ಶಕ್ತಿ ಯೋಜನೆಯಿಂದ ಆಗುತ್ತಿರುವ ನಷ್ಟವನ್ನು ನಮ್ಮಿಂದ ಸರಿದೂಗಿಸುವ ಪ್ರಯತ್ನ ಸರ್ಕಾರದ್ದು: ಪುರುಷ ಪ್ರಯಾಣಿಕರು
ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ಇದೇ ಬಸ್ಸಲ್ಲಿರುವ ಮಹಿಳಾ ಪ್ರಯಾಣಿಕರೊಬ್ಬರು ತಮಗೆ ನೀಡುತ್ತಿರುವ ಉಚಿತ ಪ್ರಯಾಣದ ಸೇವೆಯನ್ನು ನಿಲ್ಲಿಸಬೇಕೆಂದು ಹೇಳುತ್ತಾರೆ. ಪುರುಷರು ಹೆಚ್ಚು ಪ್ರಯಾಣ ಮಾಡುವುದರಿಂದ ಅವರ ಮೇಲೆ ಹೊರೆ ಬೀಳಬಾರದು, ನಾವು ಟಿಕೆಟ್ ಖರೀದಿಸಲು ತಯಾರಿದ್ದೇವೆ, ಹಾಗಾಗಿ ನಮಗಿರುವ ಸೌಲಭ್ಯವನ್ನು ಸರ್ಕಾರ ನಿಲ್ಲಿಸಬೇಕೆಂದು ಅವರು ಹೇಳುತ್ತಾರೆ.
ಬೆಳಗಾವಿ: ಬಸ್ ಪ್ರಯಾಣದ ದರಗಳನ್ನು ಸಿದ್ದರಾಮಯ್ಯ ಸರ್ಕಾರ ಶೇಕಡ 15ರಷ್ಟು ಹೆಚ್ಚು ಮಾಡಿದ್ದು ಹೊಸ ದರಗಳು ರವಿವಾರದಿಂದ ಅನ್ವಯವಾಗುತ್ತವೆ. ಸರ್ಕಾರದ ನಿರ್ಧಾರವನ್ನು ಪುರುಷ ಪ್ರಯಾಣಿಕರು ಕಟುವಾಗಿ ಟೀಕಿಸುತ್ತಿದ್ದಾರೆ. ಮಹಿಳೆಯರಿಗೆ ನೀಡುತ್ತಿರುವ ಉಚಿತ ಬಸ್ ಪ್ರಯಾಣ ಸೌಲಭ್ಯದಿಂದ ಉಂಟಾಗುತ್ತಿರುವ ನಷ್ಟವನ್ನು ಸರಿದೂಗಿಸಲು ಸರ್ಕಾರ ಹೊರೆಯನ್ನು ಪುರುಷರ ತಲೆಗೆ ಕಟ್ಟುತ್ತಿದೆ ಎಂದು ಬೆಳಗಾವಿಯ ಪುರುಷ ಪ್ರಯಾಣಿಕರೊಬ್ಬರು ಹೇಳುತ್ತಾರೆ. ಮತ್ತೊಬ್ಬ ಪ್ರಯಾಣಿಕ ಅವರು ಹೇಳಿದ್ದನ್ನು ಅನುಮೋದಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟಕದಲ್ಲಿ ಜ 5ರಿಂದ ಪರಿಷ್ಕೃತ ಟಿಕೆಟ್ ದರ ಅನ್ವಯ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
Latest Videos