‘ನಮ್ಮ ಜನ ಸಾಯ್ತಿದ್ದಾರೆ’; ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ ದೇಶಕ್ಕಾಗಿ ಧ್ವನಿ ಎತ್ತಿದ ಮ್ಯಾನ್ಮಾರ್​ ಸುಂದರಿ

Miss Universe 2021: ಮ್ಯಾನ್ಮಾರ್​ನಲ್ಲಿ ಮಿಲಿಟರಿಯು ಅಧಿಕಾರ ವಶ ಪಡಿಸಿಕೊಂಡಿದೆ. ಜನರನ್ನು ಬರ್ಬರವಾಗಿ ನಡೆಸಿಕೊಳ್ಳಲಾಗುತ್ತಿರುವ ಬಗ್ಗೆ ವರದಿ ಆಗುತ್ತಿದೆ. ಜನರಿಂದ ಆಯ್ಕೆಯಾದ ಆ್ಯಂಗ್​ ಸಾನ್​ ಸೂಕಿ ಅವರನ್ನು ಬಂಧಿಸಲಾಗಿದೆ. ಅದರ ವಿರುದ್ಧ ಅಲ್ಲಿನ ಅನೇಕ ಸೆಲೆಬ್ರಿಟಿಗಳು, ನಾಯಕರು ಧ್ವನಿ ಎತ್ತಿದ್ದಾರೆ.

‘ನಮ್ಮ ಜನ ಸಾಯ್ತಿದ್ದಾರೆ’; ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ ದೇಶಕ್ಕಾಗಿ ಧ್ವನಿ ಎತ್ತಿದ ಮ್ಯಾನ್ಮಾರ್​ ಸುಂದರಿ
ಮಿಸ್ ಯೂನಿವರ್ಸ್ ವೇದಿಕೆಯಲ್ಲಿ ತುಜಾರ್ ವಿಂಟ್ ಲ್ವಿನ್
Madan Kumar

|

May 17, 2021 | 1:50 PM

69ನೇ ಮಿಸ್​ ಯೂನಿವರ್ಸ್​ ಅಂತಿಮ ಸುತ್ತಿನ ಸ್ಪರ್ಧೆ ಮೇ 16ರಂದು ಫ್ಲೋರಿಡಾದಲ್ಲಿ ನೆರವೇರಿತು. ಮೆಕ್ಸಿಕೋದ ಸುಂದರಿ ಆ್ಯಂಡಿಯಾ ಮೆಜಾ ಅವರು ಮಿಸ್​ ಯೂನಿವರ್ಸ್​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಮ್ಯಾನ್ಮಾರ್​ನ ತುಜಾರ್​ ವಿಂಟ್​ ಲ್ವಿನ್​ ಕೂಡ ಭಾಗವಹಿಸಿದ್ದರು. ಅಂತಿಮ ಸುತ್ತಿನ ಹಣಾಹಣಿಗೆ ಅವರು ಆಯ್ಕೆ ಆಗುವಲ್ಲಿ ವಿಫಲರಾದರು. ಹಾಗಿದ್ದರೂ ತಮ್ಮ ದೇಶದ ಪರವಾಗಿ ಧ್ವನಿ ಎತ್ತಿದ ಕಾರಣಕ್ಕಾಗಿ ಅವರು ಗಮನ ಸೆಳೆಯುತ್ತಿದ್ದಾರೆ. ಮ್ಯಾನ್ಮಾರ್​ನ ಸದ್ಯದ ದುಸ್ಥಿತಿ ಬಗ್ಗೆ ಮಾತನಾಡಿರುವ ಅವರು ‘ನಮ್ಮ ಜನ ಸಾಯ್ತಿದ್ದಾರೆ’ ಎಂದು ಹೇಳಿದ್ದಾರೆ.

ಮ್ಯಾನ್ಮಾರ್​ನಲ್ಲಿ ಮಿಲಿಟರಿಯು ಅಧಿಕಾರ ವಶ ಪಡಿಸಿಕೊಂಡಿದೆ. ಜನರನ್ನು ಬರ್ಬರವಾಗಿ ನಡೆಸಿಕೊಳ್ಳಲಾಗುತ್ತಿರುವ ಬಗ್ಗೆ ವರದಿ ಆಗುತ್ತಿದೆ. ಜನರಿಂದ ಆಯ್ಕೆಯಾದ ಆ್ಯಂಗ್​ ಸಾನ್​ ಸೂಕಿ ಅವರನ್ನು ಬಂಧಿಸಲಾಗಿದೆ. ಅದರ ವಿರುದ್ಧ ಅಲ್ಲಿನ ಅನೇಕ ಸೆಲೆಬ್ರಿಟಿಗಳು, ನಾಯಕರು ಧ್ವನಿ ಎತ್ತಿದ್ದಾರೆ. ಅದೇ ರೀತಿ, ತುಜಾರ್​ ವಿಂಟ್​ ಲ್ವಿನ್​ ಕೂಡ ಮಿಸ್​ ಯೂನಿವರ್ಸ್​ ವೇದಿಕೆಯನ್ನು ಬಳಸಿಕೊಂಡು ವಿಶ್ವದ ಗಮನವನ್ನು ಮ್ಯಾನ್ಮಾರ್​ನತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

‘ನಮ್ಮ ಜನರು ಸಾಯುತ್ತಿದ್ದಾರೆ. ಮಿಲಿಟರಿಯವರ ಗುಂಡಿಗೆ ಬಲಿಯಾಗುತ್ತಿದ್ದಾರೆ. ಮ್ಯಾನ್ಮಾರ್​ ಬಗ್ಗೆ ಎಲ್ಲರೂ ಮಾತನಾಡಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ. ಮಿಲಿಟರಿ ಆಡಳಿತ ಶುರು ಆದಾಗಿನಿಂದ ನಾನು ಈ ಬಗ್ಗೆ ನನ್ನಿಂದ ಸಾಧ್ಯವಾದಷ್ಟು ಮಾತನಾಡುತ್ತಿದ್ದೇನೆ’ ಎಂದು ತುಜಾರ್​ ವಿಂಟ್​ ಲ್ವಿನ್ ಅವರು ಹೇಳಿದ್ದಾರೆ. ಅಲ್ಲಿನ ಅನೇಕ ಸೆಲೆಬ್ರಿಟಿಗಳು, ಸೋಶಿಯಲ್​ ಮೀಡಿಯಾದಲ್ಲಿನ ಖ್ಯಾತ ವ್ಯಕ್ತಿಗಳು, ಕ್ರೀಡಾಕ್ಷೇತ್ರದ ಪ್ರಮುಖಕರು ಸಹ ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.

ಮ್ಯಾನ್ಮಾರ್​ನಲ್ಲಿ ಅಧಿಕಾರವನ್ನು ಮಿಲಿಟರಿಯವರು ವಶಪಡಿಸಿಕೊಂಡಾಗಿನಿಂದ 790ಕ್ಕೂ ಅಧಿಕ ಜನರನ್ನು ಕೊಲ್ಲಲಾಗಿದೆ ಎಂದು ವರದಿ ಆಗಿದೆ. ಅಂದಾಜು 5 ಸಾವಿರ ಜನರನ್ನು ಬಂಧಿಸಲಾಯಿತು. ಕೆಲವು ಸೆಲೆಬ್ರಿಟಿಗಳೂ ಸೇರಿ 4 ಸಾವಿರ ಜನ ಇನ್ನೂ ಮಿಲಿಟರಿಯವರ ವಶದಲ್ಲಿದ್ದಾರೆ. ಈ ಬಗ್ಗೆ ತುಜಾರ್​ ವಿಂಟ್​ ಲ್ವಿನ್ ಮಿಸ್​ ಯೂನಿವರ್ಸ್​ ವೇದಿಕೆಯಲ್ಲಿ ಮಾತನಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಚರ್ಚೆ ಆಗುವಂತೆ  ಮಾಡಿದ್ದಾರೆ.

ಮಿಸ್​ ಯೂನಿವರ್ಸ್​ಗೆ ಮ್ಯಾನ್ಮಾರ್​ನಿಂದ ಸ್ಪರ್ಧಿಸಿದ್ದ ತುಜಾರ್​ ವಿಂಟ್​ ಲ್ವಿನ್ ಅವರು ಕೊನೇ ಸುತ್ತಿಗೆ ಆಯ್ಕೆಯಾಗಲಿಲ್ಲ. ಆದರೆ ಬೆಸ್ಟ್​ ನ್ಯಾಷನಲ್​ ಕಾಸ್ಟ್ಯೂಮ್​ ವಿಭಾಗದಲ್ಲಿ ಅವರು ಕಿರೀಟ ಪಡೆದುಕೊಂಡರು. ತಮ್ಮ ದೇಶದ ಕಸ್ಟ್ಯೂಮ್​ ಧರಿಸಿ ರ‍್ಯಾಂಪ್​ ವಾಕ್​ ಮಾಡುವಾಗ ‘ಮ್ಯಾನ್ಮಾರ್​ಗಾಗಿ ಪ್ರಾರ್ಥಿಸಿ’ ಎಂದು ಫಲಕವನ್ನು ಅವರು ಹಿಡಿದಿದ್ದರು.

ಮಿಸ್​ ಯೂನಿವರ್ಸ್​ 2021 ಸ್ಪರ್ಧೆಯಲ್ಲಿ ಬ್ರೆಜಿಲ್​ನ ಜೂಲಿಯಾ ಗಾಮಾ ಅವರು ಮೊದಲ ರನ್ನರ್​ ಅಪ್​ ಆಗಿ ಹೊರಹೊಮ್ಮಿದರು. ಪೆರುವಿನ ಜೆನಿಕ್​ ಮಸೆಟಾ ಅವರು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು. ಭಾರತದಿಂದ ಸ್ಪರ್ಧಿಸಿದ್ದ ಅಡ್ಲಿನ್​ ಕಾಸ್ಟಿಲಿನೋ ಮೂರನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇದನ್ನೂ ಓದಿ:

Miss Universe 2021 Winner: ಕೊವಿಡ್​ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ

Manya Singh ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿಗೆ Miss India 2020 ರನ್ನರ್​ ಅಪ್ ‘ಮಾನ್ಯ’ತೆ!

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada