ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರು ಪ್ರಸ್ತಾವ: ಕೂಡಲೇ ಪ್ರಿನ್ಸೆಸ್ ರೋಡ್ ಫಲಕ ಅಳವಡಿಸಲು ಸ್ನೇಹಮಯಿ ಕೃಷ್ಣ ಆಗ್ರಹ

ಮೈಸೂರಿನ ಹೃದಯಭಾಗದಲ್ಲಿರುವ ಒಂಟಿಕೊಪ್ಪಲ್ ಲಕ್ಷೀ ವೆಂಕಟೇಶ್ವರ ದೇವಸ್ಥಾನದಿಂದ ರಾಯಲ್ ಇನ್ ಹೋಟೆಲ್‌ವರೆಗಿನ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡಲು ಮೈಸೂರು ನಗರ ಪಾಲಿಕೆ ಇತ್ತೀಚೆಗೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಬೆಂಬಲ ಸೂಚಿಸಿದ್ದರು. ಆದರೆ ಇದೀಗ, ಮೈಸೂರು ರಾಜವಂಶದ ರಾಣಿಯ ನೆನಪಿಗಾಗಿ ‘ಪ್ರಿನ್ಸೆಸ್ ರೋಡ್’ ಎಂದಿರುವ ಹೆಸರನ್ನು ಬದಲಾಯಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರು ಪ್ರಸ್ತಾವ: ಕೂಡಲೇ ಪ್ರಿನ್ಸೆಸ್ ರೋಡ್ ಫಲಕ ಅಳವಡಿಸಲು ಸ್ನೇಹಮಯಿ ಕೃಷ್ಣ ಆಗ್ರಹ
ಸ್ನೇಹಮಯಿ ಕೃಷ್ಣ ಹಾಗೂ ಅವರು ಬರೆದಿರುವ ಪತ್ರದ ಪ್ರತಿ
Follow us
ರಾಮ್​, ಮೈಸೂರು
| Updated By: Ganapathi Sharma

Updated on:Dec 30, 2024 | 10:48 AM

ಮೈಸೂರು, ಡಿಸೆಂಬರ್ 30: ಮೈಸೂರಿನ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವ ವಿಚಾರವಾಗಿ ನಗರಪಾಲಿಕೆ ಆಯುಕ್ತರಿಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪತ್ರ ಬರೆದಿದ್ದು, ಕೂಡಲೇ ರಾಜಕುಮಾರಿ ರಸ್ತೆ (Princess road) ನಾಮಫಲಕ ಅಳವಡಿಸುವಂತೆ ಆಗ್ರಹಿಸಿದ್ದಾರೆ. ಮೈಸೂರು ನಗರ ಪಾಲಿಕೆ ವತಿಯಿಂದ ಪ್ರಿನ್ಸೆಸ್ ರೋಡ್ ನಾಮಫಲಕ ಅಳವಡಿಸಿ ಗೊಂದಲವನ್ನು ನಿವಾರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಏನಿದು ವಿವಾದ?

ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನಿಡುವ ಬಗ್ಗೆ ಕೆಲವು ದಿನಗಳ ಹಿಂದೆ ಮೈಸೂರು ನಗರ ಪಾಲಿಕೆ ಪ್ರಸ್ತಾವ ಸಲ್ಲಿಸಿತ್ತು. ಇದರ ಬೆನ್ನಲ್ಲೇ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂಬ ಹೆಸರಿಡುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಕಾರಣ, ಆ ರಸ್ತೆಗೆ ಈ ಹಿಂದೆ ‘ಪ್ರಿನ್ಸೆಸ್ ರೋಡ್’ ಎಂದು ನಾಮಕರಣ ಮಾಡಲಾಗಿತ್ತು. ರಾಜಮನೆತನದ ರಾಣಿಯ ನೆನಪಿಗಾಗಿ ಇಟ್ಟ ಹೆಸರನ್ನು ಬದಲಾಯಿಸುವುದು ಸಲ್ಲ ಎಂಬ ಕೂಗು ಈಗ ಕೇಳಿಬಂದಿದೆ.

ಸ್ನೇಹಮಯಿ ಕೃಷ್ಣ ಆಕ್ಷೇಪ: ಪ್ರಿನ್ಸೆಸ್ ರೋಡ್ ಹೆಸರಿದ್ದುದಕ್ಕೆ ದಾಖಲೆ ಸಲ್ಲಿಕೆ

ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾವನೆ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿರುವ ಅವರು, ಹಲವು ದಾಖಲೆಗಳನ್ನೂ ನೀಡಿದ್ದಾರೆ. ಸಾಮಾಜಿಕ‌ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಿನ್ಸೆಸ್ ರಸ್ತೆ ಹೆಸರಿನ ದಾಖಲೆಗಳನ್ನೂ ನೀಡಿದ್ದಾರೆ. ಜತೆಗೆ ರೈಲ್ವೆ ಇಲಾಖೆಯಲ್ಲಿ ಉಲ್ಲೇಖವಿರುವ ಬಗ್ಗೆಯೂ ದಾಖಲೆ ನೀಡಿದ್ದಾರೆ.

ಮಾಜಿ ಸಂಸದ ಪ್ರತಾಪಸಿಂಹ ಸಭೆ ನಡಾವಳಿಯಲ್ಲೂ ‘ಪ್ರಿನ್ಸೆಸ್ ರಸ್ತೆ’ ಎಂದು ನಮೂದಾಗಿರುವ ದಾಖಲೆ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಹೆಸರು ರಸ್ತೆಗೆ ಇರುವ ಪ್ರಸ್ತಾವಕ್ಕೆ ಬೆಂಬಲ‌ ನೀಡದಂತೆ ಪ್ರತಾಪಸಿಂಹ ಅವರಿಗೂ ಮನವಿ ಮಾಡಿದ್ದಾರೆ.

ಸ್ನೇಹಮಯಿ ಕೃಷ್ಣ ಪತ್ರದಲ್ಲೇನಿದೆ?

ಅಂತರ್ಜಾಲದಿಂದ ಪಡೆದುಕೊಂಡಿರುವ ನಾಂಕ-02.04.2011 ರಂದು ಪತ್ರಿಕೆಯಲ್ಲಿ ಸುದ್ದಿಯ ಐದು ಪುಟಗಳ ದಾಖಲಾತಿಯ ಪ್ರತಿಯಲ್ಲಿ “Princess road to be reopened soon” ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿರುವುದು ತಿಳಿದು ಬರುತ್ತದೆ. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಹರ್ಷ ಗುಪ್ತಾರವರು ಸ್ಥಳ ಪರಿಶೀಲನೆ ನಡೆಸಿ, ರಾಜಕುಮಾರಿ ರಸ್ತೆಯಲ್ಲಿ (Princess road) ನಡೆಸುತ್ತಿರುವ ಕಾಮಗಾರಿಯು ಸದ್ಯದಲ್ಲಿಯೇ ಮುಕ್ತಾಯಗೊಳಿಸಿ, ಸಂಚಾರಕ್ಕೆ ಅನುಕೂಲವಾಗುವಂತೆ ಪುನಃ ಆರಂಭ ಮಾಡುವುದಾಗಿ ತಿಳಿಸಿರುವಂತಹ ಸದರಿ ವಿಚಾರವನ್ನು ಪ್ರಕಟಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಲಕ್ಷ್ಮೀಸರ್ವಿಸ್ ಸ್ಟೇಷನ್ ಎಂಬ ಪೆಟ್ರೋಲ್ ಬಂಕ್‌ಗೆ ಸಂಬಂಧಿಸಿದ ಮಾಹಿತಿಯನ್ನು “ಜಸ್ಟ್ ಡಯಲ್” ನಿಂದ ಅಂತರ್ಜಾಲದ ಮೂಲಕ ಪಡೆದುಕೊಂಡಿರುವ ಒಂದು ಪುಟದ ದಾಖಲೆಯ ನಕಲು ಪ್ರತಿಯನ್ನು ಲಗತ್ತಿಸಿದ್ದು, ಅದನ್ನು ಗಮನಿಸಿದಾಗ ರಾಜಕುಮಾರಿ ರಸ್ತೆಯಲ್ಲಿ (Princess road), ಆಕಾಶವಾಣಿ ಬಳಿ ಸದರಿ ಪೆಟ್ರೋಲ್ ಬಂಕ್ ಇರುವುದಾಗಿ ನಮೂದಿಸಿರುವುದು ತಿಳಿದು ಬರುತ್ತದೆ ಎಂದು ಸ್ನೇಹಮಯಿ ಕೃಷ್ಣ ಉಲ್ಲೇಖಿಸಿದ್ದಾರೆ.

ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಮತಗಟ್ಟೆ ವಿವರಗಳ ಮಾಹಿತಿಯನ್ನು ಅಂತರ್ಜಾಲದ ಮೂಲಕ ಪಡೆದು ಎರಡು ಪುಟಗಳ ಪ್ರತಿಯನ್ನು ಲಗತ್ತಿಸಿದ್ದು ಅದರಲ್ಲಿನ ಅಂಶವನ್ನು ಗಮನಿಸಿದಾಗ, ಕ್ರಮ ಸಂಖ್ಯೆ 166 ರಲ್ಲಿ ರೈಲ್ವೆ ಕಾಲೋನಿಯ ರಾಜಕುಮಾರಿ ರಸ್ತೆ (Princess road)ಯಲ್ಲಿರುವ ಭಾರತಿ ಸ್ತ್ರೀ ಸಮಾಜ ಶಾಲೆಯಲ್ಲಿ ಮತಗಟ್ಟೆ ಇರುವುದನ್ನು ಉಲ್ಲೇಖಿಸಿರುವುದು ತಿಳಿದು ಬರುತ್ತದೆ. ಕರ್ನಾಟಕ ಗ್ರಾಹಕ ವೇದಿಕೆಯ ಅಧ್ಯಕ್ಷರಾಗಿದ್ದ ಡಾ.ಎಸ್.ಪಿ.ತಿರುಮಲ ರಾವ್‌ರವರ ದಿನಾಂಕ:- 12.07.2014 ರಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರಿಗೆ ಬರೆದಿರುವ ಪತ್ರ, ದಿನಾಂಕ:- 16.11.2015 ರಂದು ಅವರ ವಕೀಲರಾದ ಶ್ರೀ ವಿ.ರವಿಕುಮಾರ್‌ರವರಿಂದ ನಿಮಗೆ ನೀಡಿರುವ ಕಾನೂನುಬದ್ಧ ತಿಳಿವಳಿಕೆ ಪತ್ರದ ನಕಲು ಪ್ರತಿಯನ್ನು ಈ ಮನವಿಪತ್ರದೊಂದಿಗೆ ಲಗತ್ತಿಸಿದ್ದು, ಮೇಲ್ಕಂಡಂತೆ ರಾಜಕುಮಾರಿ ರಸ್ತೆ (Princess road) ಎಂಬ ಹೆಸರನ್ನು ಉಳಿಸಿಕೊಳ್ಳಬೇಕೆಂದು ವಿನಂತಿಸಿಕೊಂಡಿರುವುದು ತಿಳಿದು ಬರುತ್ತದೆ ಎಂದು ಸ್ನೇಹಮಯಿ ಕೃಷ್ಣ ಉಲ್ಲೇಖಿಸಿದ್ದಾರೆ.

ತಯಾರಿಸಿರುವ ಮೈಸೂರು ನಗರಕ್ಕೆ ಸಂಬಂಧಿಸಿದಂತೆ 2012 ರಲ್ಲಿ ಮೈಸೂರಿನ ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆಗೆ ಸಂಬಂಧಿಸಿದ ಮೂರು ಪುಟಗಳ ದಾಖಲೆಯನ್ನು (ಒಟ್ಟು 85 ಪುಟಗಳಿದ್ದು ಮೂರು ಪುಟಗಳನ್ನು ಮಾತ್ರ ಲಗತ್ತಿಸಲಾಗಿದೆ)ಅಂತರ್ಜಾಲದ ಮುಖಾಂತರ ಪಡೆದುಕೊಂಡು ಈ ಮನವಿಪತ್ರದೊಂದಿಗೆ ಲಗತ್ತಿಸಿದ್ದು, ಕೆ.ಆರ್.ಎಸ್ ರಸ್ತೆಯಿಂದ ಗುಂಡೂರಾವ್‌ನಗರ ರಸ್ತೆಯವರೆಗಿನ ಕಾರಿಡಾರ್-2 ಯೋಜನೆಯಲ್ಲಿನ 5ನೇ ಕಂಡಿಕೆಯನ್ನು ಗಮನಿಸಿದಾಗ, ದಾಸಪ್ಪ ರಸ್ತೆಯ ಬಳಿಯಿರುವ ರಾಜಕುಮಾರಿ ರಸ್ತೆಯ (Princess road) ಉಲ್ಲೇಖ ಇರುವುದು ತಿಳಿದು ಬರುತ್ತದೆ. ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಹಿಂದಿನ ಮೈಸೂರು ಸಂಸದರಾದ ಶ್ರೀ ಪ್ರತಾಪ್ ಸಿಂಹರವರು ರೈಲ್ವೆ ಅಧಿಕಾರಿಗಳೊಂದಿಗೆ ದಿನಾಂಕ:- 28.06.2023 ರಂದು ನಡೆಸಿರುವ ಸಭೆಯ ಐದು ಪುಟದ ಮಾಹಿತಿ ಯನ್ನು ಅಂತರ್ಜಾಲ ಮೂಲಕ ಪಡೆದುಕೊಂಡಿದ್ದು ಅದನ್ನು ಈ ಮನವಿಪತ್ರದೊಂದಿಗೆ ಲಗತ್ತಿಸಿದ್ದು ಮೂರನೇ ಪುಟದಲ್ಲಿನ ವಿವರವನ್ನು ಗಮನಿಸಿದಾಗ, ಮೂರನೇ ಪ್ರವೇಶ ದ್ವಾರವನ್ನು ರಾಜಕುಮಾರಿ ರಸ್ತೆ (Princess road) ಯಲ್ಲಿ ತೆರೆಯುವ ಬಗ್ಗೆ ಮಾತನಾಡಿರುವುದು ತಿಳಿದು ಬರುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನ ಪ್ರಮುಖ ರಸ್ತೆಗೆ ಸಿದ್ದರಾಮಯ್ಯ ಹೆಸರು, ಶುರುವಾಯ್ತು ಪರ-ವಿರೋಧ ಚರ್ಚೆ: ಪ್ರತಾಪ್ ಸಿಂಹ ಬೆಂಬಲ

ಈ ಮನವಿಪತ್ರ ಸ್ವೀಕರಿಸಿದ ಏಳು ದಿನಗಳಲ್ಲಿ ನಮ್ಮ ಮನವಿಯಂತೆ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ನಾಮಫಲಕವನ್ನು ಅಳವಡಿಸಬೇಕೆಂದು ಕೋರಲಾಗಿದೆ. ಇಲ್ಲದಿದ್ದರೆ, ಸಾರ್ವಜನಿಕರ ಸಹಾಯದಿಂದ ನಾಮಫಲಕವನ್ನು ಅಳವಡಿಸಲು ಅನುಮತಿ ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:15 am, Mon, 30 December 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ