AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fire ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ: ಮನೆಯಲ್ಲಿದ್ದ 1 ಲಕ್ಷ ನಗದು, 30 ಗ್ರಾಂ ಚಿನ್ನ ಸುಟ್ಟು ಭಸ್ಮ

ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ವರದಿಯಾಗಿದೆ. ಅವಘಡದಿಂದ ಮನೆಯಲ್ಲಿದ್ದ 1 ಲಕ್ಷ ನಗದು ಹಾಗೂ 30 ಗ್ರಾಂ ಚಿನ್ನ ಸುಟ್ಟು ಭಸ್ಮವಾಗಿದೆ.

Fire ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ: ಮನೆಯಲ್ಲಿದ್ದ 1 ಲಕ್ಷ ನಗದು, 30 ಗ್ರಾಂ ಚಿನ್ನ ಸುಟ್ಟು ಭಸ್ಮ
ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ
KUSHAL V
|

Updated on:Feb 11, 2021 | 8:09 PM

Share

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ವರದಿಯಾಗಿದೆ. ಅವಘಡದಿಂದ ಮನೆಯಲ್ಲಿದ್ದ 1 ಲಕ್ಷ ನಗದು ಹಾಗೂ 30 ಗ್ರಾಂ ಚಿನ್ನ ಸುಟ್ಟು ಭಸ್ಮವಾಗಿದೆ. ಇದಲ್ಲದೆ, ಮನೆಯಲ್ಲಿದ್ದ ಆಸ್ತಿಯ ದಾಖಲೆ ಪತ್ರ ಸಹ ಸುಟ್ಟು ಕರಕಲಾಗಿದೆ. ಗುರುಮಠಕಲ್ ಪಟ್ಟಣದ ಯಲ್ಲಮ್ಮ ಎಂಬುವವರ ಮನೆಯಲ್ಲಿ ಅವಘಡ ನಡೆದಿದೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. Valuables destroyed in fire mishap at Yadgir

ನಿಧಿಗಾಗಿ ದೇಗುಲದ ಆವರಣದಲ್ಲಿ ಗುಂಡಿ ತೋಡಿದ ಖದೀಮರು ಇತ್ತ, ಖದೀಮರು ನಿಧಿಗಾಗಿ ದೇಗುಲದ ಆವರಣದಲ್ಲಿ ಗುಂಡಿಯನ್ನು ತೋಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ್‌ ಗ್ರಾಮದಲ್ಲಿ ನಡೆದಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗ್ರಾಮದ ಗುಡ್ಡದ ತಿಮ್ಮಪ್ಪ ದೇವಸ್ಥಾನದಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ದೇವಸ್ಥಾನದ ಬಳಿ ಯಾರು ಇಲ್ಲದ ವೇಳೆ ಕಿಡಿಗೇಡಿಗಳು ಕೃತ್ಯಕ್ಕೆ ಮುಂದಾಗಿದ್ದಾರೆ. ದೇವಸ್ಥಾನದ ಆವರಣದಲ್ಲಿ ಗುಂಡಿ ತೋಡಿದ ಖದೀಮರು ನಿಧಿ ಸಿಗದಿದ್ದಾಗ ರಾತ್ರಿಯೇ ಪರಾರಿಯಾಗಿದ್ದರೆ. ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

YDR TEMPLE THEFT 1

ನಿಧಿಗಾಗಿ ದೇಗುಲದ ಆವರಣದಲ್ಲಿ ಗುಂಡಿ ತೋಡಿದ ಖದೀಮರು

ಇದೂ ಓದಿ: Priyanka Gandhi ಮೌನಿ ಅಮಾವಾಸ್ಯೆಯಂದು.. ಪ್ರಯಾಗರಾಜ್​ ಸಂಗಮದಲ್ಲಿ ಮಿಂದೆದ್ದ ಪ್ರಿಯಾಂಕಾ ಗಾಂಧಿ

Published On - 8:05 pm, Thu, 11 February 21