ವೆಬ್​ ಸಿರೀಸ್​ ರೂಪದಲ್ಲಿ ಬರಲಿದೆ ಕನ್ನಡದ ಸೂಪರ್​ ಹಿಟ್​ ಧಾರಾವಾಹಿ ಮಾಯಾಮೃಗ; ಪ್ರೇಕ್ಷಕರಿಗೆ ಗುಡ್​ ನ್ಯೂಸ್​

TN Seetharam: 1998ರಲ್ಲಿ ಪ್ರಸಾರ ಆರಂಭಿಸಿದ ‘ಮಾಯಾಮೃಗ’ ಧಾರಾವಾಹಿ ನಂತರ 2014ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರವನ್ನೂ ಕಂಡಿತ್ತು. ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಮತ್ತೆ ಮಾಯಾಮೃಗವನ್ನು ಪರಿಚಯಿಸಲಾಗುತ್ತಿದೆ. ವೆಬ್​ ಸಿರೀಸ್​ ರೂಪದಲ್ಲಿ ಇದನ್ನು ಜನರ ಮುಂದಿಡಲು ಸಿದ್ಧತೆ ನಡೆದಿದೆ.

ವೆಬ್​ ಸಿರೀಸ್​ ರೂಪದಲ್ಲಿ ಬರಲಿದೆ ಕನ್ನಡದ ಸೂಪರ್​ ಹಿಟ್​ ಧಾರಾವಾಹಿ ಮಾಯಾಮೃಗ; ಪ್ರೇಕ್ಷಕರಿಗೆ ಗುಡ್​ ನ್ಯೂಸ್​
ಮಾಯಾಮೃಗ - ನಿರ್ದೇಶಕ ಟಿಎನ್​ ಸೀತಾರಾಮ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: May 27, 2021 | 3:19 PM

ಕನ್ನಡ ಕಿರುತೆರೆ ಲೋಕದಲ್ಲಿ ‘ಮಾಯಾಮೃಗ’ ಧಾರಾವಾಹಿ ಮಾಡಿದ ಮೋಡಿ ದೊಡ್ಡದು. ಟಿ.ಎನ್​. ಸೀತಾರಾಮ್​ ನಿರ್ದೇಶನದ ಈ ಸೀರಿಯಲ್​ ದೂರದರ್ಶನ ವಾಹಿನಿಯಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಇಂದಿಗೂ ಆ ಧಾರಾವಾಹಿಯನ್ನು ಜನರು ನೆನಪು ಮಾಡಿಕೊಳ್ಳುತ್ತಾರೆ. ಅಂಥ ಎಲ್ಲ ಪ್ರೇಕ್ಷಕರಿಗಾಗಿ ನಿರ್ದೇಶಕ ಟಿ.ಎನ್​. ಸೀತಾರಾಮ್​ ಅವರು ಒಂದು ಗುಡ್​ ನ್ಯೂಸ್​ ನೀಡಿದ್ದಾರೆ. ವೀಕ್ಷಕರು ಮತ್ತೆ ಮಾಯಾಮೃಗ ಧಾರಾವಾಹಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿದೆ. ಅದು ಕೂಡ ಹೊಸ ರೂಪದಲ್ಲಿ ಎಂಬುದು ವಿಶೇಷ.

1998ರಲ್ಲಿ ಪ್ರಸಾರ ಆರಂಭಿಸಿದ ‘ಮಾಯಾಮೃಗ’ ಸೀರಿಯಲ್​ನಲ್ಲಿ ಎಚ್​.ಜಿ. ದತ್ತಾತ್ರೇಯಾ (ದತ್ತಣ್ಣ), ಮಾಳವಿಕಾ ಅವಿನಾಶ್​, ಮಂಜು ಭಾಷಿಣಿ, ಎಂ.ಡಿ. ಪಲ್ಲವಿ, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ಅವಿನಾಶ್​, ಜಯಶ್ರೀ, ಲಕ್ಷ್ಮೀ ಚಂದ್ರಶೇಖರ್​ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದರು. 2014ರಲ್ಲಿ ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರವನ್ನೂ ಕಂಡಿತ್ತು. ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಮತ್ತೆ ಮಾಯಾಮೃಗವನ್ನು ಪರಿಚಯಿಸಲಾಗುತ್ತಿದೆ. ವೆಬ್​ ಸಿರೀಸ್​ ರೂಪದಲ್ಲಿ ಇದನ್ನು ಜನರ ಮುಂದಿಡಲು ಸಿದ್ಧತೆ ನಡೆದಿದೆ. ಯೂಟ್ಯೂಬ್​ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಸ್ವತಃ ಟಿ.ಎನ್​. ಸೀತಾರಾಮ್​ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಟಿಎನ್​ ಸೀತಾರಾಮ್​ ಪೋಸ್ಟ್ ಮಾಡಿದ್ದಾರೆ. ‘ಮಾಯಾಮೃಗ ಧಾರಾವಾಹಿ ಕನ್ನಡದ ಶ್ರೇಷ್ಠ ಧಾರಾವಾಹಿಗಳಲ್ಲಿ ಒಂದು. ಅದೊಂದು ದಂತಕಥೆ. ಅಂಥ ಮಾಯಾಮೃಗ ಇನ್ನೊಂದು ವಾರದಲ್ಲಿ ವೆಬ್​ ಸಿರೀಸ್​ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಆ ಮೂಲಕ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಭೂಮಿಕಾ ಟಾಕೀಸ್​ ಯೂಟ್ಯೂಬ್​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಸೀತಾರಾಮ್​ ಜೊತೆಯಲ್ಲಿ ಪಿ. ಶೇಷಾದ್ರಿ ಅವರು ಕೂಡ ‘ಮಾಯಾಮೃಗ’ಕ್ಕೆ ನಿರ್ದೇಶನ ಮಾಡಿದ್ದರು.

ಮಾಯಾಮೃಗ ಬಳಿಕ ಸೀತಾರಾಮ್​ ಅವರ ಬತ್ತಳಿಕೆಯಿಂದ ಹಲವು ಧಾರಾವಾಹಿಗಳು ಮೂಡಿಬಂದವು. ಆದರೂ ಅವುಗಳ ಪೈಕಿ ಮಾಯಾಮೃಗಕ್ಕೆ ವಿಶೇಷ ಸ್ಥಾನಮಾನವಿದೆ.​ ವೆಬ್​ ಸಿರೀಸ್​ ರೂಪದಲ್ಲಿ ಈ ಸೀರಿಯಲ್ ಬರುತ್ತಿರುವುದಕ್ಕೆ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ‘ಸಬ್​ ಟೈಟಲ್​ ಅಳವಡಿಸಿ. ಆ ಮೂಲಕ ಬೇರೆ ಭಾಷೆಯವರು ಕೂಡ ಮಾಯಾಮೃಗ​ ನೋಡುವಂತಾಗಲಿ’ ಎಂಬ ಸಲಹೆ ಜನರಿಂದ ಸಿಕ್ಕಿದೆ. ಕೊರೊನಾ ಕಾಲದಲ್ಲಿ ಎಲ್ಲರೂ ಮನೆಯಲ್ಲಿ ಲಾಕ್​ ಆಗಿರುವಾಗ ಇಂಥ ಒಳ್ಳೆಯ ಧಾರಾವಾಹಿಯ ಪ್ರಸಾರ ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್​ ಫಿಕ್ಸ್​; ಮೇಧಾ ವಿದ್ಯಾಭೂಷಣ​ ನಾಯಕಿ!

ಬಾಲಿವುಡ್​ ಕಲಾವಿದ ಕಬೀರ್​ ಬೇಡಿ ಇಟಲಿಯಲ್ಲಿ ‘ಮಾದಕ ನಟ’ ಎನಿಸಿಕೊಳ್ಳಲು ಕಾರಣ ಆಗಿದ್ದು ಆ ಒಂದು ಧಾರಾವಾಹಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ