AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ ಗಾಂಧಿ ಬಾಲ್ಯದ ಮನೆ ಆಗಲಿದೆ ಮ್ಯೂಸಿಯಂ,ಇಟಲಿಯ ಸಿಖ್ ಉದ್ಯಮಿ ಹೊಸ ಯೋಜನೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಇಟಲಿಯ ಬಾಲ್ಯದ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಸಿಖ್ ಉದ್ಯಮಿ ಸುಖದೇವ್ ಸಿಂಗ್ ಕಾಂಗ್ ಯೋಜನೆ ರೂಪಿಸಿದ್ದಾರೆ. ಐತಿಹಾಸಿಕ ಹಿನ್ನೆಲೆಯನ್ನು ಉಳಿಸಿ, ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವುದು ಇದರ ಉದ್ದೇಶ. ಗಾಂಧಿ ಕುಟುಂಬದ ಸಹಕಾರಕ್ಕಾಗಿ ಕಾಂಗ್ ಕಾಯುತ್ತಿದ್ದಾರೆ. ಇದು ಸೋನಿಯಾ ಅವರ ಜೀವನದ ಆರಂಭಿಕ ದಿನಗಳನ್ನು ಪರಿಚಯಿಸುವ ಪ್ರಮುಖ ತಾಣವಾಗಲಿದೆ.

ಸೋನಿಯಾ ಗಾಂಧಿ ಬಾಲ್ಯದ ಮನೆ ಆಗಲಿದೆ ಮ್ಯೂಸಿಯಂ,ಇಟಲಿಯ ಸಿಖ್ ಉದ್ಯಮಿ ಹೊಸ ಯೋಜನೆ
ಸಿಂಗ್
ನಯನಾ ರಾಜೀವ್
|

Updated on:Nov 21, 2026 | 2:53 PM

Share

ಇಟಲಿ, ನವೆಂಬರ್ 21: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಇಟಲಿಯ ಬಾಲ್ಯದ ಮನೆ ಇದೀಗ ಸದ್ದು ಮಾಡುತ್ತಿದೆ. ಈ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಇಟಲಿಯಲ್ಲಿ ನೆಲೆಸಿರುವ ಸಿಖ್ ಉದ್ಯಮಿ ಸುಖದೇವ್ ಸಿಂಗ್ ಕಾಂಗ್ ಯೋಜನೆ ರೂಪಿಸಿದ್ದಾರೆ. ಆರು ವರ್ಷಗಳ ಹಿಂದೆ ಈ ಮನೆಯನ್ನು ಖರೀದಿಸಿದ್ದ ಅವರು, ಸೋನಿಯಾ ಗಾಂಧಿ ಅವರ ಬಾಲ್ಯದ ನೆನಪುಗಳು ಮತ್ತು ಕುಟುಂಬದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ಹೊಂದಿದ್ದಾರೆ.

ಇಟಲಿಯಲ್ಲಿದೆ ಸೋನಿಯಾ ಗಾಂಧಿ ಬಾಲ್ಯದ ಮನೆ

ಇಟಲಿಯ ವಿಸೆಂಜಾ ಪ್ರಾಂತ್ಯದ ಲುಸಿಯಾನಾ ಎಂಬ ಪಟ್ಟಣದಲ್ಲಿ ಈ ಆರು ಕೊಠಡಿಗಳ ಮನೆ ಇದೆ. ಸೋನಿಯಾ ಗಾಂಧಿ ಅವರು 1946ರ ಡಿಸೆಂಬರ್ 9ರಂದು ಇದೇ ಮನೆಯಲ್ಲಿ ಜನಿಸಿದ್ದರು ಮತ್ತು ತಮ್ಮ ಬಾಲ್ಯದ ಆರಂಭಿಕ ವರ್ಷಗಳನ್ನು ಇಲ್ಲಿ ಕಳೆದಿದ್ದರು ಎಂದು ವರದಿಗಳು ತಿಳಿಸಿವೆ. ಬೂದು ಬಣ್ಣದ ಕಲ್ಲು ಮತ್ತು ಕಾಂಕ್ರೀಟ್‌ನಿಂದ ನಿರ್ಮಿಸಿರುವ ಈ ಮನೆಯ ಹೊರಭಾಗದಲ್ಲಿ ತ್ರಿವರ್ಣ ಧ್ವಜವಿದೆ. ಮನೆಯ ಮುಂದೆ ‘ಇಂಡಿಯನ್ ಹೌಸ್’ ಎಂಬ ಹೆಸರಿನ ಫಲಕದ ಜೊತೆಗೆ ಸೋನಿಯಾ ಗಾಂಧಿ ಅವರ ಜನ್ಮಸ್ಥಳ ಎಂಬ ಉಲ್ಲೇಖವೂ ಇದೆ.

ಯಾರು ಈ ಸುಖದೇವ್ ಸಿಂಗ್ ಕಾಂಗ್?

ಸುಖದೇವ್ ಸಿಂಗ್ ಕಾಂಗ್ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಹಳ್ಳಿಯೊಂದರ ಮೂಲದವರು. 1992ರಲ್ಲಿ ಉದ್ಯೋಗಕ್ಕಾಗಿ ಇಟಲಿಗೆ ತೆರಳಿದ ಅವರು ಆರಂಭದಲ್ಲಿ ಡೈರಿ ಫಾರ್ಮ್, ಕೃಷಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡಿದ್ದರು. ನಂತರ ಇಟಲಿಯಲ್ಲೇ ನೆಲೆಸಿದರು. 2020ರಲ್ಲಿ ತಮ್ಮ ಪತ್ನಿ ಮತ್ತು ಮಗಳ ಹೆಸರಿನಲ್ಲಿ ಸೋನಿಯಾ ಗಾಂಧಿ ಅವರ ಬಾಲ್ಯದ ಮನೆಯನ್ನು ಖರೀದಿಸಿದರು.

ಈ ಮನೆಯ ನಿರ್ವಹಣೆಗಾಗಿ ಒಬ್ಬ ಕೇರ್‌ಟೇಕರ್‌ರನ್ನು ನೇಮಿಸಲಾಗಿದೆ. ಪ್ರವಾಸಿಗರು ಮನೆ ನೋಡಲು ಬಯಸಿದರೆ ಅವರ ಮೂಲಕ ವ್ಯವಸ್ಥೆ ಮಾಡಲಾಗುತ್ತದೆ. ಆಸ್ತಿ ತೆರಿಗೆ ಸೇರಿದಂತೆ ಮನೆಯ ನಿರ್ವಹಣೆಗೆ ವರ್ಷಕ್ಕೆ ಸುಮಾರು 1,000 ಯೂರೋ ಖರ್ಚು ಮಾಡುತ್ತಿರುವುದಾಗಿ ಕಾಂಗ್ ತಿಳಿಸಿದ್ದಾರೆ.

ಮನೆಯನ್ನೇಕೆ ಮ್ಯೂಸಿಯಂ ಮಾಡಲು ಬಯಸಿದ್ದಾರೆ?

ಸೋನಿಯಾ ಗಾಂಧಿ ಮತ್ತು ಅವರ ಕುಟುಂಬದ ಬಗ್ಗೆ ತಮಗೆ ಗೌರವವಿದೆ ಎಂದು ಕಾಂಗ್ ಹೇಳಿದ್ದಾರೆ. ಮನೆಯ ಐತಿಹಾಸಿಕ ಹಿನ್ನೆಲೆಯನ್ನು ಉಳಿಸುವ ಉದ್ದೇಶದಿಂದ ಬಾಡಿಗೆಗೆ ನೀಡುವ ಮತ್ತು ಗುರುದ್ವಾರವನ್ನಾಗಿ ಪರಿವರ್ತಿಸುವ ಪ್ರಸ್ತಾಪಗಳನ್ನು ತಮ್ಮ ಕುಟುಂಬ ತಿರಸ್ಕರಿಸಿದೆ ಎಂದೂ ತಿಳಿಸಿದ್ದಾರೆ.

ಈ ಮನೆಯನ್ನು ಆಧುನಿಕ ವಸ್ತುಸಂಗ್ರಹಾಲಯವನ್ನಾಗಿ ಅಭಿವೃದ್ಧಿಪಡಿಸಿ, ಇಟಲಿಗೆ ಭೇಟಿ ನೀಡುವ ಭಾರತೀಯರಿಗೆ ವಿಶೇಷ ಪ್ರವಾಸಿ ತಾಣವನ್ನಾಗಿ ರೂಪಿಸುವುದು ಅವರ ಆಶಯ. ಇದರಿಂದ ಸ್ಥಳೀಯ ಗ್ರಾಮಕ್ಕೂ ಪ್ರವಾಸೋದ್ಯಮದ ಮೂಲಕ ಆರ್ಥಿಕ ಲಾಭವಾಗಬಹುದು ಎಂಬ ನಿರೀಕ್ಷೆಯಿದೆ.

ಇದನ್ನೂ ಓದಿ: ರಾಜೀವ್-ಸೋನಿಯಾ ಮೊದಲು ಭೇಟಿಯಾಗಿದ್ದ ಜಾಗಕ್ಕೆ ಗೆಳತಿಯನ್ನು ಕರೆದುಕೊಂಡು ಹೋಗಿದ್ರಂತೆ ರಾಹುಲ್

ಗಾಂಧಿ ಕುಟುಂಬದ ಸಹಕಾರಕ್ಕೆ ಕಾಯುತ್ತಿರುವ ಉದ್ಯಮಿ

ಮ್ಯೂಸಿಯಂನಲ್ಲಿ ಪ್ರದರ್ಶಿಸಲು ಸೋನಿಯಾ ಗಾಂಧಿ ಅವರ ಬಾಲ್ಯದ ಛಾಯಾಚಿತ್ರಗಳು, ಕುಟುಂಬಕ್ಕೆ ಸಂಬಂಧಿಸಿದ ದಾಖಲೆಗಳು, ವೈಯಕ್ತಿಕ ವಸ್ತುಗಳು ಮತ್ತು ಇತರ ನೆನಪಿನ ಸಂಗ್ರಹಗಳು ಬೇಕಾಗಿವೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲು ಸುಖದೇವ್ ಸಿಂಗ್ ಕಾಂಗ್ ಆಸಕ್ತಿ ತೋರಿದ್ದಾರೆ.

ಗಾಂಧಿ ಕುಟುಂಬದ ಸಹಕಾರ ದೊರೆತರೆ ಮ್ಯೂಸಿಯಂಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಸಿದ್ಧಪಡಿಸಬಹುದು ಎಂಬುದು ಅವರ ಆಶಯ. ಯೋಜನೆಯನ್ನು ಆದಷ್ಟು ಬೇಗ ಮುಂದಕ್ಕೆ ಕೊಂಡೊಯ್ಯಲು ಬಯಸಿರುವುದಾಗಿ ಅವರು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಆತ್ಮಕಥೆಯಿಂದ ಮತ್ತೆ ಹೆಚ್ಚಿದ ಆಸಕ್ತಿ

ಇತ್ತೀಚೆಗೆ ಸೋನಿಯಾ ಗಾಂಧಿ ಅವರ ಬಿಲಾಂಗಿಂಗ್, ಎ ಜರ್ನಿ ಆಫ್ ಲವ್ ಎಂಬ ಆತ್ಮಕಥೆ ಬಿಡುಗಡೆಯಾಗಿದೆ. ಇದರಿಂದ ಅವರ ಜೀವನ, ಇಟಲಿಯ ಬಾಲ್ಯ ಮತ್ತು ಕುಟುಂಬದ ಹಿನ್ನೆಲೆಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ಆಸಕ್ತಿ ಹೆಚ್ಚಾಗಿದೆ. ಇದೇ ಸಮಯದಲ್ಲಿ ಅವರ ಬಾಲ್ಯದ ಮನೆಯನ್ನು ಮ್ಯೂಸಿಯಂ ಆಗಿ ರೂಪಿಸುವ ಯೋಜನೆಯೂ ಗಮನ ಸೆಳೆದಿದೆ. ಈ ಯೋಜನೆ ಪೂರ್ಣಗೊಂಡರೆ ಸೋನಿಯಾ ಗಾಂಧಿ ಅವರ ಜೀವನದ ಆರಂಭಿಕ ದಿನಗಳನ್ನು ಪರಿಚಯಿಸುವ ಹೊಸ ಪ್ರವಾಸಿ ತಾಣ ಇಟಲಿಯಲ್ಲಿ ನಿರ್ಮಾಣವಾಗಬಹುದು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:49 pm, Sat, 21 November 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ