ಶೋ ಶೂಟಿಂಗ್​ ವೇಳೆ ಪ್ರಿಯಾಂಕಾ ಪತಿ ನಿಕ್​ ಜೋನಸ್​ಗೆ ಗಾಯ, ಆಸ್ಪತ್ರೆಗೆ ದಾಖಲು

ಶೋ ಶೂಟಿಂಗ್​ ವೇಳೆ ಪ್ರಿಯಾಂಕಾ ಪತಿ ನಿಕ್​ ಜೋನಸ್​ಗೆ ಗಾಯ, ಆಸ್ಪತ್ರೆಗೆ ದಾಖಲು
ಪ್ರಿಯಾಂಕಾ ಚೋಪ್ರಾ - ನಿಕ್​ ಜೋನಸ್

ಹೊಸ ಶೋ ಒಂದರ ಶೂಟಿಂಗ್​ನಲ್ಲಿ ನಿಕ್​ ಜೋನಾಸ್​ ಪಾಲ್ಗೊಂಡಿದ್ದರು. ಈ ವೇಳೆ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೀಗಾಗಿ, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Rajesh Duggumane

|

May 17, 2021 | 5:51 PM

ಪ್ರಿಯಾಂಕಾ ಚೋಪ್ರಾ ಪತಿ, ಅಮೆರಿಕ ಗಾಯಕ ನಿಕ್​ ಜೋನಸ್ ಶೋ ಒಂದರ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಉಂಟಾದ ಅವಘಡದಲ್ಲಿ ಅವರಿಗೆ ಗಾಯಗಳಾಗಿವೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದ ಮೂಲಗಳು ಹೇಳಿವೆ. ಈ ವಿಚಾರ ತಿಳಿಯುತ್ತಿದ್ದಂತೆ ನಿಕ್​ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಕೋರಿದ್ದಾರೆ.

ಹೊಸ ಶೋ ಒಂದರ ಶೂಟಿಂಗ್​ನಲ್ಲಿ ನಿಕ್​ ಜೋನಾಸ್​ ಪಾಲ್ಗೊಂಡಿದ್ದರು. ಈ ವೇಳೆ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೀಗಾಗಿ, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. ಮೂಲಗಳ ಪ್ರಕಾರ ಅವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ನಡೆದಿದ್ದಾರೆ ಎನ್ನಲಾಗಿದೆ.

ಭಾರತದಲ್ಲಿ ಕೊರೊನಾ ವೈರಸ್​ ಮಿತಿಮೀರಿ ಹಬ್ಬುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಯಾವುದೇ ವೈದ್ಯಕೀಯ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಆಕ್ಸಿಜನ್​ ಸಿಲಿಂಡರ್​ಗಳಿಗಾಗಿ ರೋಗಿಗಳು ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ನಿಕ್​ ಜೋನಸ್​ ಅವರು ಭಾರತಕ್ಕಾಗಿ ಮಿಡಿದಿದ್ದರು. ಭಾರತದಲ್ಲಿನ ಕೊವಿಡ್​ ಸೋಂಕಿತರಿಗೆ ಸಹಾಯ ಮಾಡಲು ಅವರು ಮುಂದೆ ಬಂದಿದ್ದರು.

ಭಾರತಕ್ಕೆ ವ್ಯಾಕ್ಸಿನ್​ ಕಳಿಸಿಕೊಡಿ ಎಂದು ಅಮೆರಿಕಕ್ಕೆ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಮನವಿ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ಅವರೀಗ ಪತಿ ನಿಕ್​ ಜೋನಸ್​ ಜೊತೆ ಸೇರಿ ದೇಣಿಗೆ ಸಂಗ್ರಹಕ್ಕೆ ಕರೆ ನೀಡಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಮತ್ತು ನಿಕ್​ ಜೋನಸ್​ ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

‘ಕಳೆದ ತಿಂಗಳಿನಿಂದ ಕೊವಿಡ್​ ಪ್ರಕರಣಗಳ ಸಂಖ್ಯೆ ದಿಢೀರ್​ ಹೆಚ್ಚಾಗಿರುವುದನ್ನು ನಾವು ನೋಡಿದ್ದೇವೆ. ಭಾರತದಲ್ಲಿ ಪರಿಸ್ಥಿತಿ ಕೈ ಮೀರಿದೆ. ಸೋಂಕಿತರ ಸಂಖ್ಯೆ ನೋಡಿದರೆ ಶಾಕಿಂಗ್​ ಆಗಿದೆ. ಇದನ್ನು ಈಗಲೇ ತಡೆಯಬೇಕಿದೆ. ಪ್ರತಿಯೊಬ್ಬರೂ ಸುರಕ್ಷಿತವಾಗುವವರೆಗೆ ಇಲ್ಲಿ ಯಾರೂ ಸೇಫ್​ ಅಲ್ಲ’ ಎಂದು ಕೊವಿಡ್​ನ ಗಂಭೀರತೆಯನ್ನು ಅರ್ಥ ಮಾಡಿಸಲು ಈ ದಂಪತಿ ಪ್ರಯತ್ನಿಸಿದ್ದರು.

ಇದನ್ನೂ ಓದಿ: ಬೆನ್ನಿಗೆ ಕಾಳಿ ಮಾತೆ ಚಿತ್ರವಿರುವ ಜಾಕೆಟ್​ ತೊಟ್ಟು, ಪತಿ ನಿಕ್​ ಕೈಹಿಡಿದು ಹೊರಟ ಪ್ರಿಯಾಂಕಾ ಚೋಪ್ರಾ ಫೋಟೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada