ನಾಲ್ಕು ಮರಿಗಳೊಂದಿಗೆ ಹೊಂಡಕ್ಕೆ ಬಂದ ನೀರು ಕುಡಿದ ತಾಯಿ ಹುಲಿ, ನಾಗರಹೊಳೆಯಲ್ಲಿ ಸೆರೆಸಿಕ್ಕ ದೃಶ್ಯ

ನಾಲ್ಕು ಮರಿಗಳೊಂದಿಗೆ ಹೊಂಡಕ್ಕೆ ಬಂದ ನೀರು ಕುಡಿದ ತಾಯಿ ಹುಲಿ, ನಾಗರಹೊಳೆಯಲ್ಲಿ ಸೆರೆಸಿಕ್ಕ ದೃಶ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 02, 2025 | 10:49 AM

ಭಾರತದಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿರುವುದು ಸಂತೋಷಕರ ಸಂಗತಿ. ಇದರಲ್ಲಿ ನಾಗರಹೊಳೆ ರಕ್ಷಿತಾರಣ್ಯದ ಹುಲಿಗಳ ಕೊಡುಗೆಯೂ ಇದೆ. ಹುಲಿ ಹಿಂಸ್ರಪಶುವಾದರೂ ಬೇರೆಲ್ಲ ಪ್ರಾಣಿಗಳ ಹಾಗೆ ತನ್ನ ಮರಿಗಳ ವಿಷಯದಲ್ಲಿ ಅತೀವ ಕಾಳಜಿ ಮತ್ತು ಮಮತೆಯನ್ನು ಹೊಂದಿರುತ್ತದೆ. ಈ ವಿಡಿಯೋದಲ್ಲಿ ತಾಯಿ ಹುಲಿ ನೀರು ಕುಡಿಯುತ್ತಿರುವುದು ನಿಜವಾದರೂ ಒಂದು ದೃಷ್ಟಿ ತನ್ನ ಮಕ್ಕಳ ಮೇಲೆ ಇಟ್ಟಿದೆ.

ಮೈಸೂರು: ನಾಗರಹೊಳೆ ಸಫಾರಿ ಸಂದರ್ಭದಲ್ಲಿ ವನ್ಯಜೀವಿ ಪ್ರೇಮಿ ಪ್ರವಾಸಿಗರಿಗೆ ಸೆರೆ ಸಿಕ್ಕಿರುವ ದೃಶ್ಯವಿದು. ಕಬಿನಿ ಹಿನ್ನೀರು ಪ್ರದೇಶದಲ್ಲಿ ತಾಯಿ ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಹೊಂಡವೊಂದರಲ್ಲಿ ನೀರು ಕುಡಿಯುತ್ತಿರುವ ದೃಶ್ಯ ಮನಮೋಹಕ. ವನ್ಯಜೀವಿಗಳನ್ನು ಅವುಗಳ ಪರಿಸರದಲ್ಲಿ ನೋಡುವುದೇ ಆಹ್ಲಾದಕರಕ ಅನುಭವ. ಈ ಹುಲಿಯಮ್ಮ ಮೊದಲ ಬಾರಿಗೆ ತಾಯಿಯಾಗಿದ್ದಾಳೋ ಅಥವಾ ಇದಕ್ಕೂ ಮೊದಲು ಹೆತ್ತ ಮರಿಗಳು ಬೆಳೆದು ದೊಡ್ಡವಾಗಿ ತಮ್ಮ ದಾರಿಯನ್ನು ತಾವು ನೋಡಿಕೊಂಡಿದ್ದಾವೋ ಗೊತ್ತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನಾಗರಹೊಳೆ ಅಭಯಾರಣ್ಯದಲ್ಲಿ ವಿಹರಿಸಲು ಸಫಾರಿಗೆ ತೆರಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಎದುರಾಯ್ತೊಂದು ಹುಲಿ!