ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್ ಆದಾಯ: ಆದ ಕಲೆಕ್ಷನ್ ಎಷ್ಟು?
ಹೊಸ ವರ್ಷಾಚರಣೆಯ ಪ್ರಯುಕ್ತ ನಮ್ಮ ಮೆಟ್ರೋ ಒಂದೇ ದಿನದಲ್ಲಿ 3.08 ಕೋಟಿ ರೂ. ಆದಾಯ ಗಳಿಸಿ ದಾಖಲೆ ಮಾಡಿದೆ. ನಿನ್ನೆ 8,93,903 ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದು, ಎಂ.ಜಿ. ರಸ್ತೆ ಹೊರತುಪಡಿಸಿ ಉಳಿದ ಮಾರ್ಗಗಳ ಮೆಟ್ರೋ ನಿಲ್ದಾಣಗಳು ಓಪನ್ ಇದ್ದವು. ನಿನ್ನೆ ಬೆಳಗ್ಗೆ 5 ಗಂಟೆಯಿಂದ ಇಂದು ಬೆಳಗ್ಗಿನ ಜಾವ 3:10ರವರೆಗೆ ಮೆಟ್ರೋ ಸಂಚಾರ ಸಮಯ ವಿಸ್ತರಿಸಲಾಗಿತ್ತು.
ಬೆಂಗಳೂರು, ಜನವರಿ 01: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ನಮ್ಮ ಮೆಟ್ರೋ ಭಾರಿ ಆದಾಯ ಗಳಿಸಿದೆ. ನಿನ್ನೆ ಒಂದೇ ದಿನದಲ್ಲಿ ಮೆಟ್ರೋಗೆ 3 ಕೋಟಿ 8 ಲಕ್ಷ ರೂ. ಆದಾಯ ಹರಿದುಬಂದಿದೆ ಎಂದು ಮೆಟ್ರೋ ಅಂಕಿಅಂಶಗಳು ತಿಳಿಸಿವೆ. ಸುಮಾರು 8,93,903 ಮಂದಿ ಪ್ರಯಾಣಿಕರು ಮೆಟ್ರೋ ಸೇವೆಗಳನ್ನು ಬಳಸಿಕೊಂಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಮೆಟ್ರೋ ಸಂಚಾರ ಸಮಯವನ್ನು ವಿಸ್ತರಿಸಲಾಗಿತ್ತು. ನಿನ್ನೆ ಬೆಳಗ್ಗೆ 5 ಗಂಟೆಯಿಂದ ಇಂದು ಬೆಳಗ್ಗಿನ ಜಾವ 3:10ರವರೆಗೆ ಮೆಟ್ರೋ ಸಂಚಾರ ಸಮಯ ವಿಸ್ತರಿಸಲಾಗಿತ್ತು. ಎಂ.ಜಿ. ರಸ್ತೆ ನಿಲ್ದಾಣ ಹೊರತುಪಡಿಸಿ, ಹಳದಿ, ನೇರಳೆ ಮತ್ತು ಹಸಿರು ಮಾರ್ಗಗಳ ಎಲ್ಲಾ ನಿಲ್ದಾಣಗಳು ಕಾರ್ಯನಿರ್ವಹಿಸಿದ್ದವು. ಪ್ರಮುಖವಾಗಿ ಕೋರಮಂಗಲ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರದಂತಹ ಪ್ರದೇಶಗಳಲ್ಲಿ ಜನರು ಹೊಸ ವರ್ಷಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಮೆಟ್ರೋಗೆ ಅಧಿಕ ಆದಾಯ ಬಂದಿದೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
