AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year 2026

New Year 2026

ನಮ್ಮ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿ ಎಂದು ಮನಸ್ಸು ಬಯಸುವುದು ಸಹಜ. ಹೀಗಾಗಿ 2025ರ ವರ್ಷ ಕೊನೆಗೊಳ್ಳುತ್ತಿದ್ದಂತೆಯೇ ಜನರು ಹೊಸ ಹೊಸ ಭರವಸೆಗಳು ಹಾಗೂ ಹೊಸ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಈ ವರ್ಷ ಹೇಗೋ ಮುಗಿತು ಮುಂದಿನ ವರ್ಷವಾದರೂ ಎಲ್ಲವೂ ಸರಿಯಾಗುತ್ತೆ ಎನ್ನುವ ನಿರೀಕ್ಷೆಯೊಂದಿಗೆ ಎಲ್ಲರೂ ಇದ್ದಾರೆ. ಪ್ರತಿ ವರ್ಷ ಕ್ಯಾಲೆಂಡರ್‌ನಲ್ಲಿ ಜನವರಿ 1ನ್ನು ಹೊಸವರ್ಷ ಎಂದು ಜಗತ್ತು ಅಂಗೀಕರಿಸಿದೆ. ಹೀಗಾಗಿ ಜಗತ್ತಿನೆಲ್ಲೆಡೆ ಡಿಸೆಂಬರ್‌ 31ರ ಸಂಜೆಯೇ ಈ ಸಂಭ್ರಮಾಚರಣೆಯು ಮನೆ ಮಾಡುತ್ತದೆ. ಈ ಬಾರಿಯ ಹೊಸ ವರ್ಷಕ್ಕೆ ಸಂಬಂಧ ಪಟ್ಟ ವಿಶೇಷ ಹಾಗೂ ಆಸಕ್ತಿದಾಯಕ ಸ್ಟೋರಿಗಳನ್ನು ಓದಲು ಟಿವಿ 9 ನ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಇನ್ನೂ ಹೆಚ್ಚು ಓದಿ

ಈ ಮೂರು ಸಂಖ್ಯೆಯಲ್ಲಿ ಹುಟ್ಟಿದವರು ಜನವರಿಯಲ್ಲಿ ಅತ್ಯಂತ ಜಾಗರೂಕರಾಗಿರಿ!

2026 ಜನವರಿ ಹಲವರಿಗೆ ಹೊಸ ಆರಂಭವಾದರೂ, ಸಂಖ್ಯಾಶಾಸ್ತ್ರದ ಪ್ರಕಾರ 4, 7, 8 ಜನ್ಮ ಸಂಖ್ಯೆಗಳಿಗೆ ರಾಹು, ಕೇತು, ಶನಿ ಗ್ರಹಗಳ ಪ್ರಭಾವದಿಂದ ಜಾಗ್ರತೆ ಅಗತ್ಯ. ಆರ್ಥಿಕ ಮತ್ತು ವೈಯಕ್ತಿಕ ನಿರ್ಧಾರಗಳಲ್ಲಿ ಆತುರ ಸಲ್ಲದು. ಅಸ್ತಿತ್ವದಲ್ಲಿರುವ ಕಾರ್ಯಗಳನ್ನು ಸುಧಾರಿಸುವುದು, ಹಿಂದಿನ ತಪ್ಪುಗಳಿಂದ ಪಾಠ ಕಲಿಯುವುದು ಈ ತಿಂಗಳಿಗೆ ಸೂಕ್ತ. ತಾಳ್ಮೆ ಮತ್ತು ವ್ಯವಸ್ಥಿತ ಚಿಂತನೆಯು ಮುಂದಿನ ಯಶಸ್ಸಿಗೆ ದಾರಿಯಾಗುತ್ತದೆ.

Daily Devotional: 2026ರ ವರ್ಷ ಪೂರ್ತಿ ಈ 4 ರಾಶಿಯ ಮಹಿಳೆಯರಿಗೆ ಅದೃಷ್ಟದ ಸುರಿಮಳೆ

2026ರಲ್ಲಿ ಕರ್ಕಾಟಕ, ಸಿಂಹ, ಕುಂಭ, ಮೀನ ರಾಶಿಯ ಮಹಿಳೆಯರಿಗೆ ಅಪಾರ ಅದೃಷ್ಟ ಕೂಡಿಬರಲಿದೆ. ಗ್ರಹಗಳ ಪ್ರಭಾವದಿಂದ ಈ ರಾಶಿಯವರಿಗೆ ವೃತ್ತಿ, ಆರೋಗ್ಯ, ಕುಟುಂಬ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು ದೊರೆಯಲಿದೆ. ತಾಳ್ಮೆ ಮತ್ತು ಸರಿಯಾದ ಯೋಜನೆಗಳೊಂದಿಗೆ ಮುನ್ನಡೆದರೆ, ಈ ವರ್ಷ ಪವಾಡಗಳನ್ನು ಸೃಷ್ಟಿಸುವ ಅವಕಾಶಗಳು ಹೆಚ್ಚಾಗಿವೆ.

ಮದ್ಯದ ನಶೆಯಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಯುವಕರು ಜೈಲುಪಾಲು

ಹೊಸ ವರ್ಷದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಇಬ್ಬರು ಯುವಕರು ಡಿಸೆಂಬರ್ 31 ರಂದು ರಾತ್ರಿ ಕಂಠ ಪೂರ್ತಿ ಕುಡಿದಿದ್ದರು. ಸೀದಾ ಮನೆಗೆ ಹೋಗುವ ಬದಲು ರಸ್ತೆಯಲ್ಲಿ‌‌ ನಿಂತಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದರು. ಪ್ರಶ್ನೆ ಮಾಡಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಸಾಲದಕ್ಕೆ ಪೊಲೀಸ್ ಠಾಣೆಯಲ್ಲಿ ಆವಾಜ್ ಹಾಕಿ ಇದೀಗ ಜೈಲು ಸೇರಿದ್ದಾರೆ.

ಬೆಂಗಳೂರು: ಕುಡಿದ ಮತ್ತಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ, ಪೊಲೀಸರ ಮೇಲೆಯೂ ಹಲ್ಲೆ!

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕುಡಿದ ಯುವಕರು ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಲು ಬಂದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆಯೂ ಹಲ್ಲೆ ನಡೆಸಿದ್ದಇಬ್ಬರು ಯುವಕರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ರಾತ್ರಿ ಗಂಡನಿಲ್ಲದ ವೇಳೆ ಪ್ರೇಮಿಯನ್ನು ಮನೆಗೆ ಕರೆದು ಗುಪ್ತಾಂಗ ಕತ್ತರಿಸಿದ ಮಹಿಳೆ!

ಹೊಸ ವರ್ಷದ ಸಂಭ್ರಮಾಚರಣೆಗೆ ತನ್ನ ಮನೆಗೆ ಪ್ರೇಮಿಯನ್ನು ಕರೆದಿದ್ದ ವಿವಾಹಿತ ಮಹಿಳೆ ಆತನಿಗೆ ದೊಡ್ಡ ಶಾಕ್ ನೀಡಿದ್ದಾಳೆ. ಮುಂಬೈನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮನೆಗೆ ಬಂದಿದ್ದ ತನ್ನ ಪ್ರೇಮಿಯ ಖಾಸಗಿ ಅಂಗಗಳನ್ನು ಕತ್ತರಿಸಿದ 25 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಆರೋಪಿಯು ಹಲ್ಲೆಗೊಳಗಾದ ವ್ಯಕ್ತಿಯ ಸಹೋದರಿಯ ಅತ್ತಿಗೆಯಾಗಿದ್ದಳು. ಹೀಗಾಗಿ, ಹಲವು ವರ್ಷಗಳಿಂದ ಅವರಿಬ್ಬರೂ ಪರಿಚಯಸ್ಥರಾಗಿದ್ದರು. ಅವರಿಬ್ಬರ ನಡುವೆ ಅಕ್ರಮ ಸಂಬಂಧವಿತ್ತು.

Daily Devotional: 2026ರಲ್ಲಿ ಎದುರಾಗುವ ಆಕಸ್ಮಿಕ ಕಷ್ಟಗಳಿಂದ ಪಾರಾಗುವ ವಿಧಾನ

2026ರಲ್ಲಿ ಗೋಚಾರ ಗ್ರಹಗಳ ಪ್ರಭಾವ, ನಕಾರಾತ್ಮಕ ಶಕ್ತಿಗಳು, ಪಾಪ ಹಾಗೂ ಕರ್ಮಫಲಗಳಿಂದ ಉಂಟಾಗಬಹುದಾದ ಕಷ್ಟಗಳು, ಅನಿರೀಕ್ಷಿತ ಅಪಘಾತಗಳು, ಅನಾರೋಗ್ಯ, ಆರ್ಥಿಕ ನಷ್ಟ ಮತ್ತು ಆಸ್ತಿ ಕಲಹಗಳಂತಹ ಸಮಸ್ಯೆಗಳಿಂದ ಪಾರಾಗಲು ಪ್ರಾಚೀನ ತಂತ್ರವೊಂದನ್ನು ತಿಳಿಸಲಾಗಿದೆ. ವರ್ಷದ ಪ್ರಾರಂಭದಲ್ಲಿಯೇ ಈ ತಂತ್ರವನ್ನು ಅನುಸರಿಸುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ.

ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ

ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಪ್ರಕಾಶಂ ಜಿಲ್ಲೆಯ ಪಂಗುಲೂರು ಮಂಡಲದ ರೇನಿಂಗವರಂ ಗ್ರಾಮದಲ್ಲಿ ನಡೆದ ಟಗರು ಓಟದ ಸ್ಪರ್ಧೆಗಳು ಆಕರ್ಷಕವಾಗಿದ್ದವು. ಗ್ರಾಮದಲ್ಲಿ ಆಯೋಜಿಸಲಾದ ಟಗರು ಓಟದ ಸ್ಪರ್ಧೆಗಳಿಗೆ ಸ್ಥಳೀಯರು ಮತ್ತು ನೆರೆಯ ಹಳ್ಳಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಕಾಶಂ, ಬಾಪಟ್ಲಾ ಮತ್ತು ಮಾರ್ಕಪುರಂ ಜಿಲ್ಲೆಗಳಿಂದ ಸುಮಾರು 41 ಜೋಡಿ ಟಗರುಗಳು ಬಂದವು.

ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ

2026ರ ಹೊಸ ವರ್ಷದ ಪ್ರಯುಕ್ತ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯು ಪ್ರಪಂಚದಾದ್ಯಂತದ ಭಕ್ತರಿಗೆ ತನ್ನ ಶುಭಾಶಯಗಳನ್ನು ತಿಳಿಸಿದೆ. 2026 ಮಹಾಂತ ಸ್ವಾಮಿ ಮಹಾರಾಜರ ಮಾರ್ಗದರ್ಶನದಲ್ಲಿ ಶಾಂತಿ, ಆರೋಗ್ಯ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಯಿಂದ ತುಂಬಿದ ವರ್ಷವಾಗಲಿ ಎಂದು ಅದು ಹಾರೈಸಿದೆ. ಈ ಸಂದರ್ಭದಲ್ಲಿ, ಪ್ರಭು ನೀಲಕಂಠವರ್ಣಿ ಸ್ವಾಮಿಯ ಅಭಿಷೇಕ ದರ್ಶನದ ವಿಡಿಯೋವನ್ನು ಬಿಎಪಿಎಸ್ ತನ್ನ ಭಕ್ತರೊಂದಿಗೆ ಹಂಚಿಕೊಂಡಿದೆ.

ಹೊಸ ವರ್ಷಕ್ಕೆ ಭರ್ಜರಿ ಕಿಕ್​​ ಕೊಟ್ಟ ಮದ್ಯ: ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ವೆಲ್​​ಕಂ ಮಾಡಿದ್ದಾರೆ. ಮಧ್ಯರಾತ್ರಿವರೆಗೂ ಮದ್ಯ ಮಾರಾಟಕ್ಕೆ ಅವಕಾಶವಿದ್ದ ಹಿನ್ನೆಲೆ ಕುಡಿದು ಎಂಜಾಯ್​ ಮಾಡಿದರು. ಹೊಸ ವರ್ಷದಂದು ಮದ್ಯ ಮಾರಾಟದಿಂದ ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ ಹರಿದುಬಂದಿದೆ. ಎಷ್ಟು ಅಂತ ಕೇಳಿದರೆ ಶಾಕ್​ ಆಗ್ತೀರಾ.

ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂ ಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್!

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮದ ನಡುವೆ ವಾಮಾಚಾರದ ಘಟನೆ ಗ್ರಾಮಸ್ಥರಿಗೆ ಆಘಾತ ನೀಡಿದೆ. ರಸ್ತೆಯಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು ಇಟ್ಟು ಪೂಜೆ ಮಾಡಿರುವುದನ್ನು ಕಂಡು ಗ್ರಾಮಸ್ಥರು ಭಯಗೊಂಡಿದ್ದಾರೆ. ಪೊಲೀಸರ ತನಿಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವಿಡಿಯೋ ನೋಡಿ.

ಹೊಸ ವರ್ಷದಂದು ಬಿಎಂಟಿಸಿಗೆ ಭರ್ಜರಿ ಆದಾಯ: ನಿನ್ನೆ ಒಂದೇ ದಿನ ಗಳಿಸಿದ್ದೆಷ್ಟು ಗೊತ್ತಾ?

ಹೊಸ ವರ್ಷಾಚರಣೆಗೆ ಬೆಂಗಳೂರಿನ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಿ ಯಶಸ್ವಿಯಾಗಿದೆ. ರಾತ್ರಿ 11 ರಿಂದ ಮಧ್ಯರಾತ್ರಿ 3 ರವರೆಗೆ 200 ವಿಶೇಷ ಬಸ್​​ಗಳು ಸಂಚಾರ ಮಾಡಿವೆ. ನಿನ್ನೆ ಒಂದೇ ದಿನ ಸರಿಸುಮಾರು 1 ಲಕ್ಷ ಅಧಿಕ ಪ್ರಯಾಣಿಕರು ಸಂಚಾರ ಮಾಡಿದ್ದು, ಬಿಎಂಟಿಸಿ ಬೊಕ್ಕಸಕ್ಕೆ ಲಕ್ಷ ಲಕ್ಷ ರೂ ಆದಾಯ ಹರಿದುಬಂದಿದೆ.

Chikkamagaluru: ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​; ವಿಡಿಯೋ ವೈರಲ್​

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡಿದ ಮತ್ತಲ್ಲಿದ್ದ ಯುವಕನೋರ್ವ ಬೀದಿ ನಾಯಿ ಜೊತೆ ಡ್ಯಾನ್ಸ್​​ ಮಾಡಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ವಿಡಿಯೋ ನೋಡಿದ ಕೆಲವರು ನಾಯಿ ಜೊತೆಗೆ ಯುವಕನ ಡ್ಯಾನ್ಸ್​​ಗೆ ಖುಷಿ ಪಟ್ಟಿದ್ದರೆ, ಇನ್ನು ಕೆಲವರು ಕುಡಿದ ಮತ್ತಿನಲ್ಲಿ ಬೀದಿ ನಾಯಿಗೆ ಹಿಂಸೆ ನೀಡಲಾಗಿದೆ ಎಂದು ದೂರಿದ್ದಾರೆ.