ಪೆಟ್ರೋಲ್​, ಡೀಸೆಲ್​ ಆಯ್ತು.. ಈಗ ದೇಶೀಯ ವಿಮಾನ ಪ್ರಯಾಣವೂ ತುಟ್ಟಿ

ಪೆಟ್ರೋಲ್​, ಡೀಸೆಲ್​ ಆಯ್ತು.. ಈಗ ದೇಶೀಯ ವಿಮಾನ ಪ್ರಯಾಣವೂ ತುಟ್ಟಿ
ಇಂಡಿಗೊ ವಿಮಾನ

ವಿಮಾನದ ಪ್ರಯಾಣದ ಅವಧಿ ಆಧರಿಸಿ ಕಳೆದ ವರ್ಷ ಮೇ 21ರಂದು ವಿಮಾನಯಾನ ಸಚಿವಾಲಯ ಏಳು ಟಿಕೆಟ್​ ಬ್ಯಾಂಡ್​ಗಳನ್ನು ಸಿದ್ಧಪಡಿಸಿತ್ತು. ಈಗ ಎಲ್ಲಾ ಬ್ಯಾಂಡ್​ಗಳ ದರವನ್ನು ಹೆಚ್ಚಿಸಲಾಗಿದೆ.

Rajesh Duggumane

|

Feb 11, 2021 | 9:26 PM

ನವದೆಹಲಿ: ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ಹೆಚ್ಚುತ್ತಲೇ ಇದೆ. ಇದು ಸಾಮಾನ್ಯ ವರ್ಗಕ್ಕೆ ದೊಡ್ಡ ಹೊರೆ ಆಗಿದೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಸಾಮಾನ್ಯರಿಗೆ ಮತ್ತೊಂದು ಹೊರೆಯನ್ನು ಹೊರಿಸಿದೆ. ದೇಶೀಯ ವಿಮಾನ ಹಾರಾಟ ಇನ್ನುಮುಂದೆ ಮತ್ತಷ್ಟು ತುಟ್ಟಿ ಆಗಲಿದೆ. ಕೇಂದ್ರ ಸರ್ಕಾರ ದೇಶೀಯ ವಿಮಾನಯಾನ ದರವನ್ನು ಶೇ.10-30 ಏರಿಕೆ ಮಾಡಿರುವುದು ಇದಕ್ಕೆ ಕಾರಣ. ಹೀಗಾಗಿ, ದೇಶದೊಳಗೆ ನೀವು ವಿಮಾನದಲ್ಲಿ ಪ್ರಯಾಣ ಮಾಡುತ್ತೀರಿ ಎಂದಾದರೆ, ಹೆಚ್ಚಿನ ಹಣ ನೀಡುವುದು ಅನಿವಾರ್ಯ ಆಗಿದೆ. ಈ ಹೊಸ ಆದೇಶ ಮಾರ್ಚ್​ 31,2021ರವರೆಗೆ ಜಾರಿಯಲ್ಲಿರಲಿದೆ. ನಂತರ ಯಾವುದೇ ಆದೇಶ ಕೇಂದ್ರ ಸರ್ಕಾರದ ಕಡೆಯಿಂದ ಬರದೆ ಇದ್ದರೆ, ಇದೇ ಆದೇಶ ಮುಂದುವರಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ವಿಮಾನದ ಪ್ರಯಾಣದ ಅವಧಿ ಆಧರಿಸಿ ಕಳೆದ ವರ್ಷ ಮೇ 21ರಂದು ವಿಮಾನಯಾನ ಸಚಿವಾಲಯ ಏಳು ಟಿಕೆಟ್​ ಬ್ಯಾಂಡ್​ಗಳನ್ನು ರಚಿಸಿತ್ತು. ಮೊದಲ ಬ್ಯಾಂಡ್​ನಲ್ಲಿ ಕನಿಷ್ಠ ದರವನ್ನು ಈಗ 2000 ರೂಪಾಯಿಯಿಂದ 2,200 ರೂಪಾಯಿಗೆ ಏರಿಕೆ ಮಾಡಿದೆ. ಈ ಬ್ಯಾಂಡ್​ನ ಗರಿಷ್ಠ ದರವನ್ನು 6000 ರೂಪಾಯಿಯಿಂದ 7,800 ರೂಪಾಯಿಗೆ ಹೆಚ್ಚಿಸಿದೆ.

ಉಳಿದ ವಿಮಾನಗಳ ದರದ ಬಗ್ಗೆ ಇಲ್ಲಿದೆ ಮಾಹಿತಿ:

ಪ್ರಯಾಣದ ಅವಧಿ                   ಹಳೆಯ ದರ                                              ಪರಿಷ್ಕೃತ ದರ (ನಿಮಿಷಗಳಲ್ಲಿ)    40-60                                              ₹ 2,500 – ₹ 7,500                                        ₹ 2,800 – ₹ 9,800 60-90                                            ₹ 3,000 – ₹ 9,000                                         ₹ 3,300 – ₹ 11,700 90-120                                          ₹ 3,500 – ₹ 10,000                                       ₹ 3,900 – ₹ 13,000 120-150                                         ₹ 4,500 – ₹ 13,000                                       ₹ 5,000 – ₹ 16,900 150-180                                         ₹ 5,500 – ₹ 15,700                                       ₹ 6,100 – ₹ 20,400 180-210                                        ₹ 6,500 – ₹ 18,600                                        ₹ 7,200 – ₹ 24,200

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ದೇಶದಲ್ಲಿ ವಿಮಾನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಮೇ 25ರಿಂ ದೇಶೀಯ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿತ್ತು.

ಇದನ್ನೂ ಓದಿ: Aero India 2021 ಲಘು ಯುದ್ಧ ವಿಮಾನ ತೇಜಸ್​ ಬೆನ್ನೇರಿದ ಸಂಸದ ತೇಜಸ್ವಿ ಸೂರ್ಯ.. Photos

Follow us on

Related Stories

Most Read Stories

Click on your DTH Provider to Add TV9 Kannada