Horoscope: ಈ ರಾಶಿಯವರ ಒರಟು ಸ್ವಭಾವವು ಇಷ್ಟವಾಗದೇ ಹೋಗಬಹುದು
03 ಜನವರಿ 2024: ಶುಕ್ರವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಆಪ್ತರಿಗೆ ಕೊಟ್ಟ ಹಣವು ಮರಳಿ ಬಾರದೇ ಇರಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಹಣವನ್ನು ಹೊಂದಿಸುವಿರಿ. ನಿಮ್ಮ ಬಗ್ಗೆ ಮಾತನಾಡುವವರಿಗೆ ಈಗಲೇ ಉತ್ತರ ಕೊಡುವುದು ಬೇಡ. ಹಾಗಾದರೆ ಜನವರಿ 03ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವಜ್ರ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 14 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:13 ರಿಂದ ಮಧ್ಯಾಹ್ನ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:26 ರಿಂದ 04:51 ರವರೆಗೆ, ಗುಳಿಕ ಕಾಲ 08:24 ರಿಂದ 09:49 ರವರೆಗೆ.
ತುಲಾ ರಾಶಿ: ಸ್ಥಾನವನ್ನು ಎತ್ತರಿಸಿದ ಮಾತ್ರ ನೀವೂ ಎತ್ತರವೇರಬೇಕೆಂದಿಲ್ಲ. ಮಿತ್ರರ ಸಹಾಯಕ್ಕೆ ಇಂದು ಕಿರು ಪ್ರಯಾಣ ಮಾಡುವಿರಿ. ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ವಂಚಿಸುವ ಸಾಧ್ಯತೆ ಇದೆ. ನಿಮ್ಮ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಹಾಗೂ ಓದಿನ ಕಡೆ ಗಮನವು ಇಲ್ಲದಿರುವುದು ಪಾಲಕರಿಗೆ ಗೊತ್ತಾಗಿ ಬೇಸರವಾಗಬಹುದು. ಯಾವುದೇ ಉದ್ಯಮಕ್ಕೂ ಕಾನೂನಿನ ವಿಷಯದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆದು ಮುಂದುವರಿಯಿರಿ. ಪರದೇಶ ವಾಸದಿಂದ ಉದ್ಯಮಕ್ಕೆ ಪೆಟ್ಟು. ಸ್ಪರ್ಧೆಯಲ್ಲಿ ಸೋಲಾಗುವ ಸಾಧ್ಯತೆ ಇದೆ. ಮಹಿಳೆಯರು ಸ್ವ ಉದ್ಯಮದಿಂದ ಲಾಭವನ್ನು ಮಾಡಿಕೊಳ್ಳುವರು. ಪ್ರೀತಿಯು ಅಪನಂಬಿಕೆಯಿಂದ ನಾಶವಾಗಬಹುದು. ಆಪ್ತರ ಸಹಾಯದಿಂದ ನಿಮಗೆ ಉದ್ಯೋಗವು ಸಿಗಲಿದೆ. ಭವಿಷ್ಯದ ಯೋಜನೆಯನ್ನು ಸರಿಯಾಗಿ ತೀರ್ಮಾನಿಸಿಕೊಳ್ಳಲಾರಿರಿ. ಮಕ್ಕಳ ವಿವಾಹಕ್ಕಾಗಿ ಓಡಾಟ ಮಾಡಬೇಕಾಗುವುದು. ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳನ್ನು ಸರಿಯಾಗಿರಿಸಿ.
ವೃಶ್ಚಿಕ ರಾಶಿ: ಯಾವುದನ್ನೇ ಆದರೂ ಕೇಳಿ ಪಡೆದುದ್ದಕ್ಕೆ ಮೌಲ್ಯ ಅಷ್ಟೇ. ಕೊಟ್ಟ ಗೌರವ ನಿಮಗೆ ಸಾಲದು. ಮಕ್ಕಳಿಗಾಗಿ ಪಟ್ಟಶ್ರಮವು ಇಂದು ಸಾರ್ಥಕ ಎನಿಸುವುದು. ಇಂದು ಹಣದ ಬಗ್ಗೆ ನಿಮಗೆ ಲೆಕ್ಕವೇ ಸಿಗದೇ ಖರ್ಚಾಗುವುದು. ಆಪ್ತರಿಗೆ ಕೊಟ್ಟ ಹಣವು ಮರಳಿ ಬಾರದೇ ಇರಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಹಣವನ್ನು ಹೊಂದಿಸುವಿರಿ. ನಿಮ್ಮ ಬಗ್ಗೆ ಮಾತನಾಡುವವರಿಗೆ ಈಗಲೇ ಉತ್ತರ ಕೊಡುವುದು ಬೇಡ. ನಿಮ್ಮ ಒರಟು ಸ್ವಭಾವವು ಇಷ್ಟವಾಗದೇ ಹೋಗಬಹುದು. ಸುಮ್ಮನೇ ಒಂಟಿಯಾಗಿ ಇದ್ದು ಹತ್ತಾರು ಯೋಚನೆಗಳು ಬರಬಹುದು. ಬಂಧುಗಳಿಂದ ಉಡುಗೊರೆ ಸಿಗಲಿದೆ. ನಿಮ್ಮ ಮಾತಿನ ಮೇಲೆ ನಂಬಿಕೆಯು ಕಷ್ಟವಾದೀತು. ಅಪಘಾತ ಭೀತಿಯು ಕಾಡಬಹುದು. ಕಲಾವಿದರು ಅವಕಾಶವನ್ನು ಹೆಚ್ಚು ಪಡೆಯಬಹುದು. ಹೊಸ ವಸ್ತುಗಳ ಬಗ್ಗೆ ಅಸೆ ಬರುವುದು. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.
ಧನು ರಾಶಿ: ಸಿಗುವ ನೆಮ್ಮದಿಯನ್ನು ಬಿಟ್ಟು ಮತ್ತೆಲ್ಲೋ ಹೋಗಿ ಹಣ ಸಮಯ ಎಲ್ಕವನ್ನೂ ಹಾಳುಮಾಡಿಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಬೆಂಬಲಿಗರನ್ನು ಕಳೆದುಕೊಳ್ಳಬಹುದು. ನೀವಾಡುವ ಸುಳ್ಳು ಎಲ್ಲರಿಗೂ ಗೊತ್ತಾದೀತು. ನಿದ್ರೆಯಿಂದ ಆಲಸ್ಯವು ಹೆಚ್ಚಾಗುವುದು. ಹಣಕಾಸಿನ ವ್ಯವಹಾರದಲ್ಲಿ ಮಿತ್ರರ ಜೊತೆ ಕಲಹವಾಗಬಹುದು. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವಿರಿ. ಸ್ತ್ರೀಯರಿಗೆ ಇಂದು ಸಂತೋಷದ ದಿನ. ಎಲ್ಲರೆದುರೂ ಸಿಟ್ಟಿನಿಂದ ಕೂಗಾಡುವುದು ಬೇಡ. ಪೋಷಕರು ವಿದ್ಯಾಭ್ಯಾಸದ ಪ್ರಗತಿಯನ್ನು ಪರಿಶೀಲಿಸುವುದು ಅವಶ್ಯ. ನೆರಮನೆಯರ ಜೊತೆ ಮಾತಿಗೆ ಮಾತು ಬೆಳೆದು ಕಲಹವಾಗಬಹುದು. ನಿಮ್ಮ ವಸ್ತುವಿನ ಮೇಲೆ ವ್ಯಾಮೋಹವು ಅಧಿಕವಾಗಬಹುದು. ಚಿತ್ತವು ಚಾಂಚಲ್ಯದಿಂದ ಇರುವುದು. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ಆರ್ಥಿಕ ವ್ಯವಹಾರವನ್ನು ಬಿಟ್ಟುಕೊಡುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ದೊಡ್ಡ ಪ್ರಯತ್ನ ನಡೆಯುವುದು.
ಮಕರ ರಾಶಿ: ಸಮಯವನ್ನು ಪ್ರೀತಿಗಾಗಿ ತ್ಯಾಗಮಾಡಬೇಕಾದೀತು. ದುರಸ್ತಿ ಕಾರ್ಯವನ್ನು ಮಾಡುವವರಿಗೆ ಈ ದಿನ ಒತ್ತಡವಿರುವುದು. ಕೆಲಸಗಳು ಪೂರ್ಣವಾಗದೇ ಇರುವುದು ನಿಮಗೆ ಆಂತಕವಾಗಬಹುದು. ವ್ಯಕ್ತಿಗತ ಅಭಿಪ್ರಾಯವನ್ನು ಒಪ್ಪಲಾರಿರಿ. ಜವಾಬ್ದಾರಿಯ ಕೆಲಸವನ್ನು ಜಾಗರೂಕತೆಯಿಂದ ಮಾಡಿ. ದಾಂಪತ್ಯದ ಕಲಹವು ಮುಕ್ತಾಯವಾಗುವುದು. ಹೊಸ ಕೆಲಸಗಳನ್ನು ನಿರ್ವಹಿಸಲು ಧೈರ್ಯ ಸಾಲದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮಫಲಿತಾಂಶವನ್ನು ಪಡೆಯುವರು. ಆಕಸ್ಮಿಕ ಧನಲಾಭದಿಂದ ನಿಮಗೆ ಖುಷಿಯಾಗುವುದು. ಹಿರಿಯರ ಬಗ್ಗೆ ನಿಮಗೆ ಪೂಜ್ಯ ಭಾವವು ಬರಬಹುದು. ನಿಮ್ಮವರ ಧನ ಸಹಾಯವನ್ನು ಕೇಳಲು ಮುಜುಗರವಾದೀತು. ಅನ್ಯ ಚಿಂತೆಯಿಂದ ನಿದ್ರೆಗೆ ಭಂಗ. ಅನವಶ್ಯಕ ಮಾತುಗಳಿಂದ ವಿವಾದವಾಗುವುದು. ಮಕ್ಕಳ ಪ್ರಗತಿಯಿಂದ ಸಂತಸ. ಉದ್ಯೋಗದಲ್ಲಿ ಅಧಿಕ ವೇತನದ ನಿರೀಕ್ಷೆ ಇರುವುದು.
ಕುಂಭ ರಾಶಿ; ಒತ್ತಾಯದ ಮೇರೆಗೆ ಇಂದು ಅನವಶ್ಯಕವಾದ ಪ್ರಯಾಣವಾಗುವುದು. ಇನ್ನೊಬ್ಬರಿಗೆ ಹೇಳುವಾಗ ನೀವು ಅದನ್ನು ಆಚರಿಸಬೇಕಾಗಬಹುದು. ಪುಣ್ಯಸ್ಥಳಗಳ ಭೇಟಿಯಿಂದ ಖುಷಿಯಾಗುವುದು. ಸಾಹಿತ್ಯ ಆಸಕ್ತರಿಗೆ ಉತ್ತಮ ಅವಕಾಶಗಳು ಸಿಗುವುದು. ಸ್ವಂತ ವಾಹನದ ದುರಸ್ತಿಯಿಂದ ಧನ ನಷ್ಟ. ನಿಮ್ಮ ಸಲಹೆಯನ್ನು ಕೇಳದಿರುವುದು ಇಷ್ಟವಾಗದು. ನೌಕರರು ನಿಮ್ಮ ಮೇಲೆ ಸಿಟ್ಟಾಗಬಹುದು. ಸೌಕರ್ಯಕ್ಕೆ ತಕ್ಕ ಹಾಗೆ ದಿನಚರಿಯನ್ನು ಬದಲಿಸಿ. ಪ್ರಭಾವೀ ವ್ಯಕ್ತಿಗಳಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಇಂದು ನಿಮ್ಮ ಸಂಗಾತಿಯಿಂದ ಭವಿಷ್ಯಕ್ಕೆ ಸಲಹೆಯು ಸಿಗಬಹುದು. ನಿಮ್ಮ ಮನೆ ನಿರ್ಮಾಣದ ಕೆಲಸವು ಅರ್ಧಕ್ಕೆ ನಿಲ್ಲಬಹುದು. ಸಾಮಾಜಿಕ ಕಾರ್ಯದಲ್ಲಿ ಉತ್ಸಾಹದಿಂದ ಇರುವಿರಿ. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು.
ಮೀನ ರಾಶಿ: ನೀವು ವ್ಯಾಪಾರದ ಅನುಕೂಲತೆಯನ್ನು ನೋಡಿ ಮುಂದಡಿ ಇಡಬಹುದು. ಸ್ನೇಹಿತರ ಜೊತೆ ಪಾಲುದಾರಿಕೆಯಲ್ಲಿ ಸೇರಿಕೊಳ್ಳುವಿರಿ. ನಿಮ್ಮ ಕಾರ್ಯವನ್ನು ಮಿತ್ರರ ಮೂಲಕ ಮಾಡಿಕೊಳ್ಳುವಿರಿ. ನಿರ್ದಿಷ್ಟ ಸಮಯಕ್ಕೆ ಆಗುವ ಕೆಲಸವು ಸಮಯದ ಮಿತಿಯನ್ನು ಮೀರಬಹುದು. ಅಪರಿತ ಕರೆಗಳಿಂದ ನಿಮಗೆ ಸಂಕಟವಾಗಬಹುದು. ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಉತ್ಸಾಹವೇ ಇರದು. ಶತ್ರುಗಳ ಭಯವು ಕಾರ್ಯವನ್ನು ನಿಧಾನ ಮಾಡಿಸುವುದು. ನಿಮ್ಮ ಒತ್ತಡಗಳನ್ನು ಮರೆತು ನಿಶ್ಚಿಂತೆಯಿಂದ ದಿನವನ್ನು ಕಳೆಯುವಿರಿ. ನಿಮ್ಮ ನೌಕರರಿಂದ ಇಂದಿನ ಕೆಲವು ಜವಾಬ್ದಾರಿಯನ್ನು ಕೊಡುವಿರಿ. ಸಂಗಾತಿಯು ಕಡೆಗಣನೆಗೆ ನಿಮ್ಮ ಮೇಲೆ ಬೇಸರವಾಗಬಹುದು. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು. ವಿದ್ಯಾಭ್ಯಾಸದಲ್ಲಿ ಪ್ರಗತಿಯ ಕಷ್ಟವಾಗಬಹುದು.