AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

June 2026 Horoscope: ಮಾಸ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಜೂನ್ ತಿಂಗಳ ಭವಿಷ್ಯ ಇಲ್ಲಿ ತಿಳಿಯಿರಿ

ಜೂನ್ 2026 ರಲ್ಲಿ ಕುಜ, ಗುರು ಮತ್ತು ಸೂರ್ಯ ಗ್ರಹಗಳ ಮಹತ್ವದ ಸ್ಥಾನಗಳು 12 ರಾಶಿಗಳ ಮೇಲೆ ಪ್ರಭಾವ ಬೀರಲಿವೆ. ಗುರುವು ಉಚ್ಚಸ್ಥಾನದಲ್ಲಿದ್ದು, ಗುರುದಶೆಯವರಿಗೆ ಅತ್ಯುನ್ನತ ಫಲ ನೀಡಲಿದೆ ಹಾಗೂ ಅನೇಕ ದೋಷಗಳನ್ನು ನಿವಾರಿಸುತ್ತದೆ. ಪ್ರತಿ ರಾಶಿಗೆ ಆರ್ಥಿಕ, ವೃತ್ತಿ, ವೈವಾಹಿಕ ಮತ್ತು ಆರೋಗ್ಯದ ಕುರಿತು ವಿಶೇಷ ಫಲಗಳು ಲಭ್ಯವಿವೆ. ಈ ಗ್ರಹಗಳ ಸಂಚಾರದಿಂದ ಆಗುವ ಪರಿಣಾಮಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

June 2026 Horoscope: ಮಾಸ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಜೂನ್ ತಿಂಗಳ ಭವಿಷ್ಯ ಇಲ್ಲಿ ತಿಳಿಯಿರಿ
ಜೂನ್ ಮಾಸ ಭವಿಷ್ಯImage Credit source: Pinterest
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 29, 2026 | 9:11 AM

Share

ಜೂನ್ 2026 ರಲ್ಲಿ ಕುಜನು ಮಿತ್ರನ‌ ಸ್ಥಾನದಲ್ಲಿ, ಗುರುವು ಉಚ್ಚಸ್ಥಾನದಲ್ಲಿ, ಸೂರ್ಯನೂ ಮಿತ್ರನ ಸ್ಥಾನದಲ್ಲಿ ಇರುವರು. ಗುರುವಿನ ಸಂಚಾರದಿಂದ ಅನೇಕ ದೋಷಗಳು ಪರಿಹಾರವಾಗಲಿವೆ. ಗುರುದಶೆಯವರಿಗೆ ಅತ್ಯುತ್ತಮ ಕಾಲವಾಗಿ, ಎಲ್ಲದರಲ್ಲಿಯೂ ಜಯ ಸಿಗಲಿದೆ.

​ಮೇಷ ರಾಶಿ:

ಈ ತಿಂಗಳು ಮೂರನೇ ಮನೆಯ ಸೂರ್ಯ ಮತ್ತು ಎಂಟನೇ ಮನೆಯ ಗುರುವಿನಿಂದ ಮಿಶ್ರಫಲ. ಧೈರ್ಯದಿಂದ ಕೆಲಸ ಕಾರ್ಯಗಳನ್ನು ಯಶಸ್ವಿಗೊಳಿಸುತ್ತೀರಿ. ಆದರೆ ಹಠಾತ್ ಖರ್ಚುಗಳು ಬರಬಹುದು, ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ.

​ವೃಷಭ ರಾಶಿ:

ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಕೋಪ ಜಾಸ್ತಿ. ಧನಸ್ಥಾನದ ಸೂರ್ಯನಿಂದ ಆರ್ಥಿಕ ಪ್ರಗತಿ ಇದ್ದರೂ, ಏಳನೇ ಮನೆಯ ಗುರು-ಬುಧರ ಪ್ರಭಾವದಿಂದ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡದಂತೆ ತಾಳ್ಮೆಯಿಂದ ಇರಬೇಕಾಗುತ್ತದೆ.

​ಮಿಥುನ ರಾಶಿ:

ರಾಶಿಯಲ್ಲಿ ಸೂರ್ಯ ಹಾಗೂ ಎರಡನೇ ಮನೆಯಲ್ಲಿ ಗುರು-ಶುಕ್ರರಿದ್ದಾರೆ. ಆರ್ಥಿಕವಾಗಿ ಉತ್ತಮ ಲಾಭ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಕಣ್ಣಿನ ಸಮಸ್ಯೆ ಅಥವಾ ಉಷ್ಣದ ಬಾಧೆ ಕಾಡಬಹುದು, ಎಚ್ಚರವಿರಲಿ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲೇ ಗುರು, ಬುಧ, ಶುಕ್ರರ ಯುತಿ ಇರುವುದರಿಂದ ಜ್ಞಾನಾರ್ಜನೆ ಮತ್ತು ಕೀರ್ತಿ ಹೆಚ್ಚಲಿದೆ. ವ್ಯಯಸ್ಥಾನದ ಸೂರ್ಯನಿಂದ ದೂರ ಪ್ರಯಾಣ ಮತ್ತು ಖರ್ಚುಗಳು ಅಧಿಕವಾಗಲಿವೆ. ಶುಭ ಕಾರ್ಯಗಳಿಗೆ ಹಣ ವಿನಿಯೋಗವಾಗಲಿದೆ.

​ಸಿಂಹ ರಾಶಿ:

ರಾಶಿಗೆ ಕೇತು ಹಾಗೂ ಹನ್ನೊಂದನೇ ಮನೆಯಲ್ಲಿ ಸೂರ್ಯನಿದ್ದಾನೆ. ಉದ್ಯೋಗದಲ್ಲಿ ಅತ್ಯುತ್ತಮ ಪ್ರಗತಿ ಮತ್ತು ಹಿರಿಯರಿಂದ ಧನಸಹಾಯ ಸಿಗಲಿದೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿದ್ದು, ಹಠಾತ್ ಧನಲಾಭದ ಯೋಗ ಈ ತಿಂಗಳು ನಿಮಗಿದೆ.

​ಕನ್ಯಾ ರಾಶಿ:

ಹತ್ತನೇ ಮನೆಯ ಸೂರ್ಯ ಮತ್ತು ಹನ್ನೊಂದನೇ ಮನೆಯ ಗುರುವಿನಿಂದಾಗಿ ಉದ್ಯೋಗದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಕೀರ್ತಿ, ಪ್ರತಿಷ್ಠೆ ಹೆಚ್ಚಾಗುವ ಕಾಲವಿದು. ವ್ಯಾಪಾರಸ್ಥರಿಗೆ ನಿರೀಕ್ಷೆಗೂ ಮೀರಿದ ಲಾಭ ಮತ್ತು ಹೊಸ ಅವಕಾಶಗಳು ಲಭಿಸಲಿವೆ.

​ತುಲಾ ರಾಶಿ:

ಒಂಭತ್ತನೇ ಮನೆಯ ಸೂರ್ಯ ಭಾಗ್ಯೋದಯ ನೀಡಲಿದ್ದಾನೆ. ಹತ್ತನೇ ಮನೆಯಲ್ಲಿ ಗುರುವಿರುವುದರಿಂದ ವೃತ್ತಿಜೀವನದಲ್ಲಿ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಸಿಗುತ್ತವೆ. ತಂದೆಯ ಆರೋಗ್ಯದ ಕಡೆ ಗಮನವಿರಲಿ, ಧಾರ್ಮಿಕ ಪ್ರವಾಸ ಮಾಡುವ ಸಾಧ್ಯತೆ ಇದೆ.

​ವೃಶ್ಚಿಕ ರಾಶಿ:

ಎಂನೇ ಮನೆಯ ಸೂರ್ಯನಿಂದಾಗಿ ಕೆಲಸಗಳಲ್ಲಿ ಸ್ವಲ್ಪ ಅಡೆತಡೆಗಳು ಎದುರಾಗಬಹುದು. ಆದರೆ ಒಂಭತ್ತನೇ ಮನೆಯಲ್ಲಿ ಗುರು ಇರುವುದರಿಂದ ದೈವಬಲ ಚೆನ್ನಾಗಿದೆ. ಕಠಿಣ ಪರಿಶ್ರಮದಿಂದ ಅಂತಿಮವಾಗಿ ಯಶಸ್ಸು ಮತ್ತು ಆಧ್ಯಾತ್ಮಿಕ ನೆಮ್ಮದಿ ನಿಮ್ಮದಾಗುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

​ಧನು ರಾಶಿ:

ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಗುರುವಿದ್ದಾನೆ. ಅನಿರೀಕ್ಷಿತ ಧನಲಾಭದ ಸಾಧ್ಯತೆ ಇದೆ. ಆದರೆ ಮಾನಸಿಕ ಚಂಚಲತೆ ಅಧಿಕವಾಗಿರಲಿದ್ದು, ಸಪ್ತಮದ ಸೂರ್ಯನಿಂದಾಗಿ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

​ಮಕರ ರಾಶಿ:

ಆರನೇ ಮನೆಯ ಸೂರ್ಯ ಶತ್ರುನಾಶ ಮತ್ತು ಕೋರ್ಟ್ ವ್ಯವಹಾರಗಳಲ್ಲಿ ಜಯ ನೀಡಲಿದ್ದಾನೆ. ಏಳನೇ ಮನೆಯ ಗುರು ವೈವಾಹಿಕ ಜೀವನದಲ್ಲಿ ಸುಖ ನೀಡುತ್ತಾನೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಮತ್ತು ಧನಲಾಭ ಕಂಡುಬರಲಿದೆ.

​ಕುಂಭ ರಾಶಿ:

ರಾಶಿಯಲ್ಲಿ ರಾಹು ಹಾಗೂ ಐದನೇ ಮನೆಯಲ್ಲಿ ಸೂರ್ಯನಿದ್ದಾನೆ. ಬುದ್ಧಿಶಕ್ತಿ ತೀಕ್ಷ್ಣವಾಗಿದ್ದರೂ ಮಕ್ಕಳ ವಿಷಯದಲ್ಲಿ ಸ್ವಲ್ಪ ಕಳವಳವಿರಬಹುದು. ಆರನೇ ಮನೆಯ ಗುರುವಿನಿಂದಾಗಿ ಸಾಲದ ಬಾಧೆಗಳು ಕಡಿಮೆಯಾಗಲಿವೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ.

​ಮೀನ ರಾಶಿ:

ನಿಮ್ಮ ರಾಶಿಯಲ್ಲೇ ಶನಿ ಇದ್ದರೂ, ನಾಲ್ಕನೇ ಮನೆಯ ಸೂರ್ಯ ಮತ್ತು ಐದನೇ ಮನೆಯ ಗುರು ಉತ್ತಮ ಫಲ ನೀಡಲಿದ್ದಾರೆ. ಶಿಕ್ಷಣ ಮತ್ತು ಕೌಟುಂಬಿಕ ಸುಖ ವೃದ್ಧಿಯಾಗಲಿದೆ. ಹೊಸ ಆಸ್ತಿ ಅಥವಾ ವಾಹನ ಖರೀದಿಯ ಯೋಗವಿದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More