Rajinikanth: ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರಜನಿಕಾಂತ್; ಅವರ ಕೊನೆಯ ಚಿತ್ರ ಯಾವುದು?
ರಜನಿಕಾಂತ್ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾತು ಹಲವು ವರ್ಷಗಳಿಂದ ಪ್ರಚಲಿತದಲ್ಲಿತ್ತು. ಈ ವರ್ಷ ಅದು ಕೊನೆಗೂ ಸಂಪೂರ್ಣಗೊಳ್ಳುವುದರಲ್ಲಿತ್ತು. ಆದರೆ, ಆ ಸಮಯದಲ್ಲಿ ಅವರು ಆಸ್ಪತ್ರೆಗೆ ದಾಖಲಾದರು.
ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಗಣನೀಯ ಸೇವೆ ನೀಡಿದ ನಟ ರಜನಿಕಾಂತ್ ಅವರಿಗೆ ಈಗ ಆರೋಗ್ಯ ಕೈಕೊಟ್ಟಿದೆ. ಮೊದಲಿನಷ್ಟು ಜೋಶ್ ಈಗ ಅವರಲ್ಲಿ ಉಳಿದಿಲ್ಲ. ಕೆಲ ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡಬೇಕು ಎನ್ನುವ ಬಯಕೆ ಅವರಿಗಿದ್ದರೂ ಅದಕ್ಕೆ ಅವರ ದೇಹ ಸ್ಪಂದಿಸುವುದಿಲ್ಲ. ಈಗ ರಜನಿಕಾಂತ್ ಚಿತ್ರರಂಗದಿಂದ ನಿವೃತ್ತಿ ಹೊಂದುವ ಬಗ್ಗೆ ಮೌನ ಮುರಿದಿದ್ದಾರೆ.
ರಜನಿಕಾಂತ್ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾತು ಹಲವು ವರ್ಷಗಳಿಂದ ಪ್ರಚಲಿತದಲ್ಲಿತ್ತು. ಈ ವರ್ಷ ಅದು ಕೊನೆಗೂ ಸಂಪೂರ್ಣಗೊಳ್ಳುವುದರಲ್ಲಿತ್ತು. ಆದರೆ, ಆ ಸಮಯದಲ್ಲಿ ಅವರು ಆಸ್ಪತ್ರೆಗೆ ದಾಖಲಾದರು. ಈ ಮೂಲಕ ಪಕ್ಷ ಸ್ಥಾಪಿಸುವ ನಿರ್ಧಾರದಿಂದ ಹಿಂದೆ ಸರಿದರು. ಈಗ ಅವರು ಚಿತ್ರರಂಗದಿಂದಲೂ ದೂರ ಸರಿಯುತ್ತಾರೆ ಎನ್ನಲಾಗಿದೆ.
‘ಅಣ್ಣಾಥೆ’ ಸಿನಿಮಾದ ಶೂಟಿಂಗ್ಗಾಗಿ ರಜನಿಕಾಂತ್ ಹೈದರಾಬಾದ್ಗೆ ತೆರಳಿದ್ದರು. ಒಂದು ತಿಂಗಳ ಕಾಲ ಅಲ್ಲಿಯೇ ಇದ್ದು, ಶೂಟ್ ಪೂರ್ಣಗೊಳಿಸಿದ್ದಾರೆ. ಕುಂಬಳಕಾಯಿ ಒಡೆಯುವ ದಿನ ಅಣ್ಣಾಥೆ ತಂಡದ ಕೆಲವರ ಜತೆ ರಜನಿಕಾಂತ್ ತುಂಬಾನೇ ಭಾವುಕರಾಗಿ ಮಾತನಾಡಿದ್ದರಂತೆ.
ಆರೋಗ್ಯ ಪದೇ ಪದೇ ಕೈಕೊಡುತ್ತಿರುವುದು ರಜನಿಕಾಂತ್ ಆತಂಕಕ್ಕೆ ಕಾರಣವಾಗಿದೆ. ಹಾಗಂತ ಅವರಿಗೆ ಅಭಿಮಾನಿಗಳಿಗೆ ನಿರಾಸೆ ಮಾಡುವ ಉದ್ದೇಶ ಇಲ್ಲ. ಹೀಗಾಗಿ, ದೇಹ ಸ್ಪಂದಿಸಿದರೆ ಶೀಘ್ರವೇ ಒಂದೆರಡು ಚಿತ್ರಗಳ ಶೂಟಿಂಗ್ ಮುಗಿಸುವ ಆಲೋಚನೆ ಅವರದ್ದು. ಒಂದೊಮ್ಮೆ ಆರೋಗ್ಯ ಹದಗೆಟ್ಟರೆ ‘ಅಣ್ಣಾಥೆ’ ಅವರ ಕೊನೆಯ ಚಿತ್ರವಾಗಲಿದೆ.
ಐದು ದಶಕಗಳ ಕಾಲ ಸಿನಿಮಾರಂಗದಲ್ಲಿ ಶ್ರಮಿಸಿದ ರಜನಿಕಾಂತ್ 160ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಸಾಕಷ್ಟು ಚಿತ್ರಗಳು ಸೂಪರ್ ಹಿಟ್ ಆಗಿವೆ. ಈಗಲೂ ರಜನಿಕಾಂತ್ ಫ್ಯಾನ್ಸ್ ಬಳಗ ತುಂಬಾನೇ ದೊಡ್ಡದಿದೆ. ಹೀಗಾಗಿ, ಅವರ ಆರೋಗ್ಯ ಉತ್ತಮವಾಗಿರಲಿ ಎಂಬುದು ಅಭಿಮಾನಿಗಳ ಆಶಯ.
ಅಣ್ಣಾಥೆ ಸಿನಿಮಾಗೆ ವಿಶ್ವಾಸಮ್ ಖ್ಯಾತಿ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೀರ್ತಿ ಸುರೇಶ್, ನಯನತಾರಾ, ಮೀನಾ, ಪ್ರಕಾಶ್ ರಾಜ್ ಮತ್ತು ಖುಷ್ಬೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಅಣ್ಣಾಥೆ ಶೂಟಿಂಗ್ ಮುಗಿದ ಬೆನ್ನಲ್ಲೇ ಕೊವಿಡ್ ಎರಡನೇ ಡೋಸ್ ಲಸಿಕೆ ಪಡೆದ ರಜನಿಕಾಂತ್