ಗಂಭೀರ ಮುಖಮುದ್ರೆಯೊಂದಿಗೆ ವಿಧಾನ ಸೌಧಕ್ಕೆ ಬಂದ ಸಿಎಂ ಸಿದ್ದರಾಮಯ್ಯಗೆ ಬೋಕೆ ನೀಡಿದ ಅಪರಿಚಿತ ವ್ಯಕ್ತಿ
ವಿಡಿಯೋ ಅಲ್ಲಿಗೆ ಮುಗಿಯುವುದಿಲ್ಲ. ಸಿಎಂ ಬೋಕೆ ಸ್ವೀಕರಿಸುವಾಗ ಬೇರೊಬ್ಬ ವ್ಯಕ್ತಿ ಅದ್ಯಾವುದೋ ಮಾಯೆಯಲ್ಲಿ ಅವರ ಮುಂದೆ ಬರುತ್ತಾರೆ. ಸಿಎಂ ಪಕ್ಕದಲ್ಲಿದ್ದ ಅವರ ರಾಜಕೀಯ ಕಾರ್ಯದರ್ಶಿ ಕೆ ಗೋವಿಂದರಾಜುರನ್ನು ಆಗಂತುಕ ಸಂಪೂರ್ಣವಾಗಿ ಉಪೇಕ್ಷಿಸುತ್ತಾರೆ. ಅವರ ವರ್ತನೆಯಿಂದ ಕೋಪಗೊಳ್ಳುವ ಗೋವಿಂದರಾಜು ಏನನ್ನೋ ಹೇಳಿದಾಗ ಮುಂದೆ ಬಂದಿದ್ದ ವ್ಯಕ್ತಿ ಇಂಗು ತಿಂದ ಮಂಗನಂತೆ ಮುಖ ಮಾಡಿಕೊಂಡು ಹಿಂದೆ ಸರಿಯುತ್ತಾರೆ.
ಬೆಂಗಳೂರು: ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ನಾವು ಮಾತಾಡಿತ್ತಿರೋದು ಸಭೆಯ ಬಗ್ಗೆಯಲ್ಲ, ಅದಕ್ಕೂ ಮೊದಲು ನಡೆದ ವಿದ್ಯಮಾನಗಳ ಬಗ್ಗೆ. ದೃಶ್ಯಗಳಲ್ಲಿ ಕಾಣುವ ಹಾಗೆ ಸಿದ್ದರಾಮಯ್ಯ ಗಂಭೀರ ಮುಖಮುದ್ರೆಯೊಂದಿಗೆ ಬ್ಯಾಂಕ್ವೆಟ್ ಹಾಲ್ ಕಡೆ ನಡೆದು ಬರುತ್ತಿದ್ದಾರೆ. ದ್ವಾರದ ಬಳಿ ಬರುತ್ತಿದ್ದಂತೆಯೇ ವ್ಯಕ್ತಿಯೊಬ್ಬರು ಅವರಿಗೆ ಬೋಕೆ ನೀಡಿದಾಗ ಯಾರು ನೀನು ಎಂಬಂತೆ ಪ್ರಶ್ನಾರ್ಥಕ ಭಾವದೊಂದಿಗೆ ಅವರ ಮುಖ ನೋಡುತ್ತಾರೆ. ಆ ವ್ಯಕ್ತಿ ಪ್ರಾಯಶಃ ತನ್ನ ಪರಿಚಯ ಹೇಳಿಕೊಳ್ಳುತ್ತಾರೆ. ಓಹ್ ಹಾಗೋ ಎನ್ನುವಂತೆ ತಲೆಯಾಡಿಸುತ್ತಾ ಸಿಎಂ ಮುಂದೆ ಸಾಗುತ್ತಾರೆ. ಆದರೆ ಆ ವ್ಯಕ್ತಿ ಅಷ್ಟಕ್ಕೆ ಸುಮ್ಮನಾಗದೆ ಮುಖ್ಯಮಂತ್ರಿಯವರ ಪಾದಕ್ಕೆ ನಮಸ್ಕರಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಸೂರಿನಲ್ಲಿ ರಸ್ತೆ ರಾದ್ಧಾಂತ: ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಸಂಸದ ಯದುವೀರ್ ವಿರೋಧ
Latest Videos