ನಿಮ್ಮ ಇಮೇಜ್ಗಿಂತ ಜನರ ಪ್ರಾಣ ಮುಖ್ಯ; ಮೋದಿ ಸರ್ಕಾರವನ್ನು ಟೀಕಿಸಿ ಅಚ್ಚರಿ ಮೂಡಿಸಿದ ಅನುಪಮ್ ಖೇರ್
Narednra Modi: ಸದ್ಯ ಆಗುತ್ತಿರುವುದಕ್ಕೆಲ್ಲ ಸರ್ಕಾರವೇ ಕಾರಣ. ಬರೀ ಇಮೇಜ್ ಸೃಷ್ಟಿ ಮಾಡಿಕೊಳ್ಳುವುದಕ್ಕಿಂತ ಜನರ ಪ್ರಾಣ ಕೂಡ ಮುಖ್ಯ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಅನುಪಮ್ ಖೇರ್ ಟೀಕಿಸಿದ್ದಾರೆ.
ಬಾಲಿವುಡ್ ನಟ ಅನುಪಮ್ ಖೇರ್ ಅವರು ಆಗಾಗ ರಾಜಕೀಯ ವಿಚಾರಗಳಲ್ಲಿ ಮೂಗು ತೂರಿಸುತ್ತಾರೆ. ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೆಚ್ಚಾಗಿ ಅವರು ಮೋದಿ ಸರ್ಕಾರವನ್ನು ಓಲೈಸುತ್ತಾರೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಆ ಕಾರಣಕ್ಕಾಗಿ ಅವರು ನೆಟ್ಟಿಗರಿಂದ ಪರ ಮತ್ತು ವಿರೋಧ ಎರಡೂ ಬಗೆಯ ಪ್ರತಿಕ್ರಿಯೆ ಪಡೆಯುತ್ತಾರೆ. ಇಂಥ ಅನುಪಮ್ ಖೇರ್ ಅವರು ಈಗ ನೀಡಿರುವ ಒಂದು ಹೇಳಿಕೆ ಅಚ್ಚರಿ ಮೂಡಿಸಿದೆ.
ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಹಬ್ಬಿದೆ. ಅಂತ್ಯ ಸಂಸ್ಕಾರ ಮಾಡಲು ಕೂಡ ಜನರು ಹಲವೆಡೆ ಕಷ್ಟಪಡುತ್ತಿರುವ ಸನ್ನಿವೇಶ ಎದುರಾಗಿದೆ. ಇದರ ಬಗ್ಗೆ ಮಾತನಾಡಿರುವ ಅನುಪಮ್ ಖೇರ್ ಅವರು ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. ಈ ಅನಾರೋಗ್ಯದ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದೆ. ಈ ಪರಿಸ್ಥಿತಿಯನ್ನು ಇನ್ನೊಂದು ಪಕ್ಷದವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಕೂಡ ಸರಿಯಲ್ಲ. ಸದ್ಯ ಆಗುತ್ತಿರುವುದಕ್ಕೆಲ್ಲ ಸರ್ಕಾರವೇ ಕಾರಣ. ಬರೀ ಇಮೇಜ್ ಸೃಷ್ಟಿಸಿಕೊಳ್ಳುವುದಕ್ಕಿಂತ ಜನರ ಪ್ರಾಣ ಕೂಡ ಮುಖ್ಯ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ಅನುಪಮ್ ಖೇರ್ ಅವರು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕೆಲವೇ ದಿನಗಳ ಹಿಂದಿ ಅನುಪಮ್ ಖೇರ್ ಮತ್ತು ಅವರ ಪತ್ನಿ ಕಿರಣ್ ಖೇರ್ ಅವರು ಕೊವಿಡ್ ವ್ಯಾಕ್ಸಿನ್ ಪಡೆದುಕೊಂಡರು. ಅದಕ್ಕೂ ಮುನ್ನ ಕಿರಣ್ ಖೇರ್ ಆರೋಗ್ಯದ ಬಗ್ಗೆ ಗಾಸಿಪ್ಗಳು ಹರಿದಾಡಿದ್ದವು. ಕಿರಣ್ ಸಾವಿನ ಸುದ್ದಿಯನ್ನು ತಳ್ಳಿಹಾಕಿರುವ ಅವರು ಸ್ಪಷ್ಟನೆ ನೀಡಿದ್ದರು.
‘ಕಿರಣ್ ಆರೋಗ್ಯ ಬಗ್ಗೆ ವದಂತಿ ಹರಿದಾಡುತ್ತಿದೆ. ಅದೆಲ್ಲವೂ ಸುಳ್ಳು. ಅವರು ಕ್ಷೇಮವಾಗಿದ್ದಾರೆ. ಅವರು ಕೊವಿಡ್ಗೆ 2ನೇ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ನೆಗೆಟಿವ್ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಜನರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಎಲ್ಲರೂ ಸೇಫ್ ಆಗಿರಿ’ ಎಂದು ಅನುಪಮ್ ಖೇರ್ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.
ಇದನ್ನೂ ಓದಿ:
Kirron Kher: ಅನುಪಮ್ ಖೇರ್ ಪತ್ನಿ, ಖ್ಯಾತ ನಟಿ ಕಿರಣ್ ಖೇರ್ ನಿಧನದ ವದಂತಿಗೆ ಬ್ರೇಕ್
ಆಕ್ಸಿಜನ್ ಬೇಕು ಎಂದು ಮೋದಿಗೆ ಕೈ ಮುಗಿದು ಬೇಡಿಕೊಂಡಿದ್ದ ನಟ ರಾಹುಲ್ ಕೊರೊನಾದಿಂದ ನಿಧನ