ಮಿಸ್​ ಯೂನಿವರ್ಸ್​ ಮೂರನೇ ರನ್ನರ್​ ಅಪ್​ ಅಡ್ಲಿನ್​ ಕಾಸ್ಟಿಲಿನೋಗೆ ಇದೆ ಮಂಗಳೂರು ಲಿಂಕ್​

ಅಡ್ಲಿನ್​ ಕಾಸ್ಟಿಲಿನೋ ಮ್ಯೂಸಿಕ್​ ವಿಡಿಯೋ ಮೂಲಕ ಎಲ್ಲರ ಗಮನಸೆಳೆದವರು. ಅರ್ಜುನ್​ ಕನುಂಗೋ ಅವರ ಮೆರೆ ದಿಲ್​ ವಿಚ್​ ಮ್ಯೂಸಿಕ್​ ವಿಡಿಯೋದಲ್ಲಿ ಅಡ್ಲಿನ್ ಕಾಣಿಸಿಕೊಂಡಿದ್ದರು.

ಮಿಸ್​ ಯೂನಿವರ್ಸ್​ ಮೂರನೇ ರನ್ನರ್​ ಅಪ್​ ಅಡ್ಲಿನ್​ ಕಾಸ್ಟಿಲಿನೋಗೆ ಇದೆ ಮಂಗಳೂರು ಲಿಂಕ್​
ಅಡ್ಲಿನ್​ ಕಾಸ್ಟಿಲಿನೋ
Follow us
ರಾಜೇಶ್ ದುಗ್ಗುಮನೆ
|

Updated on: May 17, 2021 | 7:50 PM

 69ನೇ ಮಿಸ್​ ಯೂನಿವರ್ಸ್​ ಸೌಂದರ್ಯ ಸ್ಪರ್ಧೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ. ಇದರಲ್ಲಿ ಆ್ಯಂಡಿಯಾ ಮೆಜಾ ಅವರು ಮಿಸ್​ ಯೂನಿವರ್ಸ್ ಆಗಿ ಹೊರ ಹೊಮ್ಮಿದ್ದಾರೆ. ಭಾರತದಿಂದ ಸ್ಪರ್ಧಿಸಿದ್ದ ಅಡ್ಲಿನ್​ ಕಾಸ್ಟಿಲಿನೋ ಮೂರನೇ ರನ್ನರ್​ ಅಪ್ ಆಗಿ ಎಲ್ಲರ ಗಮನ ಸೆಳೆದರು. ಇವರಿಗೆ ಮಂಗಳೂರು ಲಿಂಕ್​ ಇದೆ ಅನ್ನೋದು ವಿಶೇಷ.

ಅಡ್ಲಿನ್​ ಕಾಸ್ಟಿಲಿನೋ ಮ್ಯೂಸಿಕ್​ ವಿಡಿಯೋ ಮೂಲಕ ಎಲ್ಲರ ಗಮನಸೆಳೆದವರು. ಅರ್ಜುನ್​ ಕನುಂಗೋ ಅವರ ಮೆರೆ ದಿಲ್​ ವಿಚ್​ ಮ್ಯೂಸಿಕ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಇದು ಫೆಬ್ರವರಿಯಲ್ಲಿ ರಿಲೀಸ್​ ಆಗಿತ್ತು. ಈ ಹಾಡು ಸುಮಾರು 20 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಶ್ರೇಯಸ್​ ಧರ್ಮಾಧಿಕಾರಿ ಅವರ ತೆರೆ ಬಿನಾ ಮ್ಯೂಸಿಕ್​ ವಿಡಿಯೋದಲ್ಲೂ ಅವರು ನಟಿಸಿದ್ದರು. ಇದು 2019ರಲ್ಲಿ ತೆರೆಗೆ ಬಂದಿತ್ತು. ಅಡ್ಲಿನ್​ ಕಾಸ್ಟಿಲಿನೋ ಇನ್​ಸ್ಟಾಗ್ರಾಂನಲ್ಲಿ ಭಾನುವಾರ (ಮೇ 16) ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಮೂರನೇ ರನ್ನರ್​ ಅಪ್​ ಆದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಅಡ್ಲಿನ್​ ಕಾಸ್ಟಿಲಿನೋ ತಂದೆ-ತಾಯಿ ಮಂಗಳೂರು ಮೂಲದವರು. ಇವರು ಬೆಳೆದಿದ್ದು ಕುವಾಯಿತ್​ನಲ್ಲಿ. ಮಿಸ್​ ಯೂನಿವರ್ಸ್​ 2021ರಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು.

ಮೆಕ್ಸಿಕೋದ ಸುಂದರಿ ಆ್ಯಂಡಿಯಾ ಮೆಜಾ ಅವರು 69ನೇ ಮಿಸ್​ ಯೂನಿವರ್ಸ್​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ಅವರು ಫ್ಯಾಷನ್​ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಮಿಸ್​ ಯೂನಿವರ್ಸ್​ ಕಿರೀಟ ಪಡೆದ ಮೆಕ್ಸಿಕೋದ ಮೂರನೇ ಸುಂದರಿಯಾಗಿ ಆ್ಯಂಡಿಯಾ ಮೆಜಾ ಹೊರ ಹೊಮ್ಮಿದ್ದಾರೆ. ಅವರಿಗೆ ವಿಶ್ವಾದ್ಯಂತ ಕೋಟ್ಯಂತರ ಜನರಿಂದ ಅಭಿನಂದನೆಗಳು ಸಲ್ಲಿಕೆ ಆಗುತ್ತಿವೆ.

ಮಿಸ್​ ಯೂನಿವರ್ಸ್​ ಅಂತಿಮ ಸುತ್ತಿನ ಸ್ಪರ್ಧೆ ಮೇ 16ರಂದು ಫ್ಲೋರಿಡಾದಲ್ಲಿ ನೆರವೇರಿತು. ಬ್ರೆಜಿಲ್​ನ ಜೂಲಿಯಾ ಗಾಮಾ ಅವರು ಮೊದಲ ರನ್ನರ್​ ಅಪ್​ ಆಗಿ ಹೊರಹೊಮ್ಮಿದರು. ಪೆರುವಿನ ಜೆನಿಕ್​ ಮಸೆಟಾ ಅವರು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು. ಭಾರತದಿಂದ ಸ್ಪರ್ಧಿಸಿದ್ದ ಅಡ್ಲಿನ್​ ಕಾಸ್ಟಿಲಿನೋ ಮೂರನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಹಂತದವರೆಗೆ ಪೈಪೋಟಿ ನೀಡಿದ ಅಡ್ಲಿನ್​ ಕಾಸ್ಟಿಲಿನೋ ಅವರಿಗೂ ಅಭಿನಂದನೆ ಸಲ್ಲಿಸಲಾಗುತ್ತಿದೆ.

ಇದನ್ನೂ ಓದಿ: ‘ನಮ್ಮ ಜನ ಸಾಯ್ತಿದ್ದಾರೆ’; ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ ದೇಶಕ್ಕಾಗಿ ಧ್ವನಿ ಎತ್ತಿದ ಮ್ಯಾನ್ಮಾರ್​ ಸುಂದರಿ