ನಾನು ಮಾಡಿರುವ ಹಲವು ಸಿನಿಮಾಗಳನ್ನು ಜನರು ನೋಡಿಯೇ ಇಲ್ಲ; ಪ್ರಿಯಾಂಕಾ ಚೋಪ್ರಾ
Priyanka Chopra: ಪ್ರಿಯಾಂಕಾ ಚೋಪ್ರಾ ಯಾವುದೇ ಹಿನ್ನೆಲೆ ಇದ್ದು ಚಿತ್ರರಂಗಕ್ಕೆ ಬಂದವರಲ್ಲ. ಅವರಿಗೆ ಯಾವುದೇ ಗಾಡ್ ಫಾದರ್ ಇರಲಿಲ್ಲ. ಆದಾಗ್ಯೂ ಬಾಲಿವುಡ್ನಲ್ಲಿ ನೆಲೆ ಕಂಡುಕೊಂಡರು. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿ ಹಾಲಿವುಡ್ಗೆ ಕಾಲಿಟ್ಟರು.
ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಹಾಗೂ ಹಾಲಿವುಡ್ನಲ್ಲಿ ಮಿಂಚಿದ್ದಾರೆ. ಅಮೆರಿಕ ಗಾಯಕ ನಿಕ್ ಜೋನಸ್ ಅವರನ್ನು ವರಿಸುವ ಮೂಲಕ ಎಲ್ಲರಲ್ಲೂ ಅವರು ಅಚ್ಚರಿ ಮೂಡಿಸಿದ್ದರು. ಈಗ ಪ್ರಿಯಾಂಕಾ ತಮ್ಮ ಏಳುಬೀಳುಗಳ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಮಾಡಿರುವ ಸಾಕಷ್ಟು ಚಿತ್ರಗಳನ್ನು ಜನರು ನೋಡೆ ಇಲ್ಲ ಎಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಯಾವುದೇ ಹಿನ್ನೆಲೆ ಇದ್ದು ಚಿತ್ರರಂಗಕ್ಕೆ ಬಂದವರಲ್ಲ. ಅವರಿಗೆ ಯಾವುದೇ ಗಾಡ್ ಫಾದರ್ ಇರಲಿಲ್ಲ. ಆದಾಗ್ಯೂ ಬಾಲಿವುಡ್ನಲ್ಲಿ ನೆಲೆ ಕಂಡುಕೊಂಡರು. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿ ಹಾಲಿವುಡ್ಗೆ ಕಾಲಿಟ್ಟರು. ಆದರೆ, ಈ ಜರ್ನಿ ಅವರಿಗೆ ಅಷ್ಟು ಸುಲಭದ್ದು ಆಗಿರಲೇ ಇಲ್ಲ.
ಹಾಲಿವುಡ್ಗೆ ಕಾಲಿಡುವುದಕ್ಕೂ ಮೊದಲು ಪ್ರಿಯಾಂಕಾ ಸಾಕಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರು. ಹಲವು ಚಿತ್ರಗಳು ಸೋತಿತ್ತು ಕೂಡ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಯಾರೂ ಕೇವಲ ಜಯವೊಂದನ್ನೇ ಗಳಿಸುವುದಿಲ್ಲ. ನಾನು ಸಾಕಷ್ಟು ಹೋರಾಟಗಳನ್ನು ಸೋತಿದ್ದೇನೆ. ನಾನು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದನ್ನು ಯಾರೊಬ್ಬರೂ ವೀಕ್ಷಣೆ ಮಾಡಿಯೇ ಇಲ್ಲ’ ಎಂದಿದ್ದಾರೆ.
‘ನೀವು ಎಲ್ಲಿಗೆ ಹೋಗುತ್ತೀರೋ ಅಲ್ಲಿಗೆ ತಲುಪಲು ಎಲ್ಲರಿಗಿಂತ ವೇಗವಾಗಿ ಓಡಬೇಕು ಎಂದು ಏಷ್ಯನ್ನರಾದ ನಾವು ಕಲಿತಿದ್ದೇವೆ. ನಾನು ಲೀಡ್ರೋಲ್ನಲ್ಲಿ ನಟಿಸಬೇಕು ಎಂದು ಕನಸು ಕಂಡೆ. ಇದಕ್ಕೆ 10 ವರ್ಷಗಳೇ ಹಿಡಿದವು. ಮುಂದಿನ ಜನರೇಷನ್ನವರು ಅಷ್ಟು ಸಮಯ ತೆಗೆದುಕೊಳ್ಳಲೇಬಾರದು’ ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.
ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ಭಾರತೀಯರ ಸಹಾಯಕ್ಕೆ ನಿಂತಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಯಾವುದೇ ವೈದ್ಯಕೀಯ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಆಕ್ಸಿಜನ್ ಸಿಲಿಂಡರ್ಗಳಿಗಾಗಿ ರೋಗಿಗಳು ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಅವರು ಭಾರತಕ್ಕಾಗಿ ಮಿಡಿದಿದ್ದರು. ಭಾರತದಲ್ಲಿನ ಕೊವಿಡ್ ಸೋಂಕಿತರಿಗೆ ಸಹಾಯ ಮಾಡಲು ಅವರು ಮುಂದೆ ಬಂದಿದ್ದರು.
ಇದನ್ನೂ ಒದಿ: ಶೋ ಶೂಟಿಂಗ್ ವೇಳೆ ಪ್ರಿಯಾಂಕಾ ಪತಿ ನಿಕ್ ಜೋನಸ್ಗೆ ಗಾಯ, ಆಸ್ಪತ್ರೆಗೆ ದಾಖಲು