ಕಾಶಿ ಕ್ಷೇತ್ರಕ್ಕೆ ಹೋದಾಗ ಏನನ್ನು ಬಿಟ್ಟು ಬಂದರೆ ಒಳ್ಳೆಯದು? ಇಲ್ಲಿದೆ ಆಧ್ಯಾತ್ಮಿಕ ಸಲಹೆ
ಕಾಶಿ ಯಾತ್ರೆಯ ಆಧ್ಯಾತ್ಮಿಕ ಮಹತ್ವದ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗಿದೆ. ಪುರಾಣಗಳಲ್ಲಿ ಮತ್ತು ಜಾನಪದ ನಂಬಿಕೆಗಳಲ್ಲಿ ಕಾಶಿಗೆ ಹೋಗಿ ಏನನ್ನಾದರೂ ಬಿಟ್ಟು ಬರುವುದರ ಪರಿಕಲ್ಪನೆಯನ್ನು ವಿವರಿಸುತ್ತದೆ. ಇದು ಕೇವಲ ಭೌತಿಕ ವಸ್ತುಗಳನ್ನು ಬಿಟ್ಟು ಬರುವುದಲ್ಲ, ಬದಲಾಗಿ ಕಾಯಾಪೇಕ್ಷೆ ಮತ್ತು ಫಲಾಪೇಕ್ಷೆಗಳನ್ನು ತ್ಯಾಗ ಮಾಡುವುದು ಎಂದು ಹೇಳುತ್ತದೆ. ಆ ಬಗ್ಗೆ ವಿವರ ವಿಡಿಯೋದಲ್ಲಿದೆ.
ನಮ್ಮೆಲ್ಲರ ಜೀವನದಲ್ಲಿ, ಅದರಲ್ಲೂ ಸಹ ಹಿಂದೂ ಸಂಸ್ಕೃತಿಯಲ್ಲಿ, ಸನಾತನ ಧರ್ಮದಲ್ಲಿ ಈ ಒಂದು ಮಾತನ್ನು ನಾವೆಲ್ಲರೂ ಕೇಳುತ್ತಿರುತ್ತೇವೆ. ಕಾಶಿಗೆ ಹೋಗಬೇಕು, ಕಾಶಿ ವಿಶ್ವನಾಥನ ದರ್ಶನ ಮಾಡಿಕೊಳ್ಳಬೇಕು. ಕಾಶಿಯ ಕ್ಷೇತ್ರವನ್ನು ನೋಡಬೇಕು ಎಂದು ಕಾತುರತೆಯಿಂದ ನಾವು ಕಾಯುತ್ತಾ ಇರುತ್ತೇವೆ. ಕಾಶಿಯಲ್ಲಿ ಏನಾದರೂ ಬಿಟ್ಟು ಬರಬೇಕು ಎನ್ನುತ್ತಿರುತ್ತೇವೆ. ಇದಕ್ಕೆ ಕಾರಣವೇನು? ಯಾಕೆ ಹೀಗೆ ಮಾಡಲಾಗುತ್ತದೆ? ಇದರ ಆಧ್ಯಾತ್ಮಿಕ ಹಿನ್ನೆಲೆ ಏನು? ಇಷ್ಟವಾದ ಏನನ್ನಾದರೂ ಬಿಡಲು ಕಾಶಿಗೇ ಹೋಗಬೇಕೆ? ಈ ಎಲ್ಲ ಪ್ರಶ್ನೆಗಳು, ಗೊಂದಲಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಣೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.
Latest Videos