎಂದು ಗಂಭೀರ್ ತಿಳಿಸಿದ್ದಾರೆ.

ಮೂವರು ಹೊಸ ಮುಖಗಳಿಗೆ ಗಂಭೀರ್ ಹೇಳಿದ್ದೇನು?

ಭಾರತ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಇಬ್ಬರು ಆಟಗಾರರು ಹಾಗೂ ಒಬ್ಬರು ಸಪೋರ್ಟ್ ಸ್ಟಾಫ್ ಸದಸ್ಯರನ್ನು ಸ್ವಾಗತಿಸಿದ ಗಂಭೀರ್, ಅವರ ಶ್ರಮವನ್ನು ಶ್ಲಾಘಿಸಿದರು:

ಸರಾಂಶ್ ಜೈನ್ (ಆಲ್‌ರೌಂಡರ್): 33 ವರ್ಷದ ಸಾರಾಂಶ್ ಅವರನ್ನು ಸ್ವಾಗತಿಸಿದ ಗಂಭೀರ್, “ಇಲ್ಲಿಯವರೆಗೆ ತಲುಪಲು ನೀವು ದೇಶಿ ಕ್ರಿಕೆಟ್‌ನಲ್ಲಿ ಅಪಾರ ಕಷ್ಟಪಟ್ಟಿದ್ದೀರಿ. ಅವಕಾಶ ಸಿಕ್ಕಾಗ ದೇಶ ಮತ್ತು ನಿಮ್ಮ ಕುಟುಂಬ ಹೆಮ್ಮೆ ಪಡುವಂತೆ ಮಾಡಿ” ಎಂದರು.

ಆಖಿಬ್ ನಬಿ ದಾರ್ (ವೇಗದ ಬೌಲರ್): ಗಾಯಾಳು ಜಸ್​ಪ್ರೀತ್ ಬುಮ್ರಾ ಬದಲಿಗೆ ತಂಡ ಸೇರಿರುವ ಆಖಿಬ್‌ಗೆ ಶುಭ ಕೋರಿದ ಗಂಭೀರ್, “ನಿಮ್ಮ ಕಳೆದ ಸೀಸನ್ ಅದ್ಭುತವಾಗಿತ್ತು. ಜಮ್ಮು-ಕಾಶ್ಮೀರಕ್ಕೆ ರಣಜಿ ಟ್ರೋಫಿ ಗೆದ್ದುಕೊಟ್ಟಿರುವುದು ಸಣ್ಣ ಸಾಧನೆಯಲ್ಲ. ಆದರೆ ನೆನಪಿರಲಿ, ಇದು ಕೇವಲ ಆರಂಭವಷ್ಟೇ” ಎಂದು ಎಚ್ಚರಿಸಿದರು.

ಸುಭದೀಪ್ ಘೋಷ್ (ಫೀಲ್ಡಿಂಗ್ ಕೋಚ್): ಹೊಸ ಫೀಲ್ಡಿಂಗ್ ಕೋಚ್ ಸುಭದೀಪ್ ಅವರನ್ನು ಸ್ವಾಗತಿಸಿದ ಗಂಭೀರ್, ಅವರ ಅಗಾಧ ಅನುಭವ ಮತ್ತು ಶಕ್ತಿಯು ಟೀಮ್ ಇಂಡಿಯಾದ ಫೀಲ್ಡಿಂಗ್ ಗುಣಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟೆಸ್ಟ್ ಸರಣಿಗೆ ‘ಮಹಾ’ ಗುರಿಗಳು:

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಸದ್ಯ ಭಾರತ ತಂಡ 5ನೇ ಸ್ಥಾನದಲ್ಲಿದೆ. ಹೀಗಾಗಿ ಫೈನಲ್ ರೇಸ್‌ನಲ್ಲಿ ಉಳಿಯಲು ಈ ಲಂಕಾ ಪ್ರವಾಸ ಗಂಭೀರ್‌ಗೆ ಅತ್ಯಂತ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಅವರು ತಂಡದ ಮುಂದೆ 3 ಪ್ರಮುಖ ಗುರಿಗಳನ್ನು ಇಟ್ಟಿದ್ದಾರೆ:

ಪ್ರತಿ ಪ್ರಶ್ನೆಗೂ ಉತ್ತರ ಸಿದ್ಧವಿರಲಿ: “ಆಗಸ್ಟ್ 15ರ ಬೆಳಗ್ಗೆ ನಾವು ಮೊದಲು ಬ್ಯಾಟಿಂಗ್ ಮಾಡಲಿ ಅಥವಾ ಬೌಲಿಂಗ್ ಮಾಡಲಿ, ಶ್ರೀಲಂಕಾ ತಂಡ ಎಸೆಯುವ ಪ್ರತಿಯೊಂದು ಸವಾಲಿಗೂ (ಪ್ರಶ್ನೆಗೂ) ನಮ್ಮ ಬಳಿ ತಕ್ಕ ಉತ್ತರ ಸಿದ್ಧವಿರಬೇಕು” ಎಂದು ಗಂಭೀರ್ ಆಟಗಾರರಿಗೆ ತಿಳಿಸಿದ್ದಾರೆ.

ಎಲ್ಲೆ ಮೀರಿ ಶ್ರಮಿಸಿ: ನೆಟ್ಸ್ ಪ್ರ್ಯಾಕ್ಟಿಸ್ ವೇಳೆ ಆಟಗಾರರು ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಎಲ್ಲೆಗಳನ್ನು ಮೀರಿ ಕಷ್ಟಪಡಬೇಕು ಮತ್ತು ಅಭ್ಯಾಸ ಪಂದ್ಯಗಳ ಸಂಪೂರ್ಣ ಲಾಭ ಪಡೆಯಬೇಕು ಎಂದು ಸೂಚಿಸಿದ್ದಾರೆ.

ಸ್ಪಿನ್ ಪಿಚ್‌ಗಳ ಸವಾಲು: ಗಾಲೆ ಮೈದಾನದ ಟರ್ನಿಂಗ್ ಪಿಚ್‌ಗಳಲ್ಲಿ ಶ್ರೀಲಂಕಾದ ಸ್ಪಿನ್ನರ್‌ಗಳನ್ನು ಎದುರಿಸಲು ಬ್ಯಾಟರ್‌ಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಗಂಭೀರ್ ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಇದನ್ನೂ ಓದಿ: ಐಪಿಎಲ್​ಗೆ ಗುಡ್ ಬೈ ಹೇಳಿದ ಅಜಿಂಕ್ಯ ರಹಾನೆ

ಒಟ್ಟಾರೆಯಾಗಿ, ಗೌತಮ್ ಗಂಭೀರ್ ಅವರ ಈ ಮಾತುಗಳು ಟೀಮ್ ಇಂಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತೀಯ ಆಟಗಾರರು ಯಾವ ರೀತಿ ಕಮಾಲ್‌ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Follow Us
ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ