AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಗಂಗೆ ಬೆಟ್ಟದಲ್ಲಿ ಮಂಗನ ಚೇಷ್ಟೆ: ಪ್ರವಾಸಿಗರ ಮೊಬೈಲ್ ಕಸಿದು ಪುಂಡಾಟ!

ಶಿವಗಂಗೆ ಬೆಟ್ಟದಲ್ಲಿ ಮಂಗನ ಚೇಷ್ಟೆ: ಪ್ರವಾಸಿಗರ ಮೊಬೈಲ್ ಕಸಿದು ಪುಂಡಾಟ!

ಮಂಜುನಾಥ ಎಚ್​. ವಿ.
| Edited By: |

Updated on:Aug 03, 2026 | 11:15 PM

Share

ತಾಲೂಕಿನ ಪ್ರಸಿದ್ಧ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಮಂಗವೊಂದು ಪ್ರವಾಸಿಗರ ಮೊಬೈಲ್ ಕಸಿದುಕೊಂಡು ಸುಮಾರು ಒಂದು ಗಂಟೆ ಕಾಲ ಸತಾಯಿಸಿದ ಕುತೂಹಲಕಾರಿ ಘಟನೆ ನಡೆದಿದೆ. ಶಿವಗಂಗೆ ಬೆಟ್ಟ ವೀಕ್ಷಣೆಗೆ ಬಂದಿದ್ದ ಯುವತಿಯೊಬ್ಬರ ಕೈಯಲ್ಲಿದ್ದ ಮೊಬೈಲ್ ಅನ್ನು ಸಡನ್ ಆಗಿ ಕಸಿದುಕೊಂಡ ಮಂಗ, ಸೀದಾ ದೇವಾಲಯದ ಗೋಪುರದ ಶಿಖರ ಏರಿ ಕುಳಿತುಕೊಂಡಿದೆ. ಮೊಬೈಲ್ ವಾಪಸ್ ಪಡೆಯಲು ಜೊತೆಯಲ್ಲಿದ್ದ ಯುವಕರು ಹರಸಾಹಸ ಪಟ್ಟಿದ್ದಾರೆ. ಒಂದು ಗಂಟೆಯ ನಂತರ ಕೊನೆಗೂ ಮಂಗ ಮೊಬೈಲ್ ಅನ್ನು ಕೆಳಗೆ ಹಾಕಿದ್ದು, ಫೋನ್ ಕೈಸೇರಿದ ಖುಷಿಯಲ್ಲಿದ್ದ ಯುವತಿಗೆ ಮೊಬೈಲ್‌ಗೆ ಸಣ್ಣಪುಟ್ಟ ಡ್ಯಾಮೇಜ್ ಆಗಿದ್ದನ್ನು ನೋಡಿ ಕೊಂಚ ಬೇಸರವೂ ಉಂಟಾಗಿದೆ.

ನೆಲಮಂಗಲ, ಜುಲೈ 27: ತಾಲೂಕಿನ ಪ್ರಸಿದ್ಧ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಮಂಗವೊಂದು ಪ್ರವಾಸಿಗರ ಮೊಬೈಲ್ ಕಸಿದುಕೊಂಡು ಸುಮಾರು ಒಂದು ಗಂಟೆ ಕಾಲ ಸತಾಯಿಸಿದ ಕುತೂಹಲಕಾರಿ ಘಟನೆ ನಡೆದಿದೆ. ಶಿವಗಂಗೆ ಬೆಟ್ಟ ವೀಕ್ಷಣೆಗೆ ಬಂದಿದ್ದ ಯುವತಿಯೊಬ್ಬರ ಕೈಯಲ್ಲಿದ್ದ ಮೊಬೈಲ್ ಅನ್ನು ಸಡನ್ ಆಗಿ ಕಸಿದುಕೊಂಡ ಮಂಗ, ಸೀದಾ ದೇವಾಲಯದ ಗೋಪುರದ ಶಿಖರ ಏರಿ ಕುಳಿತುಕೊಂಡಿದೆ. ಮೊಬೈಲ್ ವಾಪಸ್ ಪಡೆಯಲು ಜೊತೆಯಲ್ಲಿದ್ದ ಯುವಕರು ಹರಸಾಹಸ ಪಟ್ಟಿದ್ದಾರೆ. ಒಂದು ಗಂಟೆಯ ನಂತರ ಕೊನೆಗೂ ಮಂಗ ಮೊಬೈಲ್ ಅನ್ನು ಕೆಳಗೆ ಹಾಕಿದ್ದು, ಫೋನ್ ಕೈಸೇರಿದ ಖುಷಿಯಲ್ಲಿದ್ದ ಯುವತಿಗೆ ಮೊಬೈಲ್‌ಗೆ ಸಣ್ಣಪುಟ್ಟ ಡ್ಯಾಮೇಜ್ ಆಗಿದ್ದನ್ನು ನೋಡಿ ಕೊಂಚ ಬೇಸರವೂ ಉಂಟಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 27, 2026 08:56 AM

Follow Us