ದಿನ ಭವಿಷ್ಯ: ಇಂದು ಈ ರಾಶಿಯವರ ಹಳೆಯದಾದ ದೊಡ್ಡ ತಪ್ಪೊಂದು ಹೊರಬಲಿದೆ..
Horoscope Today 30 May: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಶನಿವಾರದಂದು ಉದ್ಯಮದಲ್ಲಿ ವಿಶೇಷ ಪ್ರಾವೀಣ್ಯ, ಕೋಪದಿಂದ ಅಸಮಾಧಾನ, ಸಮಯಾಭಾವದಿಂದ ಬೇಸರ, ಕೊಟ್ಟ ಹಣವನ್ನು ಒತ್ತಡದಿಂದ ಪಡೆಯುವುದು, ಅಸಲಿ ಮುಖದ ಪರಿಚಯ, ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ :
ಆಕ್ಷೇಪಕ್ಕೆ ಸಕಾರಣವನ್ನು ಕೊಡುವುದು ಸೂಕ್ತ. ಇದರಿಂದ ತೊಂದರೆ ಸಿಕ್ಕಿಹಾಕಿಕೊಳ್ಳುವ ಸ್ಥಿತಿ ತಪ್ಪುತ್ತದೆ. ಸಂಗಾತಿಯೊಂದಿಗೆ ಜಗಳ ಉಂಟಾದರೂ ಅವರು ಶಾಂತಿ ಕಾಪಾಡುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಮನಸ್ಸಿಗೆ ನೆಮ್ಮದಿ ಪಡೆಯಿರಿ. ಇದರಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಕಾರ್ಯಗಳನ್ನು ಹಂಚಿ ನೀವು ನಿಶ್ಚಿಂತರಾಗುವಿರಿ. ಯಾರದ್ದಾದರೂ ಪ್ರಲೋಭನೆಗೆ ಒಳಗಾಗುವ ಸಾಧ್ಯತೆ ಇದೆ.
ವೃಷಭ ರಾಶಿ :
ಇಂದು ನಂಬಿಕೆಯ ವಿಚಾರದಲ್ಲಿ ಮನಸ್ಸು ಮುರಿದುಹೋಗುವುದು. ಹಣಕಾಸನ್ನು ಭದ್ರವಾಗಿ ಇಟ್ಟುಕೊಳ್ಳಿ. ಮೋಸ ಹೋಗುವ ಸಾಧ್ಯತೆ ಇದೆ. ಮಕ್ಕಳಿಗೆ ಸಹಾಯ ಮಾಡಿ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ಪ್ರೇಮ ಜೀವನದಲ್ಲಿ ಪ್ರಾಮಾಣಿಕತೆ ಮುಖ್ಯ. ಸಮರ್ಥನೆಯನ್ನು ಕೊಟ್ಟು ಸಮಯವನ್ನು ವ್ಯರ್ಥಮಾಡಬೇಡಿ. ಸ್ವಲ್ಪಕಾಲದಲ್ಲಿ ಎಲ್ಲವೂ ಸ್ಪಷ್ಟವಾಗಿ ಗೋಚರವಾಗುವುದು. ಆರ್ಥಿಕ ಯೋಜನೆಗಳಿಗೆ ಉತ್ತೇಜನ ದೊರೆಯಲಿದೆ.
ಮಿಥುನ ರಾಶಿ :
ಕಾರ್ಯದ ಒತ್ತಡದಿಂದ ಪೂರ್ತಿಯಾಗಿ ಆಗದೇ ಹೋಗಬಹುದು. ನಾಯಕತ್ವದ ಹೊಣೆಗಾರಿಕೆಗಳೂ ಹೆಚ್ಚಾಗುತ್ತವೆ. ಸಂಗಾತಿಯು ನಿಮ್ಮ ಉತ್ಸುಕತೆಗೆ ಭಂಗ ತರಬಹುದು. ಆತ್ಮತೃಪ್ತಿ ಹೊಸ ಬಾಗಿಲುಗಳನ್ನು ತೆರೆಯುತ್ತದೆ. ಉದ್ಯೋಗದಲ್ಲಿ ಧೈರ್ಯದಿಂದ ಹೊಸ ಪ್ರಯತ್ನ ನಡೆಸಿ. ಸ್ಪರ್ಧಾ ಮನೋಭಾವವಿಲ್ಲದೇ ಎಲ್ಲರ ಜೊತೆ ಖುಷಿಯಿಂದ ಭಾಗವಹಿಸಿ. ಉದಾಸೀನತೆಯೇ ನಿಮ್ಮ ಉದ್ಯೋಗಕ್ಕೆ ಮುಳುವಾಗಬಹುದು. ಉದ್ಯಮದ ಕಾರಣಕ್ಕೆ ಅಧಿಕ ಸುತ್ತಾಟವು ಇರುವುದು.
ಕರ್ಕಾಟಕ ರಾಶಿ :
ಉಳಿದಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಉದ್ಯೋಗದಲ್ಲಿ ವಿವೇಕ ಮತ್ತು ತಾರ್ಕಿಕತೆ ಅವಶ್ಯ. ಚಟುವಟಿಕೆಗಳ ಮೂಲಕ ಪುನಶ್ಚತನಗೊಳ್ಳುತ್ತದೆ. ಆರೋಗ್ಯದಲ್ಲಿ ತಾಳ್ಮೆಯೇ ಮುಖ್ಯ. ಹೊಸ ನಿಲುವಿನಿಂದ ಭವಿಷ್ಯ ನಿರ್ಮಿಸಿ. ಆಪ್ತರು ಎನಿಸಿದ ಸ್ನೇಹಿತರ ಜೊತೆ ಆಗಿದ್ದ ನೋವನ್ನು ಹೇಳಿಕೊಂಡು ಹಗುರಾಗಿ. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಸೂಚಿಸುವುದು ಬೇಡ.
ಸಿಂಹ ರಾಶಿ :
ನಿಮ್ಮ ಮುಂಗೋಪವು ನಿಮ್ಮವರಿಗೆ ಮುಜುಗರವಾಗಬಹುದು. ಉದ್ಯೋಗದಿಂದ ಹೊರನಡೆಯುವ ಸಾಧ್ಯತೆ ಇದೆ. ನೆಮ್ಮದಿಯನ್ನು ಕಾಣುವಾಗಲೇ ಈ ಘಟನೆ ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಪ್ರೀತಿ ಜೀವನ ಚೈತನ್ಯ ತುಂಬಿದಂತೆ ತೋರುತ್ತದೆ. ದೊಡ್ಡ ಮೊತ್ತದ ವ್ಯವಹಾರವನ್ನು ಮಾಡುವಾಗ ಭಯವಿರುವುದು. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು.
ಕನ್ಯಾ ರಾಶಿ:
ಮನೆಯವರ ಮಾತಿನಿಂದ ಮನೆಯ ಬಗ್ಗೆ ನಿಮಗೆ ಒಲವು ಕಡಮೆಯಾದೀತು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ತಪ್ಪು ಎಲ್ಲ ಕಡೆಯಿಂದ ಸುತ್ತಿ ನಿಮ್ಮ ಬುಡಕ್ಕೇ ಬರವುದು. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಕುಟುಂಬದ ಕೇಂದ್ರಬಿಂದುವಾಗಿ ನೀವು ಬೆಳಗಬಹುದು. ಕಾನೂನಾತ್ಮಕ ವಿಷಯಕ್ಕೆ ಸರಿಯಾದ ಸಲಹೆಯನ್ನು ಪಡೆಯುವಿರಿ. ನೀವು ಸ್ನೇಹಿತನೊಂದಿಗೆ ಯಾವುದೇ ವಿವಾದವನ್ನು ಹೊಂದಿದ್ದರೆ, ಅವರು ನಿಮ್ಮನ್ನು ಸಮಾಧಾನಪಡಿಸಲು ಬರಬಹುದು.
ತುಲಾ ರಾಶಿ :
ಆತ್ಮವಿಶ್ವಾಸದ ಮೂಲಕ ನೀವು ದೈಹಿಕ, ಮಾನಸಿಕ ಸಂಕಟವನ್ನು ಎದುರಿಸಬಹುದು. ಹಳೆಯ ನೆನಪಿನಿಂದ ಶಕ್ತಿ ಕುಗ್ಗಬಹುದು. ಹಣಕಾಸು ಯೋಜನೆಗಳಲ್ಲಿ ಜಾಗರೂಕತೆ ಅವಶ್ಯಕ. ಮನೆಯ ಒತ್ತಡ ಹೆಚ್ಚಾಗಬಹುದು, ಆದರೆ ಸಹಕಾರದಿಂದ ಅದು ಕಡಿಮೆಯಾಗುತ್ತದೆ. ಜನರೊಂದಿಗೆ ಇಣುಕು ನೋಟದಿಂದ ವ್ಯವಹರಿಸಬೇಕು. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ಕೃತಜ್ಞತೆಯನ್ನು ಸ್ಮರಿಸಿಕೊಳ್ಳುವಿರಿ. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು.
ವೃಶ್ಚಿಕ ರಾಶಿ :
ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಮಮಕಾರದಿಂದ ಕೊನೆಗೆ ದುಃಖವೇ ಆಗಬಹುದು. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಸಂಬಂಧಿಗಳೊಂದಿಗೆ ಸಣ್ಣ ಪ್ರಯಾಣ ನೆಮ್ಮದಿ ತರಬಹುದು. ಪ್ರೇಮ ಜೀವನದಲ್ಲಿ ಗಾಢತೆಯ ಅನುಭವ. ಪ್ರೇಯಸಿ ಜೊತೆಯಲ್ಲಿ ಹೊರಗೆ ವಾಯುವಿಹಾರಕ್ಕೆ ಹೋಗುವಿರಿ. ನೀವು ವ್ಯವಹಾರದಲ್ಲಿ ಪಾಲುದಾರರಾಗುವುದು ಉತ್ತಮ, ಇದು ನಿಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸುತ್ತದೆ.
ಧನು ರಾಶಿ :
ಯಾರ ಮಾತಿಗೂ ಮನಸೋಲದೇ ನಿಮ್ಮದಾದುದನ್ನು ಮಾಡಿ. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಮನೆಯವರೊಂದಿಗೆ ಹೆಚ್ಚು ಕಾಲ ಇಲ್ಲದಿದ್ದರೆ ಸಂಬಂಧಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ನಿಮ್ಮ ಸಂಗಾತಿಯ ಜೊತೆ ಚರ್ಚಿಸಿದರೆ ಅದು ನಿಮಗೆ ಉತ್ತಮ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಹೋಗಬಹುದು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ.
ಮಕರ ರಾಶಿ :
ಮಕ್ಕಳ ತುಂಟಾಟಕ್ಕೆ ಅವರಿಗೆ ಬೈದು ಅವರ ದ್ವೇಷಕ್ಕೆ ಕಾರಣರಾಗುವಿರಿ. ದಾಂಪತ್ಯದಲ್ಲಿ ಆಪ್ತಭಾವವಿರಲಿದೆ. ಜಾಣ ಕಿವುಡುತನದಿಂದ ದೊಡ್ಡವರಾಗುವುದು ಬೇಡ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ಜಗಳವಾದರೂ, ತಾಳ್ಮೆ ಬೇಕು. ಕೆಲಸದ ಕಡೆ ನೂರಕ್ಕೆ ನೂರು ಗಮನ ನೀಡಿ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ನಿಮಗೆ ಶುಭ ಸುದ್ದಿಯು ಬರುವುದು. ರಾಜಕೀಯವಾಗಿ ಒತ್ತಡಗಳು ಬರಬಹುದು. ಅದನ್ನು ತಾಳ್ಮೆಯಿಂದ ಎದುರಿಸಬೇಕು.
ಕುಂಭ ರಾಶಿ :
ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ಹೆಚ್ಚು ಕಳೆಯಬಹುದು. ಜೀವನದ ತೊಂದರೆಗಳನ್ನು ಸಂಬಂಧಿಕರೊಂದಿಗೆ ಹಂಚಿಕೊಳ್ಳಬೇಡಿ. ಹಣದ ಹೂಡಿಕೆ ಕುರಿತು ಯೋಚಿಸಿ ನಿರ್ಧಾರ ಮಾಡಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇರುವಾಗ ಸಹನೆವಹಿಸಿ. ಪ್ರೇಮದಲ್ಲಿ ವಿಶಿಷ್ಟ ಅನುಭವ ಸಾಧ್ಯ. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು. ನಿಮ್ಮ ವಿರೋಧಿಗಳಲ್ಲಿ ಒಬ್ಬರು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು.
ಮೀನ ರಾಶಿ :
ನಿಮ್ಮೊಳಗೆ ಮಾಡುವ ಕಾರ್ಯದಲ್ಲಿ ಅತೃಪ್ತಭಾವವು ಇರಲಿದೆ. ಯಾರದೋ ಕೆಲಸದಲ್ಲಿ ಮಗ್ನರಾಗುವಿರಿ. ಆಲಸ್ಯವು ಮೈತುಂಬಿಕೊಂಡು ನಿದ್ರೆಯನ್ನು ಮಾಡುವ ಮನಃಸ್ಥಿತಿಯಲ್ಲಿ ಇರುವಿರಿ. ಹಣಕಾಸಿನ ಕೆಲಸಗಳಲ್ಲಿ ಯಶಸ್ಸು ಸಿಗಬಹುದು. ಸಂಗಾತಿಯ ಕುಟುಂಬದ ಅಡ್ಡಿ ಕೆಲವೊಂದು ವ್ಯತ್ಯಯ ತಂದರೂ, ನಿಮ್ಮ ಸಹನೆಗೆ ಅದರ ಬಗ್ಗೆ ಪ್ರಭಾವ ಬೀರುವುದಿಲ್ಲ. ನಿಮ್ಮ ಯೋಜನೆಗಳನ್ನು ನೀವು ವೇಗಗೊಳಿಸುತ್ತೀರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ವರಿಯಾನ್, ಕರಣ : ವಣಿಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:09 – 10:46, ಯಮಗಂಡ ಕಾಲ 13:58 – 15:35, ಗುಳಿಕ ಕಾಲ 05:56 – 07:33
-ಲೋಹಿತ ಹೆಬ್ಬಾರ್-8762924271 (what’s app only)





