ನಾಮಪತ್ರ ಸಲ್ಲಿಸುವ ಮೊದಲು ವಾರಣಾಸಿಯ ದಶಾಶ್ವಮೇಧ ಘಾಟ್ ನಲ್ಲಿ ಗಂಗಾಪೂಜೆ ನೆರವೇರಿಸಿದ ಪ್ರಧಾನಿ ಮೋದಿ

ನಾಮಪತ್ರ ಸಲ್ಲಿಸುವ ಮೊದಲು ವಾರಣಾಸಿಯ ದಶಾಶ್ವಮೇಧ ಘಾಟ್ ನಲ್ಲಿ ಗಂಗಾಪೂಜೆ ನೆರವೇರಿಸಿದ ಪ್ರಧಾನಿ ಮೋದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 14, 2024 | 11:27 AM

ನಿನ್ನೆ ಸುಮಾರು 6 ಕಿಮೀ ಉದ್ದ ರೋಡ್ ಶೋನಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11.30 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿಯವರ ಜೊತೆಗೂಡಲಿದ್ದಾರೆ.

ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಇಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ತಮ್ಮ ನಾಮಪತ್ರ (file nomination papers) ಸಲ್ಲಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಅವರು ಮೂರನ ಬಾರಿ ಸ್ಪರ್ಧಿಸುತ್ತಿದ್ದಾರೆ. ಪ್ರತಿಬಾರಿ ನಾಮಪತ್ರ ಸಲ್ಲಿಸುವಾಗಲೂ ಪ್ರಧಾನಿ ಮೋದಿ ದಶಾಶ್ವಮೇಧ ಘಾಟ್ ನಲ್ಲಿ ಗಂಗಾಪೂಜೆ (offer puja to Maa Ganga) ನೆರವೇರಿಸುತ್ತಾರೆ. ಅಂಗರಕ್ಷಕರ ನಡುವೆ ಅವರು ನಿಧಾನವಾಗಿ ಆದರೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಾ ದಶಾಶ್ವಮೇಧ ಘಾಟ್ ನ ಮೆಟ್ಟಿಲುಗಳನ್ನು ಇಳಿಯುತ್ತಾ ಗಂಗೆಯ ತಟಕ್ಕೆ ಬರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪ್ರಧಾನಿಯವರ ಆಗಮನಕ್ಕಾಗಿ ಐವರು ಅರ್ಚಕರು ಅದಾಗಲೇ ಕಾದು ನಿಂತಿದ್ದರು. ಅಲ್ಲಿಗೆ ಬಂದಾಕ್ಷಣ ಪ್ರಧಾನ ಅರ್ಚಕರು ಮೋದಿಯವರ ಹೆಗಲ ಮೇಲೆ ಶಲ್ಯ ಹೊದಿಸಿ ಹಣೆಗೆ ತಿಲಕವನ್ನಿಡುತ್ತಾರೆ. ಗಂಗೆ ಪೂಜೆ ಸಲ್ಲಿಸುವ ಮೊದಲು ಪ್ರಧಾನಿ ಮೋದಿ ಸೂರ್ಯನಿಗೆ ನಮಸ್ಕಾರ ಮಾಡುತ್ತಾರೆ. ಅರ್ಚಕರ ನಿರ್ದೇಶನದ ಮೇರೆಗೆ ಪೂಜಾವಿಧಿಗಳು ನೇರವೇರುತ್ತವೆ. ನಿನ್ನೆ ಸುಮಾರು 6 ಕಿಮೀ ಉದ್ದ ರೋಡ್ ಶೋನಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11.30 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿಯವರ ಜೊತೆಗೂಡಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಧಾನಿ ಮೋದಿಯವರ ಫೋಟೋ ಬಳಸದೆ ಮಗನ ಪರ ಪ್ರಚಾರ ಮಾಡುವಂತೆ ಯಡಿಯೂರಪ್ಪಗೆ ಸವಾಲು ಹಾಕುತ್ತೇನೆ: ಈಶ್ವರಪ್ಪ