AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manya Singh ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿಗೆ Miss India 2020 ರನ್ನರ್​ ಅಪ್ ‘ಮಾನ್ಯ’ತೆ!

ಜೀವನದ ಕಹಿ ಅನುಭವಗಳನ್ನ ಹಂಚಿಕೊಂಡ ಮಾನ್ಯಾ, ಅದೆಷ್ಟೋ ಬಾರಿ ಹಣ ಉಳಿಸಲು ನಾನು ಮೈಲಿಗಟ್ಟಿಲೇ ನಡೆದುಕೊಂಡೇ ಹೋಗಿದ್ದು ಸಹ ಉಂಟು. ಆದರೆ, ಇಂದು ನನ್ನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ನನ್ನ ಕನಸುಗಳನ್ನು ನನಸಾಗಿಸುವ ಧೈರ್ಯ ತುಂಬಿದೆ ಎಂದು ಹೇಳಿದರು.

Manya Singh ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿಗೆ Miss India 2020 ರನ್ನರ್​ ಅಪ್ ‘ಮಾನ್ಯ’ತೆ!
ಮಿಸ್​ ಇಂಡಿಯಾ 2020ರ ರನ್ನರ್​ ಅಪ್​ ಮಾನ್ಯಾ ಸಿಂಗ್
KUSHAL V
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Feb 19, 2021 | 8:17 PM

Share

ಮುಂಬೈ: ಸಾಧನೆಯ ಹಾದಿ ಬಲು ದುರ್ಗಮ. ಆದರೆ, ಸಾಧಿಸಲೇಬೇಕೆಂಬ ಛಲವೊಂದಿದ್ದರೆ ಸಾಕು. ಎಂಥ ಕಡಿದಾದ ಹಾದಿಯಲ್ಲೂ ಅಂಜದೆ ಮುನ್ನುಗ್ಗಬಹುದು. ಇದಕ್ಕೆ ಬೆಸ್ಟ್​ ಉದಾಹರಣೆ ಎಂದರೆ ಮಿಸ್​ ಇಂಡಿಯಾ 2020ರ ರನ್ನರ್​ ಅಪ್​ ಮಾನ್ಯಾ ಸಿಂಗ್​.

ಹೌದು, ಉತ್ತರ ಪ್ರದೇಶದ ಖುಷಿನಗರದ ನಿವಾಸಿಯಾದ ಮಾನ್ಯಾ ಸಿಂಗ್​ ಓರ್ವ ಆಟೋ ಚಾಲಕನ ಪುತ್ರಿ. ತಂದೆಗೆ ಬರುತ್ತಿದ್ದ ಅಲ್ಪಸ್ವಲ್ಪ ಆದಾಯದಲ್ಲೇ ಮಾನ್ಯಾಳ ಕುಟುಂಬವು ಬದುಕು ಸಾಗಿಸಬೇಕಿತ್ತು. ಕೆಲವೊಮ್ಮೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಿಸಬೇಕಿತ್ತು. ಅದೆಷ್ಟೋ ಬಾರಿ ಶಾಲೆಯ ಫೀಸ್​ ಕಟ್ಟೋಕೆ ಆಗದೆ ಸಹಪಾಠಿಗಳ ಎದುರು ಮಾನ್ಯಾ ಅವಮಾನಕ್ಕೆ ಗುರಿಯಾಗಿದ್ದು ಸಹ ಉಂಟು. ಒಮ್ಮೆ ತನ್ನ ಪರೀಕ್ಷೆಯ ಶುಲ್ಕ ಕಟ್ಟಲು ತನ್ನ ತಾಯಿಯ ಒಡವೆಯನ್ನು ಅಡವಿಟ್ಟಿದ್ದ ಬಗ್ಗೆ ಸಹ ಮಾನ್ಯಾ ಹಂಚಿಕೊಂಡಿದ್ದಾರೆ.

ಆದರೆ, ಇದ್ಯಾವುದಕ್ಕೂ ಧೃತಿಗೆಡದ ಮಾನ್ಯಾ, ಕಷ್ಟಪಟ್ಟು ಓದಿ 12ನೇ ತರಗತಿಯಲ್ಲಿ ಒಳ್ಳೇ ಅಂಕಗಳನ್ನು ಪಡೆದು ಶಾಲೆಯ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದರು. ಅಮ್ಮನ ಮುದ್ದಿನ ಮಗಳಾದ ಮಾನ್ಯಾಗೆ ತನ್ನ ತಾಯಿಯೇ ಅತಿದೊಡ್ಡ ಸ್ಫೂರ್ತಿ. ಹಾಗಾಗಿ, ತನ್ನ ಅಮ್ಮನ ಹಾಗೇ ಶ್ರಮಜೀವಿಯಾಗಿರುವ ಮಾನ್ಯಾ ತಮ್ಮ ಕಾಲೇಜು ದಿನಗಳಲ್ಲಿ ವ್ಯಾಸಂಗದ ಜೊತೆ ಮನೆಗೆಲಸ ಹಾಗೂ ಕಾಲ್​ ಸೆಂಟರ್​ನಲ್ಲಿ ಸಹ ಕೆಲಸ ಮಾಡಿದ್ದಾರೆ.

ತಮ್ಮ ಜೀವನದ ಕಹಿ ಅನುಭವಗಳನ್ನ ಹಂಚಿಕೊಂಡ ಮಾನ್ಯಾ, ಅದೆಷ್ಟೋ ಬಾರಿ ಹಣ ಉಳಿಸಲು ನಾನು ಮೈಲಿಗಟ್ಟಿಲೇ ನಡೆದುಕೊಂಡೇ ಹೋಗಿದ್ದು ಸಹ ಉಂಟು. ಆದರೆ, ಇಂದು ನನ್ನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ನನ್ನ ಕನಸುಗಳನ್ನು ನನಸಾಗಿಸುವ ಧೈರ್ಯ ತುಂಬಿದೆ. ಇದೀಗ, ಈ ಮಿಸ್​ ಇಂಡಿಯಾ ವೇದಿಕೆ ಮುಖಾಂತರ ತನ್ನಂಥ ಇತರರಿಗೂ ಸ್ಫೂರ್ತಿಯ ಸೆಲೆಯಾಗಲು ಬಯಸುತ್ತೇನೆ ಎಂದು ಹೇಳಿದರು.

ಅಂದ ಹಾಗೆ, ಶಿಕ್ಷಣ ಎಂಬುದು ಓರ್ವ ಮನುಷ್ಯನ ಬಳಿ ಇರಬಹುದಾದ ಅತ್ಯುತ್ತಮ ಅಸ್ತ್ರ ಎಂದು ಮಾನ್ಯಾ ಸಿಂಗ್​ ಬಲವಾಗಿ ನಂಬಿದ್ದಾರೆ. ಹಾಗಾಗಿ, ಮಾನ್ಯ ಇದೀಗ ಮ್ಯಾನೇಜ್​ಮೆಂಟ್​ನಲ್ಲಿ ಉನ್ನತ ವ್ಯಾಸಂಗ ಮುಂದುವರಿಸುವ ಕನಸು ಹೊತ್ತಿದ್ದಾರೆ.

Published On - 11:42 pm, Thu, 11 February 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ