AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡಿದ ಮಾಜಿ ಪ್ರಿಯಕರ, ಆತನ ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿದ ಮಹಿಳೆ

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ, ಖಾಸಗಿ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಹಿಳೆಯೊಬ್ಬರು ಕೊಲೆ ಮಾಡಿದ್ದಾರೆ. ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸಿದಾಗ ಆತ ಕಿರುಕುಳ ನೀಡಿದ್ದರಿಂದ, ಮಹಿಳೆ ತನ್ನ ಸಹೋದರ ಮತ್ತು ಅತ್ತಿಗೆಯ ಸಹಾಯದಿಂದ ಅವನನ್ನು ಕೊಂದು, ಗುರುತು ಮರೆಮಾಚಲು ಮುಖಕ್ಕೆ ಆ್ಯಸಿಡ್ ಹಾಕಿದ್ದಾರೆ. ಪೊಲೀಸರು ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ.

ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡಿದ ಮಾಜಿ ಪ್ರಿಯಕರ, ಆತನ ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿದ ಮಹಿಳೆ
ಉತ್ತರ ಪ್ರದೇಶ ಕ್ರೈಂ
ನಯನಾ ರಾಜೀವ್
|

Updated on: Mar 02, 2026 | 12:19 PM

Share

ಬಲ್ಲಿಯಾ, ಮಾರ್ಚ್​ 02: ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಹಿಳೆಯೊಬ್ಬರು ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ವಿವಾಹಿತ ಮಹಿಳೆಯೊಬ್ಬರು, ಸಂಬಂಧ ಕೊನೆಗೊಳಿಸಲು ಪ್ರಯತ್ನಿಸಿದಾಗ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದ, ಹಾಗಾಗಿ ಆಕೆ ತನ್ನ ಸಹೋದರ ಮತ್ತು ಅತ್ತಿಗೆಯ ಸಹಾಯದಿಂದ ಆತನನ್ನು ಕೊಲೆ(Murder) ಮಾಡಿದ್ದಾಳೆ.

ತಮ್ಮ ಗ್ರಾಮಕ್ಕೆ ಬರುವಂತೆ ಕರೆದು, ಕತ್ತು ಹಿಸುಕಿ ಕೊಂದು, ನಂತರ ಗುರುತನ್ನು ಮರೆಮಾಚಲು ಆಸಿಡ್‌ನಿಂದ ಮುಖವನ್ನು ವಿರೂಪಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 10 ರಂದು ಮುಖ ವಿರೂಪಗೊಂಡಿದ್ದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು, ಅದಾದ ನಂತರ ಈ ಅಪರಾಧ ಬೆಳಕಿಗೆ ಬಂದಿದೆ. ನಂತರ ಪೊಲೀಸ್ ತನಿಖೆಯಲ್ಲಿ ಕೊಲೆಯ ವಿವರಗಳು ಬೆಳಕಿಗೆ ಬಂದಿತ್ತು.

ಪೊಲೀಸರ ಪ್ರಕಾರ, ಮೃತ ವ್ಯಕ್ತಿ ಪಂಕಜ್ ಗುಪ್ತಾ, ಅಜಮ್‌ಗಢ ನಿವಾಸಿಯಾಗಿದ್ದು, ಪಕ್ಕದ ಹಳ್ಳಿಯ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ತನಿಖಾಧಿಕಾರಿಗಳು ಹೇಳುವಂತೆ ಮಹಿಳೆ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದಳು, ಆದರೆ ಗುಪ್ತಾ ಅಶ್ಲೀಲ ವೀಡಿಯೊಗಳನ್ನು ಬಳಸಿ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿ, ಪದೇ ಪದೇ ಕಿರುಕುಳ ನೀಡುತ್ತಿದ್ದ.

ಮತ್ತಷ್ಟು ಓದಿ: ಅಮ್ಮಾ ಅವ್ನು ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡ ಎಂದು ದೂರು ಕೊಟ್ಟಿದ್ದಕ್ಕೆ, ಬಾಲಕಿಯನ್ನೇ ಕತ್ತು ಸೀಳಿ ಕೊಂದ ಅಪ್ರಾಪ್ತ

ಬೆದರಿಕೆಗಳನ್ನು ತಾಳಲಾರದೆ ಮಹಿಳೆ ತನ್ನ ಸಹೋದರ ಮತ್ತು ಅತ್ತಿಗೆಯ ಬಳಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಫೆಬ್ರವರಿ 5 ರಂದು ನಡೆದ ವಿವಾಹ ಸಮಾರಂಭದಲ್ಲಿ ಮೂವರು ಮತ್ತು ಇತರರೊಂದಿಗೆ ಗುಪ್ತಾ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 7 ರಂದು, ಗುಪ್ತಾ ಅವರನ್ನು ಒಂದು ನೆಪ ಹೇಳಿ ಗ್ರಾಮಕ್ಕೆ ಕರೆತಂದು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ನಂತರ ಆರೋಪಿಯು ಮೃತದೇಹವನ್ನು ಎಸೆಯುವ ಮೊದಲು ಮುಖವನ್ನು ವಿರೂಪಗೊಳಿಸುವ ಮೂಲಕ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಸೇರಿದಂತೆ ಮೂವರು ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ, ಉಳಿದ ಶಂಕಿತರನ್ನು ಬಂಧಿಸಲು ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ