Budget 2021 ವಿಶ್ಲೇಷಣೆ | ಭಾರತಕ್ಕೆ ಬೇಕಾಗಿತ್ತು ಜನಸಾಮಾನ್ಯರ ಬಜೆಟ್

ಷೇರು ಸೂಚ್ಯಂಕ ಹೆಚ್ಚಳವಾಗಿದೆ. ಬಂಡವಾಳ ಹೂಡಿಕೆ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯಗಳನ್ನು ತಜ್ಞರು ಹೇಳುತ್ತಾರೆ. ಆದರೆ, ನಮ್ಮಲ್ಲಿ ಸಾಕ್ಷರತೆ ಎಷ್ಟಿದೆ, ಪ್ರಜೆಗಳ ತಲಾ ಆದಾಯ ಎಷ್ಟಿದೆ, ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಎಷ್ಟು ಜನ ಇದ್ದಾರೆ ಎಂದು ಹರೀಶ್ ಕುಮಾರ್ ಹೆಗ್ಡೆ ಪ್ರಶ್ನಿಸಿದರು.

Budget 2021 ವಿಶ್ಲೇಷಣೆ | ಭಾರತಕ್ಕೆ ಬೇಕಾಗಿತ್ತು ಜನಸಾಮಾನ್ಯರ ಬಜೆಟ್
ಕೇಂದ್ರ ಸರ್ಕಾರ ಪ್ರಮುಖರು, ಬಜೆಟ್ ಮಂಡನೆಯ ಅವಧಿಯಲ್ಲಿ..
Follow us
TV9 Web
| Updated By: ganapathi bhat

Updated on:Apr 06, 2022 | 8:25 PM

ಹೊಸ ವರ್ಷ, 2021-22ನೇ ಸಾಲಿನ ಬಜೆಟ್ ಇಂದು ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದಾರೆ. ಈ ಬಗ್ಗೆ ಬಹಳಷ್ಟು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಬಜೆಟ್​ನಿಂದ ಜನಸಾಮಾನ್ಯರಿಗೆ ಏನೂ ಉಪಯೋಗವಿಲ್ಲ. ಇದು ನಿರಾಶಾದಾಯಕ ಬಜೆಟ್ ಎಂದು ಹಲವರು ತಿಳಿಸಿದ್ದಾರೆ. ಕೊರೊನಾ ಬಳಿಕ ಅತ್ಯುತ್ತಮ ಬಜೆಟ್ ಸಿಕ್ಕಿದೆ ಎಂದೂ ಹಲವರು ಸಂತಸಪಟ್ಟಿದ್ದಾರೆ. ಈ ಬಗ್ಗೆ ಟಿವಿ9 ಡಿಜಿಟಲ್ ಲೈವ್ ಕಾರ್ಯಕ್ರಮ ನಡೆಸಿಕೊಟ್ಟಿತು. ಕಾರ್ಯಕ್ರಮದಲ್ಲಿ ಉದ್ಯಮಿ ಹರೀಶ್ ಕುಮಾರ್ ಹೆಗ್ಡೆ ಮಾತನಾಡಿದರು. ನಿರೂಪಕ ಆನಂದ್ ಬುರಲಿ ಲೈವ್ ಕಾರ್ಯಕ್ರಮ ನಡೆಸಿಕೊಟ್ಟರು.

ಷೇರುಪೇಟೆಯ ಸಂವೇದಿ ಸೂಚ್ಯಂಕಗಳು ಏರಿಕೆ ಕಂಡಿವೆ. ಬಂಡವಾಳ ಹೂಡಿಕೆ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯಗಳನ್ನು ತಜ್ಞರು ಹೇಳುತ್ತಾರೆ. ಆದರೆ, ನಮ್ಮಲ್ಲಿ ಸಾಕ್ಷರತೆ ಎಷ್ಟಿದೆ, ಪ್ರಜೆಗಳ ತಲಾ ಆದಾಯ ಎಷ್ಟಿದೆ, ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಎಷ್ಟು ಜನ ಇದ್ದಾರೆ ಎಂದು ಪ್ರಶ್ನಿಸಿದರು. ಮೂಲಸೌಕರ್ಯ, ಕೈಗಾರಿಕೆ ಅಭಿವೃದ್ಧಿ ಎಲ್ಲವೂ ಒಂದು ವಿಭಾಗಕ್ಕೆ ಹಾಗೂ ದೀರ್ಘಕಾಲಿಕ ಯೋಜನೆಯಾಗಿ ಸರಿ ಕಾಣುತ್ತದೆ. ಆದರೆ, ದೇಶದ ಆಯಾ ಪರಿಸ್ಥಿತಿ ನೋಡಿ ಬಜೆಟ್ ಬೇಕು. ಇಲ್ಲವಾದರೆ ಪ್ರತೀವರ್ಷ ಬಜೆಟ್ ಯಾಕೆ ಮಾಡಬೇಕು. ಕೊರೊನಾ ಕಾಲದಲ್ಲಿ ಊಟಕ್ಕಿಲ್ಲದ ಪರಿಸ್ಥಿತಿ ಇತ್ತು. ಈ ಸಂದರ್ಭದ ಚೇತರಿಕೆಗೆ ಬಜೆಟ್ ಬೇಕಾಗಿತ್ತು ಎಂದು ಹರೀಶ್ ಕುಮಾರ್ ಹೇಳಿದರು.

ಹೊರದೇಶದಿಂದ ಬಂಡವಾಳ ಹೂಡಿಕೆ ಆಗುತ್ತದೆ. ಬಳಿಕ, ಅವರು ಲಾಭ ಕೊಂಡುಹೋಗುತ್ತಾರೆ. ಅದರಿಂದ ನೇರವಾಗಿ ಬಂಡವಾಳಶಾಹಿಗಳಿಗೆ ಲಾಭವಾಗಲಿದೆ. ಸದ್ಯ ಭಾರತಕ್ಕೆ ಜನಸಾಮಾನ್ಯರ ಬಜೆಟ್ ಬೇಕಾಗಿತ್ತು ಎಂದು ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಹಾಗಾಗಿ, ಇದು ಜನಸಾಮಾನ್ಯರ ಬಜೆಟ್ ಆಗಿರಲಿಲ್ಲ ಎಂದೂ ಅವರು ಹೇಳಿದರು.

ಇದನ್ನೂ ಓದಿ: Budget 2021 | ಕೇಂದ್ರ ಸರ್ಕಾರ ಮಂಡಿಸಿದ್ದು ಆತ್ಮಬರ್ಬರ ಬಜೆಟ್: ವಿಪಕ್ಷ ನಾಯಕ ಸಿದ್ದರಾಮಯ್ಯ

ಹರೀಶ್ ಕುಮಾರ್ ಹೆಗ್ಡೆ

ಲಂಡನ್​ನಲ್ಲಿ ಕೊರೊನಾ ಬಳಿಕ ಪ್ರತಿಯೊಬ್ಬರ ಖಾತೆಗೆ ಹಣ ಕಳುಹಿಸಿದ್ದಾರೆ. ಉದ್ಯಮಿಗಳಿಗೆ ಲೋನ್ ಕೊಟ್ಟಿದ್ದಾರೆ. ಆದರೆ ಭಾರತದಲ್ಲಿ, ಇನ್ನು ಆರು ತಿಂಗಳಿಗೆ ಒಂದು ವರ್ಷದ ದುಡ್ಡು ಕಟ್ಟಿರಿ. ಆಗಸ್ಟ್, ಸಪ್ಟೆಂಬರ್ ನಿಂದ EMI ಕಂತು ಕಟ್ಟಿ ಎನ್ನುತ್ತಿದ್ದಾರೆ. ಜೊತೆಗೆ, ಜಿಎಸ್​ಟಿ ಹೊರೆಯೂ ಇದೆ. ತಿಂಡಿ, ಊಟಕ್ಕೆ ಜಿಎಸ್​ಟಿ ಕಟ್ಟಬೇಕು. ಬಟ್ಟೆಗೂ ಜಿಎಸ್​ಟಿ ಇದೆ. ಕೊರೊನಾ ಬಳಿಕದ ಭಾರತಕ್ಕೆ ತಕ್ಷಣದ ಪರಿಹಾರವನ್ನು ಬಜೆಟ್ ಹೇಗೆ ಕೊಟ್ಟಿದೆ? ಇವತ್ತಿನ ಸಮಸ್ಯೆಗೆ ಏನು ಪರಿಹಾರವಿದೆ? ಎಂದು ಹರೀಶ್ ಕುಮಾರ್ ಹೆಗ್ಡೆ ಕೇಳಿದರು.

Budget 2021 ವಿಶ್ಲೇಷಣೆ | ಪೆಟ್ರೋಲ್​, ಡೀಸೆಲ್ ಸೆಸ್ ಹೊರೆ ಗ್ರಾಹಕರ ಮೇಲೆ ಬೀಳುವುದಿಲ್ಲ: ಹೂಡಿಕೆ ತಜ್ಞ ರುದ್ರಮೂರ್ತಿ

Budget 2021 ವಿಶ್ಲೇಷಣೆ | ಪೆಟ್ರೋಲ್​, ಡೀಸೆಲ್ ಸೆಸ್ ಹೊರೆ ಗ್ರಾಹಕರ ಮೇಲೆ ಬೀಳುವುದಿಲ್ಲ: ಹೂಡಿಕೆ ತಜ್ಞ ರುದ್ರಮೂರ್ತಿ

Published On - 8:32 pm, Mon, 1 February 21