ವಾರಾಣಸಿಯಿಂದ 3ನೇ ಬಾರಿಗೆ ಮೋದಿ ಸ್ಪರ್ಧೆ: ನಾಮಪತ್ರ ಸಲ್ಲಿಕೆಗೂ ಮುನ್ನ ಪೂಜೆ, ಇಲ್ಲಿದೆ ನೇರ ಪ್ರಸಾರ

ವಾರಾಣಸಿಯಿಂದ 3ನೇ ಬಾರಿಗೆ ಮೋದಿ ಸ್ಪರ್ಧೆ: ನಾಮಪತ್ರ ಸಲ್ಲಿಕೆಗೂ ಮುನ್ನ ಪೂಜೆ, ಇಲ್ಲಿದೆ ನೇರ ಪ್ರಸಾರ

Ganapathi Sharma
|

Updated on:May 14, 2024 | 10:40 AM

ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಿಂದ 3ನೇ ಬಾರಿಗೆ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದು, ಅದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ ವಾರಾಣಸಿಯ ದಶಾಶ್ವಮೇಧ ಘಾಟ್​​ಗೆ ಪ್ರಧಾನಿ ಮೋದಿ ಭೇಟಿ ನೀಡಿ ಗಂಗಾ ಪೂಜೆ ನೆರವೇರಿಸಿದರು. ಇದೀಗ ವಾರಾಣಸಿಯಲ್ಲಿ ಮೋದಿ ಪೂಜೆ ನೆರವೇರಿಸುತ್ತಿರುವುದರ ನೇರ ಪ್ರಸಾರ ಇಲ್ಲಿದೆ.

ವಾರಾಣಸಿ, ಮೇ 14: ಪ್ರಧಾನಿ ನರೇಂದ್ರ ಮೋದಿ (Narendra Modi) ವಾರಾಣಸಿಯಿಂದ 3ನೇ ಬಾರಿಗೆ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದಾರೆ. ಅದಕ್ಕೂ ಮುನ್ನ ಸೋಮವಾರ ವಾರಾಣಸಿಯಲ್ಲಿ ರೋಡ್​ ಶೋ ನಡೆಸಿದ್ದ ಮೋದಿ ನಂತರ ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿದ್ದರು. ಇದೀಗ ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಪೂಜೆ ಸಲ್ಲಿಸುತ್ತಿದ್ದಾರೆ. ಮೋದಿ ಪೂಜೆ ಸಲ್ಲಿಸುತ್ತಿರುವ ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿದೆ.

ವಾರಾಣಸಿಯ ದಶಾಶ್ವಮೇಧ ಘಾಟ್​​ಗೆ ಪ್ರಧಾನಿ ಮೋದಿ ಭೇಟಿ ನೀಡಿ ಗಂಗಾ ಪೂಜೆ ನೆರವೇರಿಸಿದರು.

ಬೆಳಗ್ಗೆ 10.15ಕ್ಕೆ ಕಾಲಭೈರವನ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಎನ್​ಡಿಎ ಪ್ರಮುಖರ ಜತೆ ಸಭೆ ನಡೆಸಲಿದ್ದಾರೆ. ನಂತರ 11.40ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಮಧ್ಯಾಹ್ನ 12.15ಕ್ಕೆ ಕಾರ್ಯಕರ್ತರ ಜತೆ ಮೋದಿ ಸಭೆ ನಡೆಸಲಿದ್ದಾರೆ. ನಂತರ ಜಾರ್ಖಂಡ್​ಗೆ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ: ರೋಡ್ ಶೋ ಬಳಿಕ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಗಂಗಾ ಸಪ್ತಮಿಯಂದೇ ಮೋದಿ ಗಂಗಾ ಮಾತೆಯನ್ನು ಪೂಜಿಸಿದರು. ಗಂಗಾ ಸಪ್ತಮಿಯನ್ನು ಗಂಗೆಯು ಧರೆಗವತರಿಸಿದ ದಿನವೆಂದು ಪರಿಗಣಿಸಲಾಗಿದೆ. ಈ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ, ಆದ್ದರಿಂದ ಇದೇ ಸಂದರ್ಭದಲ್ಲಿ ಗಂಗಾ ಮಾತೆಯನ್ನು  ಪ್ರಧಾನಿ ಪೂಜಿಸಿದರು. ದಶಾಶ್ವಮೇಧ ಘಾಟ್‌ನಿಂದ ನಮೋ ಘಾಟ್ ಕಡೆಗೆ ತೆರಳುತ್ತಿರುವ ಪ್ರಧಾನಿ ಅಲ್ಲಿಯೂ ಪೂಜೆ ಸಲ್ಲಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 14, 2024 10:30 AM