AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರಹೊಳೆ ಅಭಯಾರಣ್ಯದಲ್ಲಿ ವಿಹರಿಸಲು ಸಫಾರಿಗೆ ತೆರಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಎದುರಾಯ್ತೊಂದು ಹುಲಿ!

ನಾಗರಹೊಳೆ ಅಭಯಾರಣ್ಯದಲ್ಲಿ ವಿಹರಿಸಲು ಸಫಾರಿಗೆ ತೆರಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಎದುರಾಯ್ತೊಂದು ಹುಲಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 14, 2024 | 10:42 AM

Share

ಪ್ರಾಯಶಃ ವಾಹನದ ಸದ್ದಿಗೆ ಎದ್ದಿರಬಹುದು. ನಿದ್ರೆಗೆ ಭಂಗವಾಗಿದ್ದಕ್ಕೆ ಹುಲಿಗೆ ಕೋಪ ಬಂದಿಲ್ಲ. ಥೂ ನಿಮ್ಮ, ಹಾಯಾಗಿ ಮಲಗೋಕೂ ಬಿಡಲ್ಲ ಅಂತ ಹಿಡಿಶಾಪವಂತೂ ಹುಲಿ ಹಾಕಿರುತ್ತದೆ. ಈಗಷ್ಟೇ ಲೋಕಸಭಾ ಚುನಾವಣೆಯ ಕೆಲಸದಿಂದ ಮುಕ್ತರಾಗಿರುವ ಖಂಡ್ರೆ ರಿಲ್ಯಾಕ್ಸ್ ಮಾಡೋಣ ಅಂತ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಬಂದಿದ್ದರಂತೆ.

ಮೈಸೂರು: ನೀವು ಅರಣ್ಯಕ್ಕೆ ಸಚಿವರಾದರೇನು, ಕಾಡಿಗಂತೂ ನಾನೇ ರಾಜ ಎನ್ನುವಂತಿದೆ ಹುಲಿರಾಯನ (tiger) ವರಸೆ! ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೆಚ್ ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ (Nagarahole Forest Reserve) ಕಬಿನಿ ವ್ಯಾಪ್ತಿಯಲ್ಲಿ ಇಂದು ಸಫಾರಿಗೆಂದು ತೆರಳಿದಾಗ ಹುಲಿ ಕಂಡಿದೆ. ವನ್ಯಜೀವಿ ತನ್ನದೇ ಆದ ಗತ್ತಿನಲ್ಲಿ ಜೀಪಿನ ಎಡಭಾಗದದಿಂದ ಸಚಿವರ ಜೀಪು ಸಾಗುತ್ತಿರುವ ರಸ್ತೆಯ ಕಡೆ ನಡೆದು ಬರುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಾಹನದಲ್ಲಿದ್ದ ಸಿಬ್ಬಂದಿಯೊಬ್ಬರು ಹುಲಿಯ ಚಲನೆಯನ್ನು ಸೆರೆ ಹಿಡಿದಿದ್ದಾರೆ. ನಂತರ ಹುಲಿ ವಾಹನದ ಮುಂದಿನಿಂದ ಬಲಭಾಗದ ಅರಣ್ಯಪ್ರದೇಶಲ್ಲಿ ನಡೆದುಹೋಗುತ್ತದೆ. ಮೂಲಗಳ ಪ್ರಕಾರ ಹುಲಿ ಕಣ್ಣಿಗೆ ಬಿದ್ದಾಗ ಅದು ಮಲಗಿತ್ತಂತೆ. ಪ್ರಾಯಶಃ ವಾಹನದ ಸದ್ದಿಗೆ ಎದ್ದಿರಬಹುದು. ನಿದ್ರೆಗೆ ಭಂಗವಾಗಿದ್ದಕ್ಕೆ ಹುಲಿಗೆ ಕೋಪ ಬಂದಿಲ್ಲ. ಥೂ ನಿಮ್ಮ, ಹಾಯಾಗಿ ಮಲಗೋಕೂ ಬಿಡಲ್ಲ ಅಂತ ಹಿಡಿಶಾಪವಂತೂ ಹುಲಿ ಹಾಕಿರುತ್ತದೆ. ಈಗಷ್ಟೇ ಲೋಕಸಭಾ ಚುನಾವಣೆಯ ಕೆಲಸದಿಂದ ಮುಕ್ತರಾಗಿರುವ ಖಂಡ್ರೆ ರಿಲ್ಯಾಕ್ಸ್ ಮಾಡೋಣ ಅಂತ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಬಂದಿದ್ದರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Viral Video: ಮುದ್ದು ಮರಿಗಳೊಂದಿಗೆ ತಾಯಿ ಹುಲಿಯ ಆಟ; ಕ್ಯಾಮೆರಾದಲ್ಲಿ ಸೆರೆಯಾಯಿತು ಮಮತೆಯ ದೃಶ್ಯ