Parliament: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ನಿಂದ ಬಡವರ ಬದುಕು ಸುಧಾರಣೆ: ಅನುರಾಗ್ ಠಾಕೂರ್
Lok Sabha: ಕೇಂದ್ರ ಬಜೆಟ್ ಆಶಾದಾಯಕವಾಗಿದ್ದುಇದು ಭಾರತವನ್ನು ಆರ್ಥಿಕ ಮತ್ತು ಉತ್ಪಾದನಾ ಕ್ಷೇತ್ರವನ್ನಾಗಿ ಮಾಡಲು ದಾರಿ ತೋರಿಸುತ್ತದೆ ಎಂದು ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಸಂಬಂಧಿತ ಚರ್ಚೆಯ ವೇಳೆ ಮಾತನಾಡಿದ ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಬಡವರ ಬದುಕು ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಬಜೆಟ್ ಆಶಾದಾಯಕವಾಗಿದ್ದು ಇದು ಭಾರತವನ್ನು ಆರ್ಥಿಕ ಮತ್ತು ಉತ್ಪಾದನಾ ಕ್ಷೇತ್ರವನ್ನಾಗಿ ಮಾಡಲು ದಾರಿ ತೋರಿಸುತ್ತದೆ. ಕೆಲವರು ಅವರವರ ನಿಲುವಿನಂತೆ ವಿರೋಧ ವ್ಯಕ್ತಪಡಿಸುತ್ತಾರೆ. ಕೆಲವರು ಗರೀಬಿ ಹಟಾವೋ ಎಂದು ಘೋಷಣೆ ಕೂಗಿದ್ದರು. 5 ತಲೆಮಾರುಗಳಿಂದ ಅಧಿಕಾರ ನಡೆಸಿದರೂ ದೇಶದಲ್ಲಿ ಬಡತನ ನಿರ್ಮೂಲನೆ ಆಗಿಲ್ಲ. ಆದರೆ ಬಡವನೊಬ್ಬನ ಮಗ ಹಲವಾರು ಮಂದಿಯನ್ನು ಬಡತನದಿಂದ ಮೇಲೆತ್ತಿದ್ದಾನೆ. ಕೆಲವು ಜನರು ಚುನಾವಣೆಯ ಪ್ರಣಾಳಿಕೆಯಲ್ಲಿ ಮಾತ್ರ ಭರವಸೆ ನೀಡುತ್ತಾರೆ. ಅದನ್ನು ನಿಭಾಯಿಸುವುದಿಲ್ಲ. ನವ ಭಾರತ ನಿರ್ಮಾಣಕ್ಕಾಗಿ, ಆತ್ಮ ನಿರ್ಭರ್ ಭಾರತಕ್ಕಾಗಿ ಬಜೆಟ್ ಹಾದಿ ತೋರಿಸಿದೆ. ಅದಕ್ಕಾಗಿ ನಾನು ವಿತ್ತ ಸಚಿವರಿಗೆ ಧನ್ಯವಾದಗಳನ್ನು ಹೇಳುತ್ತೇನೆ.
ನನಗಿಂತ ಮುಂಚೆ ಹಿರಿಯ ಸಂಸದರೊಬ್ಬರು ಮಾತನಾಡಿದ್ದರು. ಅವರಿಗೆ ಸದನದ ನಿಯಮಗಳು ಗೊತ್ತಿರುತ್ತದೆ ಎಂದು ನಾನು ಅಂದುಕೊಂಡಿದ್ದೆ. ಒಂದು ವಿಷಯ ಈಗಾಗಲೇ ಚರ್ಚೆಯಾಗಿದ್ದರೆ ಅದನ್ನು ಮತ್ತೆ ಚರ್ಚಿಸುವಂತಿಲ್ಲ. ಅವರು ಬಜೆಟ್ ಬಗ್ಗೆ ಮಾತನಾಡಲು ತಯಾರಿ ನಡೆಸಿಲ್ಲ ಎಂಬುದು ನನಗರ್ಥವಾಯಿತು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
A senior MP was speaking before me, so I thought he must be knowing rules of this House & that if one issue has already been discussed, it is not discussed again. Secondly, I can understand that he was not prepared for Budget (to speak on it): MoS Finance Anurag Thakur in LS pic.twitter.com/CncCKrMHf3
— ANI (@ANI) February 11, 2021
ಮಂಡಿಗಳು ಮುಚ್ಚುವುದಿಲ್ಲ ಕೃಷಿ ಕಾಯ್ದೆಯಿಂದಾಗಿ ದೇಶದಲ್ಲಿ ಮಂಡಿ ವ್ಯವಸ್ಥೆ ನಾಶವಾಗುತ್ತದೆ ಎಂದು ಕೇಳಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅನುರಾಗ್ ಠಾಕೂರ್, ಕೃಷಿ ಕಾಯ್ದೆಯ ಯಾವುದೇ ಅಂಶವು ಮಂಡಿಗಳನ್ನು ಮುಚ್ಚಲಿದೆ ಎಂದು ಹೇಳುವುದಿಲ್ಲ. ಇದು ಅವರ (ರಾಹುಲ್ ಗಾಂಧಿ) ಜ್ಞಾನ ಮತ್ತು ಗ್ರಹಿಕೆಯನ್ನು ತೋರಿಸುತ್ತದೆ. ರೈತರ ಹೆಗಲಲ್ಲಿ ಗನ್ ಇಟ್ಟು ಅವರು ಶೂಟ್ ಮಾಡುತ್ತಿದ್ದಾರೆ ಎಂಬ ಸಾಮಾನ್ಯ ಜ್ಞಾನ ಕೂಡಾ ಅವರಿಗಿಲ್ಲ.
ಇದನ್ನೂ ಓದಿ: Parliament: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಮಂಡಿ ವ್ಯವಸ್ಥೆಯನ್ನು ನಾಶ ಮಾಡಲಿದೆ: ರಾಹುಲ್ ಗಾಂಧಿ
ಯುಪಿಎ ಅವಧಿಯಲ್ಲಿ ಎಂಎಸ್ಪಿ ಅನುಷ್ಠಾನ ಯಾಕೆ ಮಾಡಿಲ್ಲ? ಯುಪಿಎ ಅಧಿಕಾರವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆ (MSP) ಯಾಕೆ ಅನುಷ್ಠಾನಕ್ಕೆ ತರಲಿಲ್ಲ ಎಂದು ಕಾಂಗ್ರೆಸ್ ನ್ನು ಪ್ರಶ್ನಿಸಿದ ಠಾಕೂರ್ , ಕಳೆದ ವರ್ಷ E-NAM ಮೂಲಕ ಮೋದಿ ಸರ್ಕಾರ 1000 ಮಂಡಿಗಳನ್ನು ಲಿಂಕ್ ಮಾಡಿದೆ. ಈ ವರ್ಷವೂ ನಾವು 1000 ಮಂಡಿಗಳನ್ನು ಲಿಂಕ್ ಮಾಡಲಿದ್ದೇವೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ನಾವು 1.14 ಲಕ್ಷ ಕೋಟಿ ಅನುದಾನ ನೀಡಿದ್ದೇವೆ ಎಂದಿದ್ದಾರೆ ಠಾಕೂರ್.
Published On - 8:04 pm, Thu, 11 February 21