Daily Horoscope: ಸಾಲದಿಂದ ಮುಕ್ತಿ, ಹೊಸ ಉದ್ಯೋಗ ಆರಂಭಿಸುವಿರಿ
03 ಜನವರಿ 2024: ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಒಡಂಬಡಿಕೆ ಸರಿಯಾಗಿ ವ್ಯವಹಾರಗಳು ಇರಲಿ. ಸಂಗಾತಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಇರುವಿರಿ. ಉದ್ಯೋಗದ ವಿಚಾರವನ್ನು ಬಹಳ ಗೌಪ್ಯವಾಗಿ ಇಡುವಿರಿ. ಹಾಗಾದರೆ ಜನವರಿ 03ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವಜ್ರ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 14 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:13 ರಿಂದ ಮಧ್ಯಾಹ್ನ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:26 ರಿಂದ 04:51 ರವರೆಗೆ, ಗುಳಿಕ ಕಾಲ 08:24 ರಿಂದ 09:49 ರವರೆಗೆ.
ಮೇಷ ರಾಶಿ: ಇಂದು ಎಲ್ಲ ಒತ್ತಡಗಳನ್ನು ಮರೆತು ಕೆಲವು ಎಲ್ಲರ ಜೊತೆ ಬೆರೆಯುವಿರಿ. ಇಂದಿನ ನಿಮ್ಮ ವ್ಯವಹಾರವು ಹತ್ತಾರು ಗೊಂದಲಗಳಿಂದ ಇರಲಿದ್ದು ಮುಂದುವರಿದರೆ ನಷ್ಟವಾಗುವ ಭಯವೂ ಇರಲಿದೆ. ದ್ವಿಚಕ್ರ ಸವಾರರು ಬಹಳ ಎಚ್ಚರಿಕೆಯಿಂದ ಓಡಾಡಬೇಕು. ಅಧ್ಯಾತ್ಮದಲ್ಲಿ ಮನಸ್ಸನ್ನು ಇಡುವಿರಿ. ಇಂದು ನಿಮ್ಮ ಸಮಯವನ್ನು ಸ್ನೇಹಿತರ ಕಾರ್ಯಕ್ಕೆ ಕೊಡಬೇಕಾಗಿಬರಬಹುದು. ಅದ್ದರಿಂದ ನಿಮ್ಮ ಕೆಲಸವು ವಿಳಂಬವಾಗಬಹುದು. ಆಸೆಗಳನ್ನು ನೀವು ನಿಯಂತ್ರಣಕ್ಕೆ ತರಲು ಪ್ರಯತ್ನಿಸುವಿರಿ. ಸಂಗಾತಿಯ ನಡವಳಿಕೆಯನ್ನು ಊಹಿಸಲಾಗದು. ಯಾರಿಂದಲೂ ಗೌರವ ಸಿಗಲಿಲ್ಲ ಎಂಬ ನೋವು ಕಾಣಿಸಿಕೊಳ್ಳುವುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಳ್ಳಲು ತಂತ್ರಗಳನ್ನು ಹೂಡಬಹುದು. ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ಸಿಗಲಿದೆ. ದೂರಪ್ರಯಾಣ ಮಾಡಲು ಇಂದು ಇಷ್ಟಪಡುವಿರಿ.
ವೃಷಭ ರಾಶಿ: ನಿಮ್ಮ ವಾಹನದಿಂದ ಹೆಚ್ಚು ನಷ್ಟ ಸಂಭವಿಸುವುದು. ಹಿರಿಯರ ಮಾತನ್ನು ನಿರಾಕರಿಸಿದ್ದ ನಿಮಗೆ, ಅದೇ ಉಪಯೋಗಕ್ಕೆ ಬರಲಿದೆ. ವಿದ್ಯಾರ್ಥಿಗಳು ಸತತ ಶ್ರಮದಿಂದ ಇಂದು ಹಂತವನ್ನು ತಲುಪುವರು. ನಿಮ್ಮ ನೋವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಕೃಷಿಯಿಂದ ಲಾಭ ಗಳಿಸಲು ತಜ್ಞರ ಸಲಹೆ ಸಿಗಲಿದೆ. ಶತ್ರುಗಳ ಚಲನವಲನಗಳ ಮೇಲೆ ಕಣ್ಣಿಡುವಿರಿ. ಅಕಾಸ್ಮಾತ್ತಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ಕಡೆಗೆ ಗಮನವಿರಲಿ. ಕುಟುಂಬದಲ್ಲಿ ನಿಮ್ಮಿಂದ ಸಂತೋಷವನ್ನು ಇರುವುದು. ಬಂಧುಗಳ ಪ್ರೀತಿಯೂ ಸಿಗುವುದು. ಅತಿಥಿ ಸತ್ಕಾರವನ್ನು ಮಾಡಲು ಉತ್ಸುಕತೆ ಇರುವುದು. ನಿಮ್ಮ ಚಿಂತೆಯನ್ನು ನೀವು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸುಮ್ಮನೇ ಸೃಷ್ಟಿಸಿಕೊಳ್ಳುವಿರಿ. ನಿಮ್ಮ ವಿರುದ್ಧ ಯಾರಾದರೂ ಅನಿರೀಕ್ಷಿತವಾಗಿ ಮಾತನಾಡಬಹುದು.
ಮಿಥುನ ರಾಶಿ: ಇಂದು ಹಿತಶತ್ರುಗಳು ನಿಮ್ಮ ಭಾವನೆಯ ಜೊತೆ ಆಟವಾಡುವರು. ವಿದ್ಯಾರ್ಥಿಗಳಿಗೆ ಮಾನಸಿಕವಾದ ಭಯವನ್ನು ತೆಗೆದರೆ ಮುನ್ನಡೆಗೆ ಅವಕಾಶವಿದೆ. ವೃತ್ತಿಯಲ್ಲಿ ಹಿತಶತ್ರುಗಳ ಕಾಟದಿಂದ ಸಿಗಬೇಕಾದ ಸ್ಥಾನಕ್ಕೆ ತೊಂದರೆಯಾಗಬಹುದು. ಸರಳವಾದ ಕಾರ್ಯವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಒಟ್ಟಿಗೇ ಬರುವ ಕೆಲಸದಿಂದ ನೀವು ಉದ್ವೇಗಕ್ಕೆ ಬೀಳುವಿರಿ. ಔದಾರ್ಯ ಗುಣವು ದುರುಪಯೋಗವಾಗಬಹುದು. ಸಾಲದಿಂದ ಬಿಡುಗಡೆ ಸಿಕ್ಕಿ ಮನಸ್ಸು ನಿರಾಳವಾಗಲಿದೆ. ಹಿರಿಯರ ಶುಶ್ರೂಷೆಗೆ ಅವಕಾಶ ಸಿಗುವುದು. ಸಂಪೂರ್ಣ ಮಾಹಿತಿಯನ್ನು ಪಡೆದು ಮುಂದಡಿ ಇಡುವುದು ಸೂಕ್ತ. ಹೊಸ ಉದ್ಯೋಗವನ್ನು ಆರಂಭಿಸುವತ್ತ ನಿಮ್ಮ ಆಲೋಚನೆಯು ಗಾಢವಾಗಿ ಇರುವುದು. ಮಕ್ಕಳಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತವು ಕಂಡು ಉದ್ವಿಗ್ನವಗಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ. ಆಲಸ್ಯದ ಕಾರಣ ಎಲ್ಲರಿಂದ ದೂರುಬರಬಹುದು. ವಿವಾದದಿಂದ ನೀವೇ ಹಿಂದಕ್ಕೆ ಸರಿಯುವಿರಿ.
ಕರ್ಕಾಟಕ ರಾಶಿ: ಇಂದು ಪ್ರಾಮುಖ್ಯ ಕೊಡಬೇಕಾದಲ್ಲಿ ಅರಿತು ಪ್ರಯತ್ನಪೂರ್ವಕವಾಗಿ ಕೊಡಿ. ದಾಂಪತ್ಯದ ಮೇಲೆ ದುಷ್ಟರ ದೃಷ್ಟಿಯು ಬೀಳಬಹುದು. ನಿಮ್ಮ ನಡೆ-ನುಡಿಗಳು ಆದಷ್ಟು ಸರಳವಾಗಿ ಇರಲಿ. ಮಿತಿಮೀರಿದ ಆಹಾರಸೇವನೆಯಿಂದ ನಿಮಗೆ ಕಷ್ಟವಾದೀತು. ಮಕ್ಕಳ ಬಗೆಗೆ ನಂಬಿಕೆ ಕಡಿಮೆಯಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಸಂಭ್ರಮದಲ್ಲಿ ಪಾಲ್ಗೊಳ್ಳುವಿರಿ. ಯಾರದೋ ಮಾತಿನಿಂದ ನಿಮಗೆ ಸಂಕಟವಾಗುವುದು. ಆಪ್ತರನ್ನು ಸತ್ಕಾರಕ್ಕಾಗಿ ಮನೆಗೆ ಆಹ್ವಾನಿಸುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಯಲ್ಲಿ ಮಗ್ನರಾಗುವಿರಿ. ತುರ್ತು ಕಾರ್ಯಕ್ಕಾಗಿ ಅವಸರವಸರವಾಗಿ ಪ್ರಯಾಣ ಮಾಡಬೇಕಾಗಬಹುದು. ಶುಭ ಸಮಯವು ನಿಮ್ಮ ದಿಕ್ಕನ್ನು ಬದಲಿಸೀತು. ಮಾನಸಿಕವಾಗಿ ನೀವು ಬಲಗೊಳ್ಳುವ ಅವಶ್ಯಕತೆ ಇದೆ. ಕಲಾಕೌಶಲವನ್ನು ಮೆರೆಯಬಹುದು. ಸಂಗಾತಿಯ ಮಾತು ನಿಮಗೆ ತಾಳ್ಮೆಯನ್ನು ಕಡಿಮೆ ಮಾಡೀತು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ ಮಾಡಿ.
ಸಿಂಹ ರಾಶಿ: ನಿಮ್ಮ ಉದ್ಯೋಗವನ್ನು ಇನ್ನೊಬ್ಬರ ಜೊತೆ ತುಲನೆ ಮಾಡಿಕೊಳ್ಳು. ಅನಿರೀಕ್ಷಿತವಾಗಿ ಸಿಕ್ಕ ಬಂಧುಗಳನ್ನು ಮನೆಗೆ ಆಮಂತ್ರಿಸುವಿರಿ. ಪ್ರೀತಿಯಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿರುಪಯುಕ್ತ ವಸ್ತುಗಳನ್ನು ದಾನರೂಪವಾಗಿ ಕೊಡುವಿರಿ. ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಅಧಿಕಾರಿಗಳಿಂದ ಹೇಳಿಸಿಕೊಳ್ಳುವಿರಿ. ಇಂದು ಸ್ತ್ರೀಯರು ಅಲಂಕಾರಲ್ಲಿ ಹೆಚ್ಚು ತೊಡಗಿಕೊಳ್ಳುವರು. ಮಾಡಿದ ತಪ್ಪಿನಿಂದ ಪಶ್ಚಾತ್ತಾಪ ಪಡುವಿರಿ. ಎಷ್ಟೇ ಪ್ರಯತ್ನಿಸಿದರೂ ಕೊಟ್ಟ ಹಣವು ನಿಮಗೆ ಸಿಗದು. ಅದರ ಆಸೆಯನ್ನು ಬಿಡುವಿರಿ. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗುವುದು. ಮಕ್ಕಳ ವಿವಾಹಕ್ಕೆ ಅತಿಯಾದ ಪ್ರಯತ್ನದಿಂದ ಫಲವನ್ನು ಕಾಣುವಿರಿ. ಅನಾರೋಗ್ಯವನ್ನು ಯಾರ ಬಳಿಯಾದರೂ ಹೇಳಿಕೊಂಡು ಸೂಕ್ತವಾದ ಸಲಹೆಯನ್ನು ಪಡೆಯುವಿರಿ. ಉದ್ಯೋಗದ ಅನುಭವವನ್ನು ಸರಿಯಾಗಿ ಪಡೆಯಿರಿ. ನೀವು ಹಾಕಿಕೊಂಡ ಗುರಿಯನ್ನು ಯಾರಾದರೂ ತಪ್ಪಿಸಬಹುದು.
ಕನ್ಯಾ ರಾಶಿ: ಒಡಂಬಡಿಕೆ ಸರಿಯಾಗಿ ವ್ಯವಹಾರಗಳು ಇರಲಿ. ಸಂಗಾತಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಇರುವಿರಿ. ಉದ್ಯೋಗದ ವಿಚಾರವನ್ನು ಬಹಳ ಗೌಪ್ಯವಾಗಿ ಇಡುವಿರಿ. ಸಾಮರ್ಥ್ಯದ ಪರೀಕ್ಷೆಯಲ್ಲಿ ಸಲ್ಲದ ಮಾತನ್ನು ಹಿರಿಯರಿಗೆ ಹೇಳುವಿರಿ. ಪ್ರೀತಿಯಿಂದ ಮನಸ್ಸು ಕುರುಡಾಗುವುದು. ಅಹಂಕಾರವು ನಿಮ್ಮನ್ನು ಕೆಳಗೆ ದೂಡಬಹುದು. ಸರಳತೆಯನ್ನು ರೂಢಿಸಿಕೊಳ್ಳುವ ಬಗ್ಗೆ ಆಲೋಚನೆ ಇರಲಿ. ಅನಗತ್ಯಗಳ ಅಪೇಕ್ಷೆಯಿಂದ ಸಂಗಾತಿಯ ಸಂಪತ್ತನ್ನು ಖಾಲಿಮಾಡುವಿರಿ. ನಿಮ್ಮ ಮನಸ್ಸು ಕಾರ್ಯದಲ್ಲಿ ಮಗ್ನವಾಗಿ ಇರದು. ಆರಂಭಿಸಿದ ಉದ್ಯೋಗದಲ್ಲಿ ಯಾವ ವಿಘ್ನವೂ ಬಾರದಂತೆ ಪ್ರಾರ್ಥಿಸಿ. ತಂದೆಯ ಮಾತು ನಿಮಗೆ ಕಿರಿಕಿರಿ ಎನಿಸಬಹುದು. ನಿಮ್ಮ ಆದಾಯದ ಮೂಲವಾದ ವ್ಯಾಪಾರದಲ್ಲಿ ಲಾಭವಿರುವುದು. ಬಹಳ ದಿಗಳಿಂದ ಅನುಭವಿಸುತ್ತಿರುವ ರೋಗಕ್ಕೆ ಔಷಧವು ಸಿಗುವುದು. ನಿಮ್ಮ ಎಲ್ಲ ಕಾರ್ಯಕ್ಕೂ ಯಶಸ್ಸು ಬೇಕು ಎಂಬ ಹಂಬಲ ಬೇಡ.