ಮೈಸೂರು ಕೆಆರ್​ಎಸ್ ರಸ್ತೆಗೆ ಪ್ರಿನ್ಸೆಸ್ ರೋಡ್ ಅಂತ ಹೆಸರಿರುವುದನ್ನು ಖಚಿತಪಡಿಸಿದ ಆ ಪ್ರದೇಶದ ನಿವಾಸಿ

ಮೈಸೂರು ಕೆಆರ್​ಎಸ್ ರಸ್ತೆಗೆ ಪ್ರಿನ್ಸೆಸ್ ರೋಡ್ ಅಂತ ಹೆಸರಿರುವುದನ್ನು ಖಚಿತಪಡಿಸಿದ ಆ ಪ್ರದೇಶದ ನಿವಾಸಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 02, 2025 | 2:33 PM

ಕೇವಲ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯನವರ ಹೆಸರಿಡುವುದಕ್ಕಾಗಿ ಸರ್ಕಾರಕ್ಕೆ ಸುಳ್ಳು ಹೇಳಬೇಕಾಯಿತೇ ಅಂತ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಹೆಸರು ಇಟ್ಟೇ ಇಡ್ತೀವಿ ಅಂತ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಎದೆ ತಟ್ಟಿಕೊಳ್ಳುತ್ತಾ ಹೇಳುತ್ತಾರೆ. ಸರ್ಕಾರ ಅವರದ್ದೇ ಆಗಿರುವುದರಿಂದ ರಸ್ತೇಯೇನು ಊರುಗಳ ಹೆಸರನ್ನೇ ಬದಲಾಯಿಸಿ ಸಿದ್ದರಾಮಯ್ಯನವರ ಹೆಸರಿಡಬಹುದು!

ಮೈಸೂರು: ಮೈಸೂರಿನ ಕೆಆರ್​ಎಸ್ ರಸ್ತೆ ಬಗ್ಗೆ ವಿವಾದ ಶುರುವಾಗಿದೆ ಮತ್ತು ಚರ್ಚೆಗಳು ನಡೆಯುತ್ತಿವೆ. ಈ ರಸ್ತೆಗೆ ಹೆಸರೇ ಇರದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡಲು ರಾಜ್ಯಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಈ ದಿಶೆಯಲ್ಲಿ ಸನ್ನದ್ಧ ಕೂಡ ಆಗಿದೆ. ಆದರೆ ಹೆಸರಿಲ್ಲವೆಂಬ ಸರ್ಕಾರದ ಕ್ಲೇಮ್ ಸುಳ್ಳು ಅನ್ನೋದಿಕ್ಕೆ ಪುರಾವೆಗಳು ಲಭ್ಯವಾಗುತ್ತಿವೆ. ಈ ಪ್ರದೇಶದ ಒಂದು ಮನೆಯಲ್ಲಿ ಉತ್ತರ ಭಾರತದ ಕುಟುಂಬವೊಂದು ಕಳೆದ 45 ವರ್ಷಗಳಿಂದ ವಾಸಿಸುತ್ತಿದ್ದು ಮನೆಯ ಮುಂದಿನ ನಾಮಫಲಕದಲ್ಲಿ ಅವರ ಹೆಸರಿನ ಜೊತೆಗೆ ಅಡ್ರೆಸ್ ಕೂಡ ಕೆತ್ತಲಾಗಿದೆ. ಸ್ಪಷ್ಟವಾಗಿ ಪ್ರಿನ್ಸೆಸ್ ರೋಡ್ ಅಂತ ಬೋರ್ಡ್ ಮೇಲೆ ನಮೂದಾಗಿರುವುದನ್ನು ನೋಡಬಹುದು. ಮನೆಯೊಡತಿ ಹೇಳುವ ಪ್ರಕಾರ ಇತಿಹಾಸಜ್ಞರೊಬ್ಬರು ಇದು ಪ್ರಿನ್ಸೆಸ್ ರೋಡ್ ಅನ್ನೋದನ್ನು ಖಚಿತಪಡಿಸಿದ್ದಾರೆ ಮತ್ತು ಅವರ ಸರ್ಕಾರೀ ಡಾಕ್ಯೂಮೆಂಟ್​​ಗಳಲ್ಲಿ ವಿಳಾಸವು ಪ್ರಿನ್ಸೆಸ್ ರೋಡ್ ಅಂತಲೇ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರು ಪ್ರಸ್ತಾವ: ಕೂಡಲೇ ಪ್ರಿನ್ಸೆಸ್ ರೋಡ್ ಫಲಕ ಅಳವಡಿಸಲು ಸ್ನೇಹಮಯಿ ಕೃಷ್ಣ ಆಗ್ರಹ