ಹಿಂದುಳಿದ ವರ್ಗದ ನಾಯಕತ್ವಕ್ಕೆ ಕೊಡಲಿ ಪೆಟ್ಟು: ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬೊಮ್ಮಾಯಿ
ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಸಹ ಸಿದ್ದರಾಮಯ್ಯ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಸಿದ್ದರಾಮಯ್ಯ ಅವರು ನಾಲ್ಕು ದಶಕ ರಾಜಕಾರಣ ಮಾಡಿದ್ದಾರೆ. ಅವರು ಮೊದಲ ಅಹಿಂದ ಸಭೆ ಮಾಡಿದಾಗ ನಾನೇ ಮುಖ್ಯ ಭಾಷಣ ಮಾಡಿದ್ದೆ. ಅವರೇ ಮೊನ್ನೆ ನೆನಪು ಮಾಡಿಕೊಂಡಿದ್ರು. ಕಾಂಗ್ರೆಸ್ ಸೇರಿ 2007 ರಲ್ಲಿ ಬೈ ಎಲೆಕ್ಷನ್ ನಿಂತಿದ್ರು. ಆಗ ಅವರಿಗೆ ನಾವೂ ಸಹ ಸಹಾಯ ಮಾಡಿದ್ದೆವು. ಅವರು ಕಾಂಗ್ರೆಸ್ ಗೆ ಹೋದ ಮೇಲೆ ನನಗೆ ಅವರ ಜೊತೆ ರಾಜಕೀಯ ನಂಟಿಲ್ಲ. ಸೈಂದಾತಿಕವಾಗಿ ನಾವು ಕಾಂಪ್ರಮೈಸ್ ಆಗಿಲ್ಲ. ಆದ್ರೆ, ಅವರು ಸಮಾಜವಾದಿ, ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಇರುವ ನಾಯಕ. ಅವರನ್ನು ಇಳಿಸಿ ಕಾಂಗ್ರೆಸ್ ನವರು ಹಿಂದುಳಿದ ವರ್ಗದ ನಾಯಕತ್ವಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ. ಇದರ ಪರಿಣಾಮ ಖಂಡಿತವಾಗಿ ಆಗುತ್ತೆ ಎಂದಿದ್ದಾರೆ.
ಹಾವೇರಿ, (ಮೇ 29): ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದ ಅವರ ಆಪ್ತರಿಗೆ ಹಾಗು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅದರಲ್ಲೂ ಮುಖ್ಯವಾಗಿ ಪಕ್ಷ ಬೇರೆ ಇದ್ದರೂ ಸಹ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಿದ್ದರಾಮಯ್ಯನವರ ರಾಜೀನಾಮೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರ ಜೊತೆಗಿನ ರಾಜಕೀಯ ಹಳೇ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಅದರಂತೆ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ (Basavaraj bommai) ಸಹ ಸಿದ್ದರಾಮಯ್ಯ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಸಿದ್ದರಾಮಯ್ಯ ಅವರು ನಾಲ್ಕು ದಶಕ ರಾಜಕಾರಣ ಮಾಡಿದ್ದಾರೆ. ಅವರು ಮೊದಲ ಅಹಿಂದ ಸಭೆ ಮಾಡಿದಾಗ ನಾನೇ ಮುಖ್ಯ ಭಾಷಣ ಮಾಡಿದ್ದೆ. ಅವರೇ ಮೊನ್ನೆ ನೆನಪು ಮಾಡಿಕೊಂಡಿದ್ರು. ಕಾಂಗ್ರೆಸ್ ಸೇರಿ 2007 ರಲ್ಲಿ ಬೈ ಎಲೆಕ್ಷನ್ ನಿಂತಿದ್ರು. ಆಗ ಅವರಿಗೆ ನಾವೂ ಸಹ ಸಹಾಯ ಮಾಡಿದ್ದೆವು. ಅವರು ಕಾಂಗ್ರೆಸ್ ಗೆ ಹೋದ ಮೇಲೆ ನನಗೆ ಅವರ ಜೊತೆ ರಾಜಕೀಯ ನಂಟಿಲ್ಲ. ಸೈಂದಾತಿಕವಾಗಿ ನಾವು ಕಾಂಪ್ರಮೈಸ್ ಆಗಿಲ್ಲ. ಆದ್ರೆ, ಅವರು ಸಮಾಜವಾದಿ, ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಇರುವ ನಾಯಕ. ಅವರನ್ನು ಇಳಿಸಿ ಕಾಂಗ್ರೆಸ್ ನವರು ಹಿಂದುಳಿದ ವರ್ಗದ ನಾಯಕತ್ವಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ. ಇದರ ಪರಿಣಾಮ ಖಂಡಿತವಾಗಿ ಆಗುತ್ತೆ ಎಂದಿದ್ದಾರೆ.


