ಅಣ್ಣಾಥೆ ಶೂಟಿಂಗ್ ಮುಗಿದ ಬೆನ್ನಲ್ಲೇ ಕೊವಿಡ್ ಎರಡನೇ ಡೋಸ್ ಲಸಿಕೆ ಪಡೆದ ರಜನಿಕಾಂತ್

ಅಣ್ಣಾಥೆ ಶೂಟಿಂಗ್ ಮುಗಿದ ಬೆನ್ನಲ್ಲೇ ಕೊವಿಡ್ ಎರಡನೇ ಡೋಸ್ ಲಸಿಕೆ ಪಡೆದ ರಜನಿಕಾಂತ್
ಲಸಿಕೆ ತೆಗೆದುಕೊಂಡ ರಜನಿಕಾಂತ್

2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಜನಿಕಾಂತ್ ಸ್ಪರ್ಧಿಸುವವರಿದ್ದರು. ಆದರೆ, ಪಕ್ಷ ಸ್ಥಾಪನೆಗೂ ಮೊದಲು ಅವರಿಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ, ರಾಜಕೀಯದಿಂದ ಅವರು ಹಿಂದೆ ಸರಿದಿದ್ದರು.

Rajesh Duggumane

|

May 13, 2021 | 6:01 PM

ಮಿತಿಮೀರಿ ಹರಡುತ್ತಿರುವ ಕೊರೊನಾ ವೈರಸ್ ತಡೆಯೋಕೆ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಜತೆಗೆ ಕೊವಿಡ್ ಲಸಿಕೆ ನೀಡುವ ಕಾರ್ಯಕ್ಕೂ ಚುರುಕುಮುಟ್ಟಿಸಲಾಗಿದೆ. ಈಗ ನಟ ರಜನಿಕಾಂತ್ ಎರಡನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ. ಈ ವಿಚಾರವನ್ನು ಅವರ ಪುತ್ರಿ ಸೌಂದರ್ಯಾ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಇಂದು ಚೆನ್ನೈನಲ್ಲಿ ರಜನಿಕಾಂತ್ ತಮ್ಮ ನಿವಾಸದಲ್ಲೇ ಕೊರೊನಾ ಲಸಿಕೆ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೌಂದರ್ಯಾ, ನಮ್ಮ ತಲೈವಾ ಕೊವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಒಟ್ಟಾಗಿ ಹೋರಾಡಿ ಗೆಲ್ಲೋಣ ಎಂದಿದ್ದಾರೆ.

ಕೊರೊನಾ ವ್ಯಾಕ್ಸಿನ್ ನೀಡಲು ಅವಕಾಶ ಕೊಟ್ಟ ನಂತರ ಮೊದಲು ಫ್ರಂಟ್ಲೈನ್ ವರ್ಕರ್ಸ್ಗೆ ಅವಕಾಶ ನೀಡಲಾಗಿತ್ತು. ಇದಾದ ನಂತರ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಯಿತು. ಆಗ ರಜನಿಕಾಂತ್ ಮೊದಲ ಡೋಸ್ ಪಡೆದುಕೊಂಡಿದ್ದರು.

ಅಣ್ಣಾಥೆ ಸಿನಿಮಾದ ಚಿತ್ರೀಕರಣಕ್ಕಾಗಿ ರಜನಿಕಾಂತ್ ಹೈದರಾಬಾದ್‌ಗೆ ತೆರಳಿದ್ದರು. ಕಳೆದ ಡಿಸೆಂಬರ್‌ನಲ್ಲಿ ಅಣ್ಣಾಥೆ ಶೂಟಿಂಗ್ ಶುರುವಾಗಿತ್ತು. ಕೆಲವೇ ದಿನಗಳಲ್ಲಿ ತಂಡದ ಕೆಲ ಮಂದಿಗೆ ಕೊರೊನಾ ಪಾಸಿಟಿವ್‌ ಆಗಿತ್ತು. ಆದ್ದರಿಂದ ಶೂಟಿಂಗ್‌ ಸ್ಥಗಿತಗೊಳಿಸಲಾಗಿತ್ತು. ಏಪ್ರಿಲ್ನಲ್ಲಿ ಚಿತ್ರೀಕರಣ ಮತ್ತೆ ಆರಂಭವಾಗಿತ್ತು. ನಿರಂತರವಾಗಿ ಅವರು ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು.

2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಜನಿಕಾಂತ್ ಸ್ಪರ್ಧಿಸುವವರಿದ್ದರು. ಆದರೆ, ಪಕ್ಷ ಸ್ಥಾಪನೆಗೂ ಮೊದಲು ಅವರಿಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ, ರಾಜಕೀಯದಿಂದ ಅವರು ಹಿಂದೆ ಸರಿದಿದ್ದರು. ರಜನಿ ಜತೆಗೆ ಕಮಲ್ ಹಾಸನ್ ಕೂಡ ಕೊರೊನಾ ಲಸಿಕೆ ಪಡೆದಿದ್ದಾರೆ. ಈ ಫೋಟೋವನ್ನು ಅವರು ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಹೆಚ್ಚಾಗಿದ್ರೂ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಟ ರಜನಿಕಾಂತ್ ‘ಅಣ್ಣಾಥೆ’ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ!

Follow us on

Related Stories

Most Read Stories

Click on your DTH Provider to Add TV9 Kannada