AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ್ಣುವರ್ಧನ್​ ಜತೆ ನಟಿಸಿದ್ದ ಸುಧಾ ಚಂದ್ರನ್​ ತಂದೆ ನಿಧನ; ಭಾವುಕರಾದ ನಟಿ

ದೇಹದ ಉಷ್ಣತೆ ಮಿತಿ ಮೀರಿತ್ತು. ಅವರಿಗೆ ಸಕ್ಕರೆ ಕಾಯಿಲೆ​ ಇತ್ತು. ವಯಸ್ಸು 86 ದಾಟಿತ್ತು. ಅವರ ಅಂಗಗಳು ಒಂದೊಂದೇ ಕೆಲಸ ಮಾಡುವುದನ್ನು ನಿಲ್ಲಿಸಿದ್ದವು ಎಂದು ತಂದೆ ಸಾವಿಗೆ ಸುಧಾ ಕಾರಣ ನೀಡಿದ್ದಾರೆ.

ವಿಷ್ಣುವರ್ಧನ್​ ಜತೆ ನಟಿಸಿದ್ದ ಸುಧಾ ಚಂದ್ರನ್​ ತಂದೆ ನಿಧನ; ಭಾವುಕರಾದ ನಟಿ
ಸುಧಾ ಚಂದ್ರನ್
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 17, 2021 | 5:25 PM

ಹಿಂದಿ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಕೆ.ಡಿ. ಚಂದ್ರನ್​ ಅವರು ಮೇ 16ರಂದು ಮೃತಪಟ್ಟಿದ್ದಾರೆ. ಕೆಲ ವರ್ಷಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಈಗ ಕೊನೆ ಉಸಿರೆಳೆದಿದ್ದಾರೆ. ಈ ವಿಚಾರವನ್ನು ಅವರ ಮಗಳು ಹಾಗೂ ನಟಿ ಸುಧಾ ಚಂದ್ರನ್​ ಖಚಿತಪಡಿಸಿದ್ದಾರೆ.

‘ನನ್ನ ತಂದೆಗೆ ಕಳೆದ ಕೆಲ ದಿನಗಳಿಂದ ಜ್ವರ ಇತ್ತು. ನಾವು ಕೊವಿಡ್​ ಅಂದುಕೊಂಡೆವು. ಆದರೆ, ಕೊರೊನಾ ನೆಗೆಟಿವ್​ ಬಂದಿತ್ತು. ಜ್ವರ ಮಾತ್ರ ಕಡಿಮೆ ಆಗಿರಲಿಲ್ಲ. ದೇಹದ ಉಷ್ಣತೆ ಮಿತಿ ಮೀರಿತ್ತು. ಅವರಿಗೆ ಸಕ್ಕರೆ ಕಾಯಿಲೆ​ ಇತ್ತು. ವಯಸ್ಸು 86 ದಾಟಿತ್ತು. ಅವರ ಅಂಗಗಳು ಒಂದೊಂದೇ ಕೆಲಸ ಮಾಡುವುದನ್ನು ನಿಲ್ಲಿಸಿದ್ದವು’ ಎಂದು ಸುಧಾ ತಂದೆ ಸಾವಿಗೆ ಕಾರಣ ನೀಡಿದ್ದಾರೆ.

‘2004ರಲ್ಲಿ ನಾನು ಅಪಘಾತಕ್ಕೆ ಒಳಗಾಗಿದ್ದೆ. ನನ್ನ ಕಾಲು ಮುರಿದು ಹೋಗಿತ್ತು. ಆಗ ತಂದೆ ನನ್ನ ಬಳಿ ಬಂದು, ಹೆದರಬೇಡ ನಾನು ನಿನಗೆ ಕಾಲಾಗಿ ನಿಂತುಕೊಳ್ಳುತ್ತೇನೆ ಎಂದಿದ್ದರು. ನನ್ನ ತಂದೆ ಬಗ್ಗೆ ನನಗೆ ವಿಶೇಷ ಗೌರವ. ಅವರು ನನಗೆ ಹೋರಾಡುವುದನ್ನು ಕಲಿಸಿದ್ದಾರೆ. ಹಿಡಿದ ಕೆಲಸ ಪೂರ್ಣಗೊಳಿಸೋಕೆ ಕಲಿಸಿಕೊಟ್ಟಿದ್ದು ಅವರೇ. ಅಪಘಾತವಾದ ನಂತರವೂ ಭರತನಾಟ್ಯ ಮುಂದುವರಿಸಲು ಕಾರಣ ಅವರೇ  ಎಂದಿದ್ದಾರೆ ಸುಧಾ.

‘ನನಗೆ ಅಪಘಾತವಾದ ವರ್ಷವೇ ಅಮ್ಮ ತೀರಿಕೊಂಡರು. ಅದಾದ ನಂತರ 9 ವರ್ಷಗಳ ಕಾಲ ತಂದೆ ನನ್ನ ಜತೆಗೇ ಇದ್ದರು. ಬೆಳಗ್ಗೆ ಬೇಗ ಏಳುತ್ತಿದ್ದರು. ಅಮ್ಮ ಮಾಡುವ ಕೆಲಸವನ್ನು ಅವರೇ ಮಾಡುತ್ತಿದ್ದರು. ನನಗೆ ಅಮ್ಮ ಇಲ್ಲ ಎನ್ನುವ ಭಾವನೆ ಕಾಡೋಕೆ ಅವರು ಯಾವಾಗಲೂ ಅವಕಾಶ ನೀಡಿಲ್ಲ’ ಎಂದಿದ್ದಾರೆ ಅವರು.

1984ರಲ್ಲಿ ತೆರೆಗೆ ಬಂದ ತೆಲುಗಿನ ‘ಮಯೂರಿ’ ಸಿನಿಮಾ ಮೂಲಕ ಸುಧಾ ಬಣ್ಣದ ಬದುಕು ಆರಂಭಿಸಿದರು. 1988ರಲ್ಲಿ ತೆರೆಗೆ ಬಂದ ವಿಷ್ಣುವರ್ಧನ್​ ನಟನೆಯ ‘ಒಲವಿನ ಆಸರೆ’ ಚಿತ್ರದಲ್ಲಿ ಚಂದ್ರಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ದಕ್ಷಿಣ ಭಾರತಕ್ಕಿಂತ ಅವರು ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿದ್ದಾರೆ.

ಇದನ್ನೂ ಓದಿ: ರೈತರ ಸಹಾಯಕ್ಕೆ ನಿಂತ ಉಪೇಂದ್ರ; ಬೆಳೆ ಖರೀದಿಸಿ, ಸಂಕಷ್ಟದಲ್ಲಿ ಇರುವವರಿಗೆ ಹಂಚಿದ ನಟ

ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ