ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಹುಡುಗಿಯ ಸುಮಧುರ ಕಂಠದಲ್ಲಿ ರಾಮನ ಗೀತೆ; ಮೋದಿ ಮೆಚ್ಚಿದ ಧ್ವನಿ ಇದು

ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಹುಡುಗಿಯ ಸುಮಧುರ ಕಂಠದಲ್ಲಿ ರಾಮನ ಗೀತೆ; ಮೋದಿ ಮೆಚ್ಚಿದ ಧ್ವನಿ ಇದು

ಮದನ್​ ಕುಮಾರ್​
|

Updated on: Jan 02, 2025 | 11:01 PM

ಸಂಸದ ತೇಜಸ್ವಿ ಸೂರ್ಯ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಚೆನ್ನೈ ಮೂಲದ ಗಾಯಕಿ ಶಿವಶ್ರೀ ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಶಿವಶ್ರೀ ಅವರು ಅತ್ಯುತ್ತಮ ಗಾಯಕಿ. ಅವರ ಕಂಠಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ತಲೆದೂಗಿದ್ದರು. ಆ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ.

ಬಹುಮುಖ ಪ್ರತಿಭೆ, ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಜೊತೆ ಸಂಸದ ತೇಜಸ್ವಿ ಸೂರ್ಯ ಅವರ ವಿವಾಹ ನೆರವೇರಲಿದೆ. ರಾಮ ಮಂದಿರ ಉದ್ಘಾಟನೆ ವೇಳೆ ‘ಪೂಜಿಸಲೆಂದೆ ಹೂಗಳ ತಂದೆ…’ ಗೀತೆಯನ್ನು ಶಿವಶ್ರೀ ಹಾಡಿದ್ದರು. ಅವರ ಸುಮಧುರ ಧ್ವನಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಸಿಕ್ಕಿತ್ತು. ಆ ವಿಡಿಯೋ ಇಲ್ಲಿದೆ ನೋಡಿ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಶಿವಶ್ರಿ ಅವರ ಧ್ವನಿಯನ್ನು ಕೇಳಿ ಅನೇಕರು ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.