‘ಲವ್ ಮಾಕ್ಟೇಲ್ ಸಿನಿಮಾ ಅದ್ಭುತ’; ESCN ಎಂದಿದ್ದ ಆಸ್ಟ್ರೇಲಿಯಾ ಪತ್ರಕರ್ತೆಗೆ ಈಗ ಕನ್ನಡ ಸಿನಿಮಾಗಳ ಮೇಲೆ ಒಲವು
Chloe Amanda Bailey: 2020ರಲ್ಲಿ ತೆರೆಗೆ ಬಂದ ಲವ್ ಮಾಕ್ಟೇಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಸಿನಿ ಬದುಕಿಗೆ ಈ ಚಿತ್ರ ಸಾಕಷ್ಟು ಮೈಲೇಜ್ ನೀಡಿತ್ತು.
ಆಸ್ಟ್ರೆಲಿಯಾದ ಜನಪ್ರಿಯ ಕ್ರೀಡಾ ಪತ್ರಕರ್ತೆ ಕ್ಲೊಯಿ ಅಮಂಡಾ ಬೈಲಿ ಇತ್ತೀಚೆಗೆ ‘ಈ ಸಲ ಕಪ್ ನಮ್ದೇ’ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿ ಕರ್ನಾಟಕದವರ ಮನ ಗೆದ್ದಿದ್ದರು. ಈಗ ಕನ್ನಡಿಗರಿಗೆ ಅವರು ಮತ್ತಷ್ಟು ಹತ್ತಿರವಾಗಿದ್ದಾರೆ. ಕ್ಲೊಯಿ ಕನ್ನಡ ಸಿನಿಮಾಗಳ ಬಗ್ಗೆ ಒಲವು ಹೆಚ್ಚಿಸಿಕೊಂಡಿದ್ದು, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟನೆಯ ‘ಲವ್ ಮಾಕ್ಟೇಲ್’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
2020ರಲ್ಲಿ ತೆರೆಗೆ ಬಂದ ‘ಲವ್ ಮಾಕ್ಟೇಲ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಸಿನಿ ಬದುಕಿಗೆ ಈ ಚಿತ್ರ ಸಾಕಷ್ಟು ಮೈಲೇಜ್ ನೀಡಿತ್ತು. ಈ ಸಿನಿಮಾವನ್ನು ನೋಡಿ ಕಣ್ಣೀರಿಟ್ಟವರ ಸಂಖ್ಯೆ ದೊಡ್ಡದಿದೆ. ಈಗ ಈ ಚಿತ್ರಕ್ಕೆ ದೂರದ ಆಸ್ಟ್ರೇಲಿಯಾದಿಂದ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಕ್ಲೊಯಿ ಅಮಂಡಾ ಬೈಲಿ ಸಿನಿಮಾ ನೋಡಿ ಟ್ವೀಟ್ ಮಾಡಿದ್ದಾರೆ.
‘ನಾನು ‘ಲವ್ ಮಾಕ್ಟೇಲ್’ ಸಿನಿಮಾ ನೋಡಿದೆ. ನಿಜಕ್ಕೂ ಇದು ಅತ್ಯುತ್ತಮ ಸಿನಿಮಾ. ನಾನು ಸಿನಿಮಾ ಉದ್ದಕ್ಕೂ ನಕ್ಕಿದ್ದೇನೆ. ಸಿನಿಮಾದ ಕ್ಲೈಮ್ಯಾಕ್ಸ್ ಬೇಸರ ಮೂಡಿಸುತ್ತದೆ. ಸಿನಿಮಾ ಮ್ಯೂಸಿಕ್ ಅದ್ಭುತವಾಗಿದೆ. ಸಿನಿಮಾದಲ್ಲಿ ಫನ್ ಇದೆ, ಬೇಸರ ಇದೆ. ಈ ಚಿತ್ರ ಎಲ್ಲಾ ಎಮೋಷನ್ಗಳನ್ನು ಒಳಗೊಂಡಿದೆ. ಲವ್ ಮಾಕ್ಟೇಲ್ 2 ಬರುತ್ತಿದೆ ಎಂದು ಕೇಳಲ್ಪಟ್ಟೆ’ ಎಂಬುದಾಗಿ ಅವರು ಬರೆದಕೊಂಡಿದ್ದಾರೆ.
I just watched Love Mocktail. You guys were right: great film. I smiled so much throughout it. Although the ending was sad it was a delight to watch. Music was great. It was funny, it had moments of sadness, it had all emotions covered & I just heard a 2nd one is being made ???
— Chloe-Amanda Bailey (@ChloeAmandaB) May 26, 2021
ಇನ್ನು, ಕ್ಲೊಯಿ ಅಮಂಡಾ ಯಶ್ ನಟನೆಯ ‘ಕೆಜಿಎಫ್‘ ಸಿನಿಮಾ ನೋಡಿದ್ದಾರಂತೆ. ಈ ಬಗ್ಗೆ ಅವರು ಕಮೆಂಟ್ನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ‘ಕೆಜಿಎಫ್ 2’ಗಾಗಿ ಕಾದಿದ್ದೇನೆ ಎಂಬುದಾಗಿಯೂ ಬರೆದುಕೊಂಡಿದ್ದಾರೆ. ಸದ್ಯ, ಅವರ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.
ee sala cup namde ♥️ ಈ ಸಲ ಕಪ್ ನಮ್ದೇ ♥️ this time the cup is ours ♥️ pic.twitter.com/OhndCpOqXs
— Chloe-Amanda Bailey (@ChloeAmandaB) April 18, 2021
ಐಪಿಎಲ್ 14ನೇ ಸೀಸನ್ ಆರಂಭವಾದಾಗ ಆರ್ಸಿಬಿ ಜೆರ್ಸಿ ಹಾಕಿಕೊಂಡು ‘ಈ ಸಲ ಕಪ್ ನಮ್ದೇ’ ಎಂದು ಹಾಕಿದ್ದರು. ಈ ಮೂಲಕ ಸಾಕಷ್ಟು ಕನ್ನಡ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಈಗ ಲವ್ ಮಾಕ್ಟೇಲ್ ಸಿನಿಮಾ ಬಗ್ಗೆ ಅವರು ಕೊಟ್ಟ ಪ್ರತಿಕ್ರಿಯೆಯಿಂದ ಅವರ ಅಭಿಮಾನಿ ಬಳಗ ಮತ್ತಷ್ಟು ಹಿರಿದಾಗಿದೆ.
ಇದನ್ನೂ ಓದಿ: ಕೊವಿಡ್ ಪಾಸಿಟಿವ್ ಆದರೂ ಅಭಿಮಾನ ಮರೆಯದ ಕೃಷ್ಣ-ಮಿಲನಾ!