GT vs RR: ಶುಭ್ಮನ್ ಗಿಲ್ ಶತಕ; ಗುಜರಾತ್ಗೆ ಫೈನಲ್ ಟಿಕೆಟ್
Gujarat Titans Qualify for 2026 IPL Final: ಚಂಡೀಗಢದಲ್ಲಿ ನಡೆದ ಐಪಿಎಲ್ 2026 ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರಾಜಸ್ಥಾನ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ 2026 ರ IPL ಫೈನಲ್‌ಗೆ ಪ್ರವೇಶಿಸಿದೆ. ಮೇ 31 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಗುಜರಾತ್, ಹಾಲಿ ಚಾಂಪಿಯನ್ RCB ತಂಡವನ್ನು ಎದುರಿಸಲಿದೆ. RCB ಈ ಹಿಂದೆ ಗುಜರಾತ್ ವಿರುದ್ಧ ಕ್ವಾಲಿಫೈಯರ್ 1 ಗೆದ್ದು ಫೈನಲ್ ತಲುಪಿತ್ತು. ಈಗ ಈ ಎರಡು ತಂಡಗಳ ನಡುವೆ ಪ್ರಶಸ್ತಿ ಕದನ ನಡೆಯಲಿದೆ.

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ಹಾಗೂ ಗುಜರಾತ್ (RR vs GT) ನಡುವಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ತಂಡ 2026 ರ ಐಪಿಎಲ್ (IPL 2026) ಫೈನಲ್‌ಗೆ ಟಿಕೆಟ್ ಪಡೆದುಕೊಂಡಿದೆ. ಈ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 214 ರನ್ ಬಾರಿಸಿ ಗುಜರಾತ್ಗೆ 215 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 18.4 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿತು. ಇದೀಗ ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ತಂಡವನ್ನು ಎದುರಿಸಲಿದೆ. ವಾಸ್ತವವಾಗಿ ಇದೇ ಗುಜರಾತ್ ವಿರುದ್ಧ ಕ್ವಾಲಿಫೈಯರ್ 1 ರಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ಫೈನಲ್ಗೇರಿತ್ತು. ಇದೀಗ ಈ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ರಾಜಸ್ಥಾನಕ್ಕೆ ಕಳಪೆ ಆರಂಭ
ಈ ನ್ಯೂ ಚಂಡೀಗಢ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡವು 215 ರನ್ ಕಲೆಹಾಕಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡವು ಮೊದಲ ಎರಡು ಓವರ್‌ಗಳಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ತಂಡವು ಒತ್ತಡದಲ್ಲಿದ್ದಾಗ ಜೊತೆಯಾದ ವೈಭವ್ ಸೂರ್ಯವಂಶಿ ಮತ್ತು ರವೀಂದ್ರ ಜಡೇಜಾ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಮಾಡಿದ ವೈಭವ್ 96 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು.
ವೈಭವ್ ಏಕಾಂಗಿ ಹೋರಾಟ
ಈ ಆವೃತ್ತಿಯ ಐದನೇ ಅರ್ಧಶತಕ ಬಾರಿಸಿದ ವೈಭವ್ ಸತತ ಎರಡನೇ ಪಂದ್ಯದಲ್ಲಿ ಶತಕದಂಚಿನಲ್ಲಿ ಎಡವಿದರು. ಉಳಿದಂತೆ ಅಂತಿಮ ಓವರ್‌ನಲ್ಲಿ, ಡೊನೊವನ್ ಫೆರೇರಾ, ರಶೀದ್ ಖಾನ್ ಬೌಲಿಂಗ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ, ಕೇವಲ 11 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿ ತಂಡವನ್ನು 214ಕ್ಕೆ ಕೊಂಡೊಯ್ದರು. ಗುಜರಾತ್ ಪರ ಜೇಸನ್ ಹೋಲ್ಡರ್ ಮತ್ತು ಕಗಿಸೊ ರಬಾಡ ತಲಾ ಎರಡು ವಿಕೆಟ್ ಪಡೆದರು.
ಗುಜರಾತ್ಗೆ ಗಿಲ್- ಸುದರ್ಶನ್ ಬಲ
ವಾಸ್ತವವಾಗಿ ಈ ಗುರಿ ಬೆನ್ನಟ್ಟುವುದಕ್ಕೂ ಮುನ್ನವೇ ಗುಜರಾತ್ ತಂಡಕ್ಕೆ ಅದೊಂದು ಆತಂಕ ಕಾಡತೊಡಗಿತ್ತು. ಅದೆನೆಂದರೆ ಗುಜರಾತ್ ತಂಡವು ಐಪಿಎಲ್‌ನಲ್ಲಿ ಈ ಹಿಂದೆ ಎಂದಿಗೂ 210 ರನ್‌ಗಳಿಗಿಂತ ಹೆಚ್ಚಿನ ಗುರಿಯನ್ನು ಬೆನ್ನಟ್ಟಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲೂ ಗುಜರಾತ್ ತಂಡಕ್ಕೆ ಸೋಲು ಖಚಿತ ಎನ್ನಲಾಗುತ್ತಿತ್ತು. ಆದರೆ ಈ ಬಾರಿ ಇತಿಹಾಸ ಬದಲಿಸುವ ಇನ್ನಿಂಗ್ಸ್ ಆಡಿದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮತ್ತೊಮ್ಮೆ ಶತಕದ ಜೊತೆಯಾಟವನ್ನು ಕಟ್ಟಿ ತಂಡದ ಗೆಲುವು ಖಚಿತಪಡಿಸಿದರು. ಆದರೆ ಈ ಜೊತೆಯಾಟದ ಹಿಂದೆ ರಾಜಸ್ಥಾನ್ ಫೀಲ್ಡರ್ಗಳ ಕೈವಾಡವೂ ಇತ್ತು. ಸುದರ್ಶನ್ 14 ರನ್ ಬಾರಿಸಿ ಆಡುತ್ತಿದ್ದಾಗ ನೀಡಿದ್ದ ಸುಲಭ ಕ್ಯಾಚ್ ಅನ್ನು ಡೊನೊವನ್ ಫೆರೇರಾ ಕೈಬಿಟ್ಟರು. ಈ ತಪ್ಪು ಅಂತಿಮವಾಗಿ ರಾಜಸ್ಥಾನಕ್ಕೆ ದುಬಾರಿಯಾಗಿ ಪರಿಣಮಿಸಿ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡಿತು.
IPL 2026 GT vs RR Qualifier-2 Highlights: ವೈಭವ್ ಹೋರಾಟ ವ್ಯರ್ಥ; ಗುಜರಾತ್ಗೆ ಫೈನಲ್ ಟಿಕೆಟ್
ಗೆಲುವಿನ ಶತಕ ಬಾರಿಸಿದ ಗಿಲ್
ಈ ಜೀವದಾನದ ಲಾಭ ಪಡೆದ ಸುದರ್ಶನ್ ಅರ್ಧಶತಕ ಬಾರಿಸಿದರೆ, ಗಿಲ್ ಶತಕದ ಇನ್ನಿಂಗ್ಸ್ ಆಡಿದರು. ಹಾಗೆಯೇ ಈ ಇಬ್ಬರೂ ಕೇವಲ 13 ಓವರ್‌ಗಳಲ್ಲಿ 167 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು, ರಾಜಸ್ಥಾನವನ್ನು ಪಂದ್ಯದಿಂದ ಹೊರದಬ್ಬಿದರು. ಸತತ ಎರಡನೇ ಪಂದ್ಯದಲ್ಲೂ ಸುದರ್ಶನ್ (58) ಹಿಟ್ ವಿಕೆಟ್ ಆದರೂ, ನಾಯಕ ಗಿಲ್ ಪ್ಲೇಆಫ್ ಪಂದ್ಯಗಳಲ್ಲಿ ತಮ್ಮ ಎರಡನೇ ಶತಕವನ್ನು ಬಾರಿಸುವ ಮೂಲಕ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಗಿಲ್ ಕೇವಲ 53 ಎಸೆತಗಳಲ್ಲಿ 104 ರನ್ ಗಳಿಸಿ ಔಟಾದರು. ಅಂತಿಮವಾಗಿ, ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್ ಮತ್ತು ರಾಹುಲ್ ಟೆವಾಟಿಯಾ ತಂಡವನ್ನು 18.4 ಓವರ್‌ಗಳಲ್ಲಿ ಗುರಿ ತಲುಪಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 pm, Fri, 29 May 26





