ಬಿಗ್ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ನಲ್ಲಿ ಸ್ಪರ್ಧಿಗಳ ಮನೆ ಸದಸ್ಯರು ಬಿಗ್ಬಾಸ್ ಮನೆಗೆ ಬರುತ್ತಿದ್ದಾರೆ. ಹಲವು ಸ್ಪರ್ಧಿಗಳ ಕುಟುಂಬದವರು ಈಗಾಗಲೇ ಮನೆಗೆ ಬಂದಿದ್ದಾರೆ. ಗುರುವಾರದ ಎಪಿಸೋಡ್ನಲ್ಲಿ ಹನುಮಂತನ ಪೋಷಕರು ಮಗನ ನೋಡಲು ಬಿಗ್ಬಾಸ್ಗೆ ಬಂದಿದ್ದಾರೆ. ಮಗನಿಗಾಗಿ ಬುತ್ತಿ ಕೊಂಡು ತಂದಿದ್ದಾರೆ.
ಬಿಗ್ಬಾಸ್ ಸೀಸನ್ 11 ಆರಂಭವಾದಾಗ ಪ್ರತಿದಿನ ಜಗಳಗಳೇ ತುಂಬಿರುತ್ತಿದ್ದವು. ಲಾಯರ್ ಜಗದೀಶ್ ಇನ್ನೂ ಕೆಲವರು ಇದ್ದಾಗಂತೂ ಬರೀ ಜಗಳವೇ ತುಂಬಿರುತ್ತಿತ್ತು. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ ಬಿಗ್ಬಾಸ್ ಮನೆಯ ವಾತಾವರಣವನ್ನೇ ಬದಲಾಯಿಸಿಬಿಟ್ಟಿದ್ದ. ಹನುಮಂತ, ಮನೆಗೆ ಆರಂಭದಲ್ಲಿ ತನ್ನ ಅಮಾಯಕತೆ, ಪ್ರತಿಭೆಯಿಂದ ಪ್ರೇಕ್ಷಕರನ್ನು ಮತ್ತು ಮನೆ ಸದಸ್ಯರನ್ನು ಸೆಳೆದಿದ್ದ. ಆದರೆ ಆ ನಂತರ ಮನೆಯವರ ನೆನಪಾಗಿ ಮಂಕಾಗಿದ್ದ. ಇದೀಗ ಬಿಗ್ಬಾಸ್ ಮನೆಗೆ ಹನುಮಂತನ ಮನೆಯವರು ಆಗಮಿಸಿದ್ದಾರೆ. ಹನುಮಂತನ ಪೋಷಕರು ಮಗನಿಗಾಗಿ ಬುತ್ತಿ ಕಟ್ಟಿಕೊಂಡು ಮನೆಗೆ ಬಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos