ಕೊರೊನಾ ಲಸಿಕೆ ಅಭಿಯಾನ ಮುಗಿದ ಬಳಿಕ CAA ಜಾರಿಯಾಗಲಿದೆ -ಕೇಂದ್ರ ಗೃಹ ಸಚಿವ ಅಮಿತ್ ಶಾ

ದೇಶಾದ್ಯಂತ ನಡೆಯುತ್ತಿರುವ ಕೊರೊನಾ ಲಸಿಕೆ ಅಭಿಯಾನ ಮುಗಿದ ನಂತರ ಪೌರತ್ವ ತಿದ್ದುಪಡಿ ಕಾಯ್ದೆಯಡಿ (CAA) ನಿರಾಶ್ರಿತರಿಗೆ ದೇಶದ ನಾಗರಿಕತ್ವ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಠಾಕೂರ್​ನಗರದಲ್ಲಿ ಭಾಷಣ ಮಾಡುವ ವೇಳೆ ಅಮಿತ್​ ಶಾ ಈ ಕುರಿತು ಮಾತನಾಡಿದ್ದಾರೆ.

ಕೊರೊನಾ ಲಸಿಕೆ ಅಭಿಯಾನ ಮುಗಿದ ಬಳಿಕ CAA ಜಾರಿಯಾಗಲಿದೆ -ಕೇಂದ್ರ ಗೃಹ ಸಚಿವ ಅಮಿತ್ ಶಾ
ಅಮಿತ್ ಶಾ
KUSHAL V

|

Feb 11, 2021 | 8:35 PM

ಕೋಲ್ಕತ್ತ: ದೇಶಾದ್ಯಂತ ನಡೆಯುತ್ತಿರುವ ಕೊರೊನಾ ಲಸಿಕೆ ಅಭಿಯಾನ ಮುಗಿದ ನಂತರ ಪೌರತ್ವ ತಿದ್ದುಪಡಿ ಕಾಯ್ದೆಯಡಿ (CAA) ನಿರಾಶ್ರಿತರಿಗೆ ದೇಶದ ನಾಗರಿಕತ್ವ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಠಾಕೂರ್​ನಗರದಲ್ಲಿ ಭಾಷಣ ಮಾಡುವ ವೇಳೆ ಅಮಿತ್​ ಶಾ ಈ ಕುರಿತು ಮಾತನಾಡಿದ್ದಾರೆ. ಜೊತೆಗೆ, ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದು, ಬಂಗಾಳದಲ್ಲಿ ನೆಲೆಸಿದ ಮತುವಾ ಸಮುದಾಯಕ್ಕೂ ಪೌರತ್ವ ನೀಡಲಾಗುವುದು ಎಂದು ತಿಳಿಸಿದ್ದಾರೆ. Amit Shah on CAA

ತಮ್ಮ ಭಾಷಣದ ವೇಳೆ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದ ಅಮಿತ್​ ಶಾ, ವಿಪಕ್ಷಗಳು CAA ಕಾಯ್ದೆ ಬಗ್ಗೆ ಅಲ್ಪಸಂಖ್ಯಾತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜೊತೆಗೆ, ಈ ಕಾನೂನು ಜಾರಿಯಾದರೆ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯಲ್ಲಿ ಸಂಕಷ್ಟ ಎದುರಾಗುವುದಿಲ್ಲ ಎಂದು ಭರವಸೆ ಸಹ ಕೊಟ್ಟರು.

BJP ಪಕ್ಷ ಕೊಟ್ಟ ಮಾತನ್ನು ಸದಾ ನೆರವೇರಿಸುತ್ತದೆ. ಹಾಗಾಗಿ, ನಾವು ಜಾರಿಮಾಡಿರುವ ಕಾಯ್ದೆಯಡಿ ನಿರಾಶ್ರಿತರಿಗೆ ಪೌರತ್ವ ಖಂಡಿತ ನೀಡುತ್ತೇವೆ ಎಂದು ಹೇಳಿದರು. ಜೊತೆಗೆ, ಈ ಕಾನೂನನ್ನು ವಿರೋಧಿಸಲು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಂದ ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರು ಚುನಾವಣೆ ಬಳಿಕ ಮುಖ್ಯಮಂತ್ರಿಗಳಾಗಿ ಇರುವುದಿಲ್ಲ ಎಂದು ಟಾಂಗ್ ಕೊಟ್ಟರು.

ಇದೂ ಓದಿ: Fire ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ: ಮನೆಯಲ್ಲಿದ್ದ 1 ಲಕ್ಷ ನಗದು, 30 ಗ್ರಾಂ ಚಿನ್ನ ಸುಟ್ಟು ಭಸ್ಮ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada