ಕೊವಿಡ್​ ಪಾಸಿಟಿವ್​ ಆದರೂ ಅಭಿಮಾನ ಮರೆಯದ ಕೃಷ್ಣ-ಮಿಲನಾ!

ಲವ್​ ಮಾಕ್ಟೇಲ್​ ಯಶಸ್ಸಿ ನಂತರದಲ್ಲಿ ಕೃಷ್ಣ-ಮಿಲನಾ ವಿವಾಹವಾಗಿದ್ದರು. ನಂತರ ವಿದೇಶಕ್ಕೆ ಹನಿಮೂನ್​​ಗೆ ತೆರಳಿದ್ದ ಈ ಜೋಡಿ, ನಂತರ ಭಾರತಕ್ಕೆ ವಾಪಾಸಾಗಿತ್ತು. ಈಗ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಕೊವಿಡ್​ ಪಾಸಿಟಿವ್​ ಆದರೂ ಅಭಿಮಾನ ಮರೆಯದ ಕೃಷ್ಣ-ಮಿಲನಾ!
ಡಾರ್ಲಿನ್​ ಕೃಷ್ಣ- ಮಿಲನಾ ನಾಗರಾಜ್​

ಲವ್​​ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ದಂಪತಿಗೆ ಕೊರೊನಾ ಪಾಸಿಟಿವ್​ ಆದ ವಿಚಾರ ಇಂದು ಬೆಳಗ್ಗೆ ಖಾತ್ರಿಯಾಗಿತ್ತು. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಕೊರೊನಾ ಪಾಸಿಟಿವ್​ ಆಗಿದ್ದರೂ ಕೂಡ ಈ ಜೋಡಿ ಅಭಿಮಾನ ಮರೆತಿಲ್ಲ! ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಲವ್​ ಮಾಕ್ಟೇಲ್​ ಯಶಸ್ಸಿ ನಂತರದಲ್ಲಿ ಕೃಷ್ಣ-ಮಿಲನಾ ವಿವಾಹವಾಗಿದ್ದರು. ನಂತರ ವಿದೇಶಕ್ಕೆ ಹನಿಮೂನ್​​ಗೆ ತೆರಳಿದ್ದ ಈ ಜೋಡಿ, ನಂತರ ಭಾರತಕ್ಕೆ ವಾಪಾಸಾಗಿತ್ತು. ಈಗ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಈ ಜೋಡಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಮ್ಮ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

 

View this post on Instagram

 

A post shared by Darling Krishna (@darling_krishnaa)

ಈಗ ಇಬ್ಬರೂ ಮನೆಯಲ್ಲಿ ಕ್ವಾರಂಟೈನ್​ ಆಗಿದ್ದಾರೆ. ಇಂದು ಆರ್​ಸಿಬಿ vs ಸನ್​ ರೈಸರ್ಸ್​ ಹೈದರಾಬಾದ್ ಮ್ಯಾಚ್​ ನಡೆಯುತ್ತಿದೆ. ಕ್ವಾರಂಟೈನ್​ನಲ್ಲಿ ಕೂತು ಇಬ್ಬರೂ ಆರ್​ಸಿಬಿ ಮ್ಯಾಚ್​ ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಮ್ಯಾಚ್​ನ ನೋಡಿ ಎಂಜಾಯ್​ ಮಾಡಿ ಎಂದು ಪೋಸ್ಟ್​ ಹಾಕಿದ್ದಾರೆ.

 

View this post on Instagram

 

A post shared by Darling Krishna (@darling_krishnaa)

ಈ ಮೊದಲಿನಿಂದಲೂ ಕೃಷ ಹಾಗೂ ಮಿಲನಾ ಆರ್​ಸಿಬಿ ಅಭಿಮಾನಿಗಳು. ಈಗ ಕ್ವಾರಂಟೈನ್​ನಲ್ಲಿ ಕೂತು ಅವರು ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಆರ್​ಸಿಬಿಗೆ ಬೆಂಬಲ ಕೂಡ ನೀಡುತ್ತಿದ್ದಾರೆ.

ಇದನ್ನೂ ಓದಿ: Darling Krishna Milana Nagaraj Coronavirus| ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್‌ ನೂತನ ದಂಪತಿಗೆ ಕೊರೊನಾ ಸೋಂಕು ದೃಢ

Read Full Article

Click on your DTH Provider to Add TV9 Kannada