ಬೆಂಗಳೂರು: ಮಹದೇವಪುರದಲ್ಲಿ ಬೈಕ್ ಶೋರೂಮಿಗೆ ಬೆಂಕಿ, ರೂ.1 ಕೋಟಿ ಮೌಲ್ಯದ ಬೈಕ್ಗಳು ಅಗ್ನಿಗಾಹುತಿ
ಅದೃಷ್ಟವಶಾತ್ ಈ ಶೋರೂಮ್ ಪಕ್ಕದಲ್ಲೇ ಇದ್ದ ರಾಯಲ್ ಎನ್ಫೀಲ್ಡ್ ಬೈಕ್ ಗಳ ಶೋರೂಮಿಗೆ ಯಾವುದೇ ಹಾನಿಯಾಗಿಲ್ಲ. ಯಮಹಾ ಶೋರೂಮಲ್ಲಿದ್ದ 60 ಕ್ಕೂ ಹೆಚ್ಚು ಬೈಕ್ ಗಳು ಸುಟ್ಟು ನಾಶವಾಗರುವುವುದರಿಂದ ಅದರ ಮಾಲೀಕನಿಗೆ ಒಂದು ಕೋಟಿ ರೂ. ಗಿಂತ ಹೆಚ್ಚು ಪ್ರಮಾಣದ ನಷ್ಟ ಉಂಟಾಗಿದೆಯೆಂದು ಹೇಳಲಾಗುತ್ತಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಹೊಸ ವರ್ಷದ ಮೊದಲ ದಿನದಂದೇ ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ನಾರಾಯಣಪುರದಲ್ಲಿರುವ ಬೈಕ್ ಶೋರೂಮಿಗೆ ಬೆಂಕಿಬಿದ್ದು ಒಳಗಿದ್ದ ಯಮಹಾ ಬ್ರ್ಯಾಂಡಿನ ಸುಮಾರು 60ಬೈಕ್ ಗಳು ಅಗ್ನಿಗಾಹುತಿಯಾಗಿವೆ. ಸ್ಥಳದಲ್ಲಿರುವ ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ ಶಾಟ್ ಸರ್ಕ್ಯೂಟ್ ಬೆಂಕಿ ಅವಗಢಕ್ಕೆ ಕಾರಣವೆಂದು ಹೇಳಲಾಗುತ್ತಿದ್ದರೂ ವಿಷಯವಿನ್ನೂ ಧೃಡಪಟ್ಟಿಲ್ಲ. ಹೊಸ ವರ್ಷದ ಹಿನ್ನೆಲೆಯಲ್ಲಿ ಶೋರೂಮನ್ನು ನಿನ್ನೆ ಬೇಗ ಮುಚ್ಚಲಾಗಿತ್ತು, ಸ್ಥಳೀಯರು ಬೈಕ್ಗಳು ಹೊತ್ತಿ ಉರಿಯುತ್ತಿದ್ದುದನ್ನು ಗಮನಿಸಿ ಅಗ್ನಿಶಾಮಕ ದಳದ ಕಚೇರಿಗೆ ಫೋನ್ ಮಾಡಿದ್ದಾರೆ. ಆದರೆ ಸಿಬ್ಬಂದಿ ಬರುವಷ್ಟರಲ್ಲಿ ಬೈಕ್ಗಳೆಲ್ಲ ಸುಟ್ಟು ಕರಕಲಾಗಿದ್ದವು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಎಲೆಕ್ಟ್ರಿಕ್ ಶೋರೂಮಲ್ಲಿ ಅಗ್ನಿ ಅವಘಡಕ್ಕೆ ಯುವತಿ ಬಲಿ, ಪ್ರತ್ಯಕ್ಷದರ್ಶಿಗಳು ಹೇಳೋದೇನು?
Latest Videos