AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷಕ್ಕೆ ಭರ್ಜರಿ ಕಿಕ್​​ ಕೊಟ್ಟ ಮದ್ಯ: ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ವೆಲ್​​ಕಂ ಮಾಡಿದ್ದಾರೆ. ಮಧ್ಯರಾತ್ರಿವರೆಗೂ ಮದ್ಯ ಮಾರಾಟಕ್ಕೆ ಅವಕಾಶವಿದ್ದ ಹಿನ್ನೆಲೆ ಕುಡಿದು ಎಂಜಾಯ್​ ಮಾಡಿದರು. ಹೊಸ ವರ್ಷದಂದು ಮದ್ಯ ಮಾರಾಟದಿಂದ ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ ಹರಿದುಬಂದಿದೆ. ಎಷ್ಟು ಅಂತ ಕೇಳಿದರೆ ಶಾಕ್​ ಆಗ್ತೀರಾ.

ಹೊಸ ವರ್ಷಕ್ಕೆ ಭರ್ಜರಿ ಕಿಕ್​​ ಕೊಟ್ಟ ಮದ್ಯ: ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ
ಮದ್ಯ (ಸಂಗ್ರಹ ಚಿತ್ರ)
Kiran Surya
| Edited By: |

Updated on:Jan 01, 2026 | 5:07 PM

Share

ಬೆಂಗಳೂರು, ಜನವರಿ 01: ರಾಜ್ಯಾದ್ಯಂತ ಹೊಸ ವರ್ಷಾಚರಣೆ (New Year 2026) ಸಂಭ್ರಮ ಜೋರಾಗಿತ್ತು. ಪಬ್‌, ಬಾರ್‌, ರೆಸ್ಟೋರೆಂಟ್​​ಗಳು ಝಗಮಗಿಸಿದ್ದವು. ಕುಡಿದು ಟೈಟಾದ ಯುವಕ, ಯುವತಿಯರು ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದರು. ಇನ್ನು ಮದ್ಯ (Liquor) ಮಾರಾಟದ ಅವಧಿಯನ್ನು ವಿಸ್ತರಿಸಲಾಗಿತ್ತು. ಹೀಗಾಗಿ ಹೊಸ ವರ್ಷದಂದು ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿ ಆದಾಯವಾಗಿದೆ. ಈ ವರ್ಷ ಅಬಕಾರಿ ಇಲಾಖೆ ಒಟ್ಟು 587.51 ಕೋಟಿ ರೂ. ಆದಾಯ ಗಳಿಸಿದೆ.

ಈ ವರ್ಷ ಹೆಚ್ಚಿನ ಮದ್ಯ ಮಾರಾಟ: 587.51 ಕೋಟಿ ರೂ ಆದಾಯ

ಹೊಸ ವರ್ಷಾಚರಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿತ್ತು. ಆ ಮೂಲಕ ಮದ್ಯ ಪ್ರಿಯರಿಗೆ ಗುಡ್​ ನ್ಯೂಸ್​​ ಸಿಕ್ಕಿತ್ತು. ಸೂರ್ಯೋದಕ್ಕೂ ಮುನ್ನವೇ ಬಾರ್​​​​​ಗಳು ಓಪನ್ ಆಗಿದ್ದವು. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಮದ್ಯ ಮಾರಾಟ ಆಗಿದೆ.

ಇದನ್ನೂ ಓದಿ: ಹೊಸ ವರ್ಷದಂದು ಬಿಎಂಟಿಸಿಗೆ ಭರ್ಜರಿ ಆದಾಯ: ನಿನ್ನೆ ಒಂದೇ ದಿನ ಗಳಿಸಿದ್ದೆಷ್ಟು ಗೊತ್ತಾ?

ಐಎಂಎಲ್, ಬಿಯರ್ ಮಾರಾಟದಿಂದ 587.51 ಕೋಟಿ ಆದಾಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 166.74 ಕೋಟಿ ರೂ ಈ ವರ್ಷ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದುಬಂದಿದೆ.

ಇದನ್ನೂ ಓದಿ: ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಆದ ಕಲೆಕ್ಷನ್​ ಎಷ್ಟು?

2024ರ ಡಿ.29, 30, 31ರಂದು 8.25 ಲಕ್ಷ ಬಾಕ್ಸ್ IML ಮತ್ತು 5.03 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುವ ಮೂಲಕ 2024ರಲ್ಲಿ 420.77 ಕೋಟಿ ರೂ ಆದಾಯ ಗಳಿಸಲಾಗಿತ್ತು. 2025ರ ಡಿ.29, 30, 31ರಂದು 9.84 ಲಕ್ಷ ಬಾಕ್ಸ್ IML, ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 1.59 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಮತ್ತು ಇದೇ ದಿನದಂದು 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1.61 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಐಎಂಎಲ್, ಬಿಯರ್ ಮಾರಾಟದಿಂದ ಈ ವರ್ಷ ಅಬಕಾರಿ 587.51 ಕೋಟಿ ಆದಾಯವಾಗಿದೆ. ಇದನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 166.74 ಕೋಟಿ ರೂ ಆದಾಯ ಹರದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:04 pm, Thu, 1 January 26

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ